ರಾಮನಗರ: ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಸಿಎಂ ಬದಲಾವಣೆಯ ವಿಚಾರವೇ ಸಾಕಷ್ಟು ಚರ್ಚೆ ಆಗ್ತಾ ಇದೆ. ಇತ್ತೀಚೆಗೆ ಸಿಎಂ ಬದಲಾವಣೆ ವಿಚಾರ ಜೋರಾಗಿಯೇ ಇದೆ. ಬಿಜೆಪಿ ನಾಯಕರು ಕೂಡ ಈ ಬಾರಿಯ ದಸರಾ ವೇಳೆಗೆ ಸಿಎಂ ಬದಲಾಗ್ತಾರೆ. ಹೊಸ ಮುಖ್ಯಮಂತ್ರಿಯೇ ದಸರಾ ಉದ್ಘಾಟನೆ ಮಾಡುವುದು ಎಂದಿದ್ದಾರೆ. ಈ ರೀತಿಯ ಬೆಳವಣಿಗೆಯ ನಡುವೆ ಇದೀಗ ರಾಮನಗರದ ಕಾಂಗ್ರೆಸ್ ಶಾಸಕ ಇಕ್ಬಾಲ್ ಹುಸೇನ್ ಅವರು ಡಿಕೆ ಶಿವಕುಮಾರ್ ಅವರ ಪರ ಬ್ಯಾಟ್ ಬೀಸಿದ್ದಾರೆ.
ರಾಜಕಾರಣದಲ್ಲಿ ಬದಲಾವಣೆ ಸಹಜ. ಯಾರಿಗೆ ಸೂಕ್ತ ಎನಿಸುತ್ತದೆಯೋ ಅವರಿಗೆ ಅಧಿಕಾರ ಸಿಗಲಿದೆ. ಬದಲಾವಣೆ ಕೇಳ್ತಿದ್ದಾರೆ. ಬದಲಾವಣೆ ಆಗಲಿದೆ. ಮುಂದಿನ ಎರಡ್ಮೂರು ತಿಂಗಳಲ್ಲಿ ಎಲ್ಲವೂ ತೀರ್ಮಾನವಾಗಲಿದೆ. ಇದೆ ವೇಳೆ ರಾಜಣ್ಣನವರ ಕ್ರಾಂತಿ ಬಗ್ಗೆ ಮಾತನಾಡಿದ ಇಕ್ಬಾಲ್ ಅವರು, ಕ್ರಾಂತಿ ಅಂದ್ರೆ ಮಳೆ ಜೋರಾಗಿ ಬರ್ತಿದೆ. ಸೇತುವೆ ಕೊಚ್ಚಿಕೊಂಡು ಹೋಗ್ತಿದೆ ಅಂತ ಅರ್ಥನಾ..? ಕಾಂಗ್ರೆಸ್ ನಲ್ಲಿ ಶಿಸ್ತು, ಬದ್ಧತೆ ಇದೆ. ಯಾವ ಪವರ್ ಸೆಂಟರ್ ಕೂಡ ಇಲ್ಲ. ಹೈಕಮಾಂಡ್ ಒಂದೇ ಎಂದಿದ್ದಾರೆ.
ಇವರೆಲ್ಲಾ ಕ್ರಾಂತಿ ಅಂತಿದ್ದಾರಲ್ಲ, ಅದೇ ಆಗೋದು. ಮುಂದಿನ ಎರಡ್ಮೂರು ತಿಂಗಳಲ್ಲಿ ಎಲ್ಲವೂ ತೀರ್ಮಾನವಾಗಲಿದೆ. ಡಿಕೆ ಶಿವಕುಮಾರ್ ಕಾರ್ಯಕ್ರಮಗಳು ಐತಿಹಾಸಿಕ, ಇದು ಹೈಕಮಾಂಡ್ ಗಮನದಲ್ಲಿದೆ. ಸೂಕ್ತ ಸಮಯಕ್ಕೆ ಅವಕಾಶ ಮಾಡಿಕೊಡ್ತಾರೆ. ಆ ನಂಬಿಕೆ, ವಿಶ್ವಾಸ ನಮಗಿದೆ. ರಾಜಕೀಯದಲ್ಲಿ ಬದಲಾವಣೆ ಸಹಜ. ಸೂಕ್ತ ವ್ಯಕ್ತಿಗೆ ಅಧಿಕಾರ ಸಿಗಲಿದೆ. ಈ ಸರ್ಕಾರ ಬರುವುದಕ್ಕೂ ಮುಂಚೆ ನಮ್ಮ ಸಂಖ್ಯೆ ಎಷ್ಟಿತ್ತು. ಈ ಸಂಖ್ಯೆ ಬರುವುದಕ್ಕೆ ಹೋರಾಟ, ಶ್ರಮ, ಆಸಕ್ತಿ ಯಾರದ್ದು ಎಂದು ಎಲ್ಲರಿಗೂ ಗೊತ್ತು ಎಂದು ಹೇಳುವ ಮೂಲಕ ಡಿಕೆ ಶಿವಕುಮಾರ್ ಪರವಾಗಿ ಬ್ಯಾಟ್ ಬೀಸಿದ್ದಾರೆ.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.











