ಮೈಸೂರು: ಕಾಂಗ್ರೆಸ್ ನಲ್ಲಿ ಸೆಪ್ಟೆಂಬರ್ ಕ್ರಾಂತಿ ಇನ್ನು ಕೂಡ ಸದ್ದು ಮಾಡ್ತಿದೆ. ಈಗಾಗಲೇ ಹೈಕಮಾಂಡ್ ಮಟ್ಟದಲ್ಲಿ ಚರ್ಚೆಯಾಗ್ತಾ ಇದೆ. ಡಿಕೆ ಶಿವಕುಮಾರ್ ಸಿಎಂ ಆಗುವ ಬಗ್ಗೆ ಇದೀಗ ಸಚಿವ ರಾಮಲಿಂಗಾ ರೆಡ್ಡಿ ಅವರು ಮಾತನಾಡಿದ್ದಾರೆ.
ಯಾವ ಕ್ರಾಂತಿಯೂ ಇಲ್ಲ. ಎಲ್ಲಾ ಕ್ರಾಂತಿಗೂ ಮೊನ್ನೆ ಮುಖ್ಯಮಂತ್ರಿಗಳು ಫುಲ್ ಸ್ಟಾಪ್ ಹಾಕಿದ್ದಾರೆ. ನಮ್ಮ ಉಪಮುಖ್ಯಮಂತ್ರಿಗಳು ಕೂಡ ಪಕ್ಷ ಏನು ಹೇಳುತ್ತೋ ಅದನ್ನ ಮಾಡ್ತೀನಿ ಅಂತ ಹೇಳಿದ್ದಾರೆ. ಯಾವ ಕ್ರಾಂತಿಯೂ ಇಲ್ಲ ಏನು ಇಲ್ಲ. ಇನ್ಮೇಲೆ ಪಕ್ಷದ ಮುಖಂಡರು, ಅವರು ಮಂತ್ರಿಗಳಾಗಿರಬಹುದು, ಶಾಸಕರಾಗಿರಬಹುದು ಅಥವಾ ಮುಖಂಡರಿರಬಹುದು ಅವರ್ಯಾರು ಕೂಡ ಈ ಬಗ್ಗೆ ಮಾತಾಡದೆ ಇದ್ದರೆ ನಮ್ಮಪಕ್ಷಕ್ಕೆ ಒಳ್ಳೆಯದು ಎಂದಿದ್ದಾರೆ.
ಇದೇ ವೇಳೆ ಭೂಸ್ವಾಧೀನದ ಬಗ್ಗೆ ಮಾತನಾಡಿದ ರಾಮಲಿಂಗಾ ರೆಡ್ಡಿ ಅವರು, ಅದರ ಬಗ್ಗೆ ಮುಖ್ಯಮಂತ್ರಿಗಳು ರೈತರನ್ನೆಲ್ಲಾ ಕರೆದು ಮಾತನಾಡಿದ್ದಾರೆ. ತೀರ್ಮಾನ ತೆಗೆದುಕೊಳ್ಳುತ್ತಾರೆ. ಅದು ನನ್ನ ಇಲಾಖೆಗೆ ಬರಲ್ಲ. ಮಾನ್ಯ ಮುಖ್ಯಮಂತ್ರಿಗಳು, ಎಂಬಿ ಪಾಟೀಲ್ ಅವರು ರೈತರ ಜೊತೆಗೆ ಮಾತನಾಡಿದ್ದಾರೆ ಎಂದಿದ್ದಾರೆ.
ಇದೇ ವೇಳೆ ಸುರ್ಜೆವಾಲ ಅವರ ಜೊತೆಗಿನ ಸಭೆ ಬಗ್ಗೆ ಮಾತನಾಡಿ, ಸುರ್ಜೆವಾಲ ಅವರು ಶಾಸಕರ ಜೊತೆಗೆ ಏನು ಮಾತನಾಡಿಕೊಂಡಿದ್ದಾರೋ ಏನೋ ನಮಗೇಗೆ ಗೊತ್ತಾಗುತ್ತೆ. ನಮಗೆ ಗೊತ್ತಾಗಲಿಲ್ಲ ಅಂದ್ರೆ ನಿಮಗೇಗೆ ಗೊತ್ತಾಗುತ್ತೆ. ಶಿವಕುಮಾರ್ ಅವರು ಹುಟ್ಟು ಕಾಂಗ್ರೆಸ್. ಅವರು ಪಕ್ಷದ ನಿಷ್ಠಾವಂತರು. ಪಕ್ಷ ಏನು ಜವಾಬ್ದಾರಿ ಕೊಟ್ಟಿದೆ ಅದನ್ನ ಅವರು ಮಾಡಿಕೊಟ್ಟವರೆ. ಒಂದೇ ಸಲ ಸಿಕ್ಕಿಬಿಡುತ್ತಾ..? ಒಬ್ಬೊಬ್ಬರಿಗೆ ಒಂದೊಂದು ಸಲ ಸಿಗುತ್ತೆ. ಕಾಂಗ್ರೆಸ್ ಸಮುದ್ರ ಇದ್ದಂಗೆ. ಅವರೊಬ್ಬರ ಜನಪ್ರಿಯ ನಾಯಕರಾಗಿದ್ದರು. ಸಿದ್ದರಾಮಯ್ಯ ಅವರು ಒಳ್ಳೆಯದ್ದನ್ನ ಮಾಡಿದ್ದಾರಾ ಇಲ್ವಾ..? ಡೆಲ್ಲಿಯಲ್ಲಿ ನಾಲ್ಕು ಗೋಡೆಗಳ ನಡುವೆ ಏನು ಆಗಿದ್ಯೋ ನನಗೆ ಗೊತ್ತಿಲ್ಲ ಎಂದಿದ್ದಾರೆ.










