ಸುದ್ದಿಒನ್, ಹೊಳಲ್ಕೆರೆ, ಆಗಸ್ಟ್. 13 : ‘ಕಷ್ಟ ಪಟ್ಟು ಓದಿ ಪರೀಕ್ಷೆಯನ್ನು ಸಮರ್ಥವಾಗಿ ಎದುರಿಸಿ. ಪರೀಕ್ಷೆ ಬಗ್ಗೆ ಭಯ ಬೇಡ ಹಬ್ಬದಂತೆ ಸಂಭ್ರಮಿಸಿ’ ಎಂದು ಸಂಪನ್ಮೂಲ ವ್ಯಕ್ತಿ ಹಾಗೂ ವ್ಯಕ್ತಿತ್ವ ವಿಕಸನ ತರಬೇತುದಾರರಾದ ಆರ್. ಎ. ಚೇತನ್ ರಾವ್ ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.
ತಾಲೂಕಿನ ಸ್ನೇಹ ಪಬ್ಲಿಕ್ ಸ್ಕೂಲ್ ನಲ್ಲಿ ವಿದ್ಯಾರ್ಥಿಗಳಿಗೆ ಪರೀಕ್ಷೆ ಹಾಗೂ ಶಿಕ್ಷಣದ ಬಗ್ಗೆ ತಿಳಿಸಿದರು. ಪ್ರೇರಣಗುರು ಶಿಕ್ಷಣ ತಜ್ಞರಾದ ಇವರು ಶಿಕ್ಷಕರು, ಮಕ್ಕಳನ್ನು ಕುರಿತಂತೆ ಪರೀಕ್ಷೆ ಒಂದು ಅನಿವಾರ್ಯ ಸ್ಥಿತಿ, ಪರೀಕ್ಷೆ ಎಂದರೆ ನಮ್ಮ ಜ್ಞಾನ ಕುಶಲತೆ ಮನೋಭಾವ ಮತ್ತು ಪರಿಸರದ ಬೆಂಬಲ ಎಲ್ಲವೂ ಸೇರಿ ಯಶಸ್ಸಿನ ಎಡೆಗೆ ನಮ್ಮನ್ನು ಕರೆದೊಯ್ಯುವ ಅನುಭವ ಎನ್ನುವ ಮೂಲಕ ಪರೀಕ್ಷೆ ಒಂದು ಹಬ್ಬ ಅದನ್ನು ಸಂಭ್ರಮಿಸಬೇಕು ಎಂದು ತಿಳಿಸಿದರು.
ದಡ್ಡ ವಿದ್ಯಾರ್ಥಿ ಹುಟ್ಟಿಯೇ ಇಲ್ಲ’ ಸರಿ-ನಿಯಮ, ಸರಿ-ಸಮಯ ಪಾಲಿಸಿದರೆ ಯಾರು ಬೇಕಾದರೂ ಓದಬಹುದು, ಅಂಕ ಗಳಿಸಬಹುದು, ಓದುವ ಉತ್ಸಾಹ ಅಧ್ಯಯನ ಸೂತ್ರಗಳು ಏಕೆ ಓದಬೇಕು? ಏನು? ಎಷ್ಟು? ಹೇಗೆ ಬರೆಯಬೇಕು, ಏಕಾಗ್ರತೆ ನೆನಪು ನಿರಂತರ ಶ್ರಮ ಮೆದುಳಿನ ನಿರ್ವಹಣಾ ತಂತ್ರ ಒತ್ತಡ ಸಮಯ ಆರೋಗ್ಯ ಈ ಎಲ್ಲಾ ನಿರ್ವಹಣೆ ಹೇಗೆ ಮಾಡಬೇಕೆಂಬುದನ್ನು ಸರಳವಾಗಿ ಮಕ್ಕಳಿಗೆ ತಿಳಿಸಿದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷರಾದ ಮಂಜುನಾಥ್ ಜೆ. ಎಸ್., ಕಾರ್ಯದರ್ಶಿಗಳಾದ ವಸಂತ್ ಜೆ ಎಸ್, ಸಲಹಾಗಾರರಾದ ಶ್ರೀಮತಿ ಛಾಯಾ ಮಂಜುನಾಥ್, ಪ್ರಾಂಶುಪಾಲರಾದ ವೇಣುಗೋಪಾಲ್ ಜಿ ಸಿ, ಶಿಕ್ಷಕರು ಹಾಗೂ ಮಕ್ಕಳು ಉಪಸ್ಥಿತರಿದ್ದರು.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.











