Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಡಿಕೆ ಸುರೇಶ್ ಗೆ ಉರುಳಾಗುತ್ತಾ ನಕಲಿ ತಂಗಿಯ ವಂಚನೆ ಕೇಸ್..?

---Advertisement---

ಬೆಂಗಳೂರು; ಡಿಕೆ ಸುರೇಶ್ ಅವರ ತಂಗಿ ಅಂತ ಹೇಳಿಕೊಂಡು ಐಶ್ವರ್ಯಾ ಗೌಡ ಕೋಟಿ ಕೋಟಿ ವಂಚನೆಯನ್ನ ಮಾಡಿದ್ದರು. ಈ ಸಂಬಂಧ ಕಳೆದ ಕೆಲವು ದಿನಗಳ ಹಿಂದೆ ಇಡಿ ಅಧಿಕಾರಿಗಳು ಡಿಕೆ ಸುರೇಶ್ ಅವರಿಗೂ ನೋಟೀಸ್ ಅನ್ನು ಜಾರಿ ಮಾಡಿದ್ದರು. ನೋಟೀಸ್ ಹಿನ್ನೆಲೆ ಇಂದು ವಿಚಾರಣೆಗೆ ಹಾಜರಾಗಿದ್ದಾರೆ. ಈ ಮೂಲಕ ನಕಲಿ ತಂಗಿಯಿಂದ ಸಂಕಷ್ಟ ಎದುರಾಗುತ್ತಾ ಎಂಬ ಪ್ರಶ್ನೆ ಕಾಡಿದೆ.

ವಿಚಾರಣೆಗೆ ಬಂದ ಮಾಜಿ ಸಂಸದ ಡಿಕೆ ಸುರೇಶ್ ಮಾತನಾಡಿ, ಇಡಿ ನೋಟೀಸ್ ಜಾರಿ ಮಾಡಿದೆ. ಹೀಗಾಗಿ ಇವತ್ಯು ಸಮಯಕ್ಕೆ ಸರಿಯಾಗಿ ಹೋಗಬೇಕು ಅಂತ ಬಂದೆ. ಕೆಲವು ಮಾಹಿತಿಗಳನ್ನು ಕೇಳಿದ್ದರು. ವಕೀಲರ ಮೂಲಕ ಮಾಹಿತಿಯನ್ನ ತೆಗೆದುಕೊಂಡು ಅವರ ಕಚೇರಿಗೆ ಬಂದಿದ್ದೇನೆ. ವಿಚಾರಣೆಗೆ ಹಾಜರಾಗುತ್ತೇನೆ. ವಿಷಯಕ್ಕೆ ಸಂಬಂಧವಿಲ್ಲದೆ ಇರುವುದು. ನೋಟೀಸ್ ಕೊಟ್ಟಿದ್ದಾರೆ ಎಂಬುದು ನಂಗೆ ಅರ್ಥ ಆಗ್ತಾ ಇಲ್ಲ. ಯಾರೋ ಮೌಖಿಕವಾಗಿ ಹೇಳಿ, ಸಹೋದರಿ ಅಂತ ಮೋಸ ಮಾಡಿರುವುದಕ್ಕೆ ನಾನೇನು ಹೇಳಲಿ. ಪೊಲೀಸ್ ಕಮಿಷನರ್ ಗೆ ಈ ಸಂಬಂಧ ದೂರು ಕೂಡ‌ ನೀಡಿದ್ದೆ.

ಅವರು ಮಾಡಿರುವ ವಂಚನೆ ಪ್ರಕರಣಕ್ಕೂ ನನಗೂ ಯಾವುದೇ ವಿಚಾರದಲ್ಲೂ ಸಂಬಂಧವಿಲ್ಲ. ಹಾಗಾಗಿ ಯಾತಕ್ಕೆ ನೋಟೀಸ್ ಕೊಟ್ಟಿದ್ದಾರೆ ಅನ್ನೋದು ನನಗೆ ಗೊತ್ತಿಲ್ಲ. ವಿಚಾರಣೆಗೆ ಸಂಪೂರ್ಣವಾದ ಸಹಕಾರವನ್ನ ನೀಡ್ತೇನೆ. ವಿಚಾರಣೆಗೆ ಹಾಜರಾದ‌ ಮೇಲೆ ಇದೇನು ಷಡ್ಯಂತ್ರವಾ ಏನು ಅನ್ನೋದು ಗೊತ್ತಾಗುತ್ತೆ. ನನಗಾಗಲೀ, ಆ ಯಮ್ಮನಿಗಾಗಲಿ ಯಾವುದೇ ವಿಧವಾದ ಹಣಕಾಸು ವ್ಯವಹಾರ ಇಲ್ಲ. ಮೂರ್ನಾಲ್ಕು ಬಾರಿ ಕಚೇರಿಯಲ್ಲಿ ಭೇಟಿ ಮಾಡಿದ್ದಾರೆ. ಈ ರೀತಿಯಾದ ವ್ಯವಹಾರಕ್ಕೂ ನನಗೂ ಸಂಬಂಧವಿಲ್ಲ ಎಂದಿದ್ದಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment