Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಫೆಬ್ರವರಿ 04 ರಂದು ಚಿತ್ರದುರ್ಗದ ಪರಿಸರ ಸಮಸ್ಯೆಗಳ ಬಗ್ಗೆ ಸಂವಾದ

Facebook
Twitter
Telegram
WhatsApp

 

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817

ಸುದ್ದಿಒನ್, ಚಿತ್ರದುರ್ಗ ಫೆ. 01 : ಏರುತ್ತಿರುವ ತಾಪಮಾನ ಹಾಗೂ ಹವಮಾನದಲ್ಲಾಗುತ್ತಿರುವ ಬದಲಾವಣೆಯ ತೀವ್ರತೆಯ ಬಗ್ಗೆ ಮತ್ತು ಚಿತ್ರದುರ್ಗದ ಪರಿಸರ ಸಮಸ್ಯೆಗಳ ಬಗ್ಗೆ ರಾಜ್ಯ ಮಟ್ಟದ ಪರಿಸರ ಜಾಗೃತಿ ಸಮಾವೇಶ ಮತ್ತು ಸಂವಾದ ಕಾರ್ಯಕ್ರಮವೂ ಫೆ. 4 ರಂದು ನಗರದ ಕ್ರೀಡಾ ಭವನದಲ್ಲಿ ಬೆಳಿಗ್ಗೆ 10 ರಿಂದ ಹಮ್ಮಿಕೊಳ್ಳಲಾಗಿದೆ ಎಂದು ಸಂಘಟಕರಾದ ಅವಿನಾಶ್ ತಿಳಿಸಿದರು.

ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಶಿವಸುಂದರ್ ರವರು ತಾಪಮಾನ ಏರಿಕೆಯನ್ನು ಕಮ್ಮಿ ಮಾಡಲು ಜಾಗತಿಕ ಮಟ್ಟದಲ್ಲಿ ತೆಗೆದುಕೊಂಡ ನಿರ್ಣಯಗಳು ಹಾಗೂ ಇಂದಿನ ಸ್ಥಿತಿಗತಿಯ ಬಗ್ಗೆ ಮತ್ತು ಯಲ್ಲಪ್ಪರೆಡ್ಡಿಯವರು ತಾಪಮಾನ ಏರಿಕೆಯಿಂದ ಜೀವಸಂಕುಲ ಗಾಳಿ, ನೀರು ಮತ್ತು ಆಹಾರದ ಮೇಲಾಗುತ್ತಿರುವ ದುಷ್ಪರಿಣಾಮಗಳ ಬಗ್ಗೆ ಸಮಾವೇಶದಲ್ಲಿ ಮಾತನಾಡಲಿದ್ದಾರೆ ಎಂದರು.

ಯಾದವ ರೆಡ್ಡಿ ಮಾತನಾಡಿ, ಕಳೆದ 50-60 ವರ್ಷಗಳಿಂದ ಈಚೆಗೆ ಜಾಗತಿಕವಾಗಿ ಬರುತ್ತಿರುವ ತಾಪಮಾನ ಹಾಗೂ ಹವಾಮಾನದಲ್ಲಿ ಆಗುತ್ತಿರುವ ಬದಲಾವಣೆಯಿಂದ ಮಣ್ಣು, ಗಾಳಿ, ನೀರು, ವಾತಾವರಣ ಎಲ್ಲವೂ ಬಿಸಿಯಾಗುತ್ತಿದೆ. ಹಾಗೂ ಕೆಲವು ಅನಿಲಗಳಿಂದ, ಆಮ್ಲಗಳಿಂದ, ಧೂಳಿನ ಕಣಗಳಿಂದ, ರಾಸಾಯನಿಕಗಳಿಂದ ಕಲಿಷಿತಗೊಂಡಿವೆ. ಅತಿವೃಷ್ಟಿ-ಅನಾವೃಷ್ಟಿಗಳು ಒಕ್ಕೊಟ್ಟಿಗೆ ಸಂಭವಿಸುತ್ತಿವೆ, ಬಿಸಿ ಅಲೆಗಳ ಪ್ರಮಾಣ ಹೆಚ್ಚಾಗಿದೆ. ಸೈಕ್ಲೋನ್‍ಗಳ ಹಾವಳಿ ಹೆಚ್ಚಾಗಿದೆ. ಕಾಡು ಬೆಂಕಿಗೆ ಆಹುತಿಯಾಗುತ್ತಿದೆ. ಸಮುದ್ರದಲ್ಲಿ ಆಮ್ಮಿಯತೆ ಹೆಚ್ಚಾಗಿದೆ, ಹಿಮಪರ್ವತಗಳು ಕರಗುತ್ತಿವೆ.

ಲಂಡನ್, ನವದೆಹಲಿ, ಕರ್ನಾಟಕ ಮೂಲದ ವಿವಿಧ ತಜ್ಞರು 14 ವರ್ಷಗಳ ಕಾಲ ಅಧ್ಯಯನ ನಡೆಸಿ ಸಿದ್ದ ಪಡಿಸಿರುವ “ಕರ್ನಾಟಕದಲ್ಲಿ ಎಂಬ ವರದಿಯಲ್ಲಿ ಜಾಗತಿಕವಾಗಿ ಏರುತ್ತಿರುವ ತಾಪಮಾನದಿಂದ ಮತ್ತು ಹವಾಮಾನದಲ್ಲಾಗುತ್ತಿರುವ ಬದಲಾವಣೆಯಿಂದ ಭಾರತ ದೇಶ, ಅದರಲ್ಲೂ ಕರ್ನಾಟಕ ರಾಜ್ಯದಲ್ಲಿ ಬಾರಿ ನಷ್ಟ ಉಂಟಾಗಲಿದೆ ಎಂದು ಎಚ್ಚರಿಸಿದ್ದಾರೆ.

ಜೊತೆಗೆ ಮನುಷ್ಯರ ಆರೋಗ್ಯದ ಮೇಲೆ ಅನೇಕ ಪರಿಣಾಮಗಳನ್ನು ಬೀರುತ್ತಿದ್ದು ಜೀವವೈವಿಧ್ಯತೆ ನಶಿಸುತ್ತಿದೆ. ಕೃಷಿಯಲ್ಲಿ ಇಳುವರಿಯ ಮೇಲೆ ದುಷ್ಪರಿಣಾಮ ಬೀರುತ್ತಿದ್ದು, ಮುಂದಿನ ದಿನಗಳಲ್ಲಿ ಕರ್ನಾಟಕದ 68 ಪ್ರತಿಶತದಷ್ಟು ಕೃಷಿ ಭೂಮಿ ನೀರಿಲ್ಲದೆ, ಅಕಾಲಿಕ ಬರಕ್ಕೆ ತುತ್ತಾಗಿ ಬಂಜರಾಗುವ ಎಲ್ಲಾ ಲಕ್ಷಣಗಳು ಗೊಡರಿಸುತ್ತಿದೆ ಎಂದು ತಜ್ಞರು ತಿಳಿಸಿದ್ದಾರೆ ಎಂದರು.

ದೊಡ್ಡಮಲ್ಲಯ್ಯ ಮಾತನಾಡಿ,ಈ ಹವಾಮಾನ ಬದಲಾವಣೆಯಿಂದ ಪ್ರಪಂಚದಾತ್ಯಂತ ಪ್ರತಿವರ್ಷವೂ ಸುಮಾರು 1.5 ಲಕ್ಷ ಜನರು ಸಾವನ್ನಪ್ಪುತ್ತಿದ್ದಾರೆ ಹಾಗೂ ಪ್ರತಿವರ್ಷವೂ ಸರಿಸುಮಾರು 300-400 ಲಕ್ಷ ಕೋಟಿಯಷ್ಟು ಆರ್ಥಿಕ ಹೊರೆ ಜಗತ್ತಿಗೆ ಆಗುತ್ತಿದೆ ಎಂದು ವಿಶ್ವಸಂಸ್ಥೆಯ ವರದಿ ಮಾಡಿದೆ.

ಮತ್ತು 2030-2050 ರ ಮಧ್ಯೆ ಬಿಸಿಗಾಳಿ, ಅತಿವೃಷ್ಟಿ-ಅನಾವೃಷ್ಟಿ, ಬಿಸಿಲಿನ ತೀವ್ರತೆಯಂತಹ ಹಲವು ಕಾರಣಗಳಿಂದ ಹಾಗೂ ಅಪೌಷ್ಟಿಕತೆ ಮತ್ತು ಸಾಕ್ರಮಿಕ ರೋಗಗಳಿಂದ ಪ್ರತಿವರ್ಷವೂ 2.5 ರಿಂದ 3 ಲಕ್ಷ ಜನರು ಸಾವನ್ನಪ್ಪಬಹುದು ಹಾಗೂ ಪ್ರತಿವರ್ಷವೂ ಸರಿಸುಮಾರು 500 ಲಕ್ಷ ಕೋಟಿಗೂ ಅಧಿಕ ಪ್ರಮಾಣದಲ್ಲಿ ಆರ್ಥಿಕ ಹೊರೆಯಾಗಬಹುದು ಎಂದು ತನ್ನ ಅಂತಕವನ್ನು ಹೊರಹಾಕಿದೆ ಮತ್ತೊಂದು ಆಘಾತಕಾರಿ ಸಂಗತಿ ಎಂದರೆ ನಮ್ಮ ಜೊತೆಯೇ ಜೀವಿಸುತ್ತಿದ್ದ ಸುಮಾರು 42,100 ವಿವಿಧ ಪ್ರಭೇದದ ಜೀವಸಂಕುಲವೂ ನಶಿಸಿದೆ ಎಂದು ಐಪಿಸಿಸಿ ವರದಿ ಹೇಳುತ್ತದೆ. ಇದರಲ್ಲಿ ನದಿಗಳು, ಕೆರೆಕಟ್ಟೆಗಳು ಮುಂತಾದ ಸಿಹಿನೀರಿನ ಪ್ರದೇಶಗಳಲ್ಲಿ ವಾಸಿಸುವ ಜೀವಿಸುವಗಳು ಸುಮಾರು 83 ಪ್ರತಿಶತದಷ್ಟು ಹಾಗೂ ಹಾವು, ಬೆಕ್ಕು, ಇಲಿ, ಹೆಗ್ಗಣ, ಇರುವೆ, ಕಪ್ಪೆ, 38 ಕರಡಿ, ಹಿಮಕರಡಿಯಂತಾದ ಸುಮಾರು 36 ಪ್ರತಿಶತದಷ್ಟು ನಶಿಸಿವೆ ಎಂದು ವರದಿ ಹೇಳುತ್ತದೆ ಎಂದರು.

ಆದರೆ ನಮ್ಮ ರ್ದೌಭಾಗ್ಯ ಎನ್ನುವಂತೆ ಇಂತಹ ಹಲವಾರು ವರದಿಗಳು ಕಾಗದದಲ್ಲಿ ಬದ್ರವಾಗಿವೆ ಕಾರ್ಯರೂಪಕ್ಕೆ ಬರುವ ಯಾವುದೇ ಲಕ್ಷಣಗಳು ಕಾಣುತ್ತಿಲ್ಲ. ಏಕೆಂದರೆ ಕಾರ್ಖಾನೆಗಳಿಗೆ ನಿರ್ಭಂದನೆ ಹಾಕಲಾಗಿಲ್ಲ, ಕಾಡನ್ನು ಸಂರಕ್ಷಿಸುತ್ತಿಲ್ಲ. ವಾಹನಗಳಿಗೆ ಕಡಿವಾಣ ಹಾಕುತ್ತಿಲ್ಲ. ಕಲ್ಲಿದ್ದಲ ಬಳಕೆಯನ್ನು ನಿಲ್ಲಿಸಲಾಗುತ್ತಿಲ್ಲ, ಸೌರ ಶಕ್ತಿಯನ್ನು ಸಂಪೂರ್ಣವಾಗಿ ಬಳಕೆ ಮಾಡಿಕೊಳ್ಳುತ್ತಿಲ್ಲ. ರಾಸಾಯನಿಕ ಮತ್ತ ಕೃಷಿ ಪದ್ಧತಿಯ ಬಗ್ಗೆ ಒಲವೂ ತೋರಿಸುತ್ತಿಲ್ಲ. ಕನಿಷ್ಟ ಪಕ್ಷ ಪರ್ಯಾಯ ವ್ಯವಸ್ಥೆಗಳ ಬಗ್ಗೆ ಚರ್ಚೆ, ಸಂವಾದವನ್ನು ಕನಿಷ್ಟ ಪಕ್ಷ ವಿಜ್ಞಾನಿಗಳು, ತಜ್ಞರ ಮಾತುಗಳನ್ನು ಆಲಿಸುತ್ತಿಲ್ಲ.

ಈಗಲಾದರೂ ವಯಕ್ತಿಕವಾಗಿ ನಾವು, ಆದಿಕಾರಿ ವರ್ಗ, ಜನಪ್ರತಿನಿಧಿಗಳು, ಸರ್ಕಾರಗಳು ಎಚ್ಚೆತ್ತುಕೊಳ್ಳಬೇಕಾಗಿದೆ. ಪ್ರಕೃತಿ-ಪರಿಸರದ ಸಂರಕ್ಷಣೆಗೆ ಪೂರಕವಾದ ಕಾನೂಗಳನ್ನು ಇನ್ನಷ್ಟು ಕಠಿಣಗೊಳಿಸಬೇಕು ಹಾಗೂ ನಾವದನ್ನು ನಿಷ್ಠೆಯಿಂದ ಪಾಲಿಸಬೇಕು. ಆಗಷ್ಟೇ ನಮ್ಮನ್ನು ಸಾವಿನ ಕೂಪಕ್ಕೆ ನೂಕುತ್ತಿರುವ ಆ ಶಾಖವರ್ಧಕ ಅನಿಲಗಳ ಉತ್ಪಾದನಾ ಪ್ರಮಾಣವನ್ನು ಗಣನೀಯವಾಗಿ ಕಡಿಮೆ ಮಾಡಲು ಸಾಧ್ಯವಿದೆ ಎಂದರು.

ಗೋಷ್ಟಿಯಲ್ಲಿ ಷಫಿವುಲ್ಲಾ, ಧನಂಜಯ, ಸಿದ್ದರಾಜು ಜೋಗಿ, ದಾಸೇಗೌಡ, ಹೊಳೆಯಪ್ಪ, ಮಹಾಂತೇಶ್ ಸೇರಿದಂತೆ ಇತರರು ಭಾಗವಹಿಸಿದ್ದರು.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಕೇಸ್ : ಡಿಕೆ ಶಿವಕುಮಾರ್ ರುವಾರಿ.. ವೈರಲ್ ಆದ ವಿಡಿಯೋಗಳ ನನ್ನ ಪೆನ್ ಡ್ರೈವ್ ನಲ್ಲಿ ಇರೋದಲ್ಲ ಎಂದ ದೇವರಾಜೇಗೌಡ..!

ಕಳೆದ ಕೆಲವು ದಿನಗಳಿಂದ ಪ್ರಜ್ವಲ್ ರೇವಣ್ಣ ಅವರ ಅಶ್ಲೀಲ ವಿಡಿಯೋಗಳ ಪೆನ್ ಡ್ರೈವ್ ಹಾಸನದ ಹಾದಿ ಬೀದಿಯಲ್ಲಿ ಸಿಕ್ಕಿದ್ದಲ್ಲದೆ, ರಾಷ್ಟ್ರಮಟ್ಟದಲ್ಲೂ ಚರ್ಚೆಗೆ ಗ್ರಾಸವಾಗಿದೆ. ಈ ಪ್ರಕರಣ ಸಂಬಂಧ ಈಗಾಗಲೇ ಪ್ರಜ್ವಲ್ ರೇವಣ್ಣ ಅವರಿಗೆ ನೋಟೀಸ್

ಮುರುಘಾಮಠದಲ್ಲಿ ಮೇ 8 ರಿಂದ 10 ರವರೆಗೆ ಬಸವ ಜಯಂತಿ ,:  ಕಾರ್ಯಕ್ರಮಗಳ ವಿವರ ಇಂತಿದೆ..!

ಸುದ್ದಿಒನ್,ಚಿತ್ರದುರ್ಗ, ಮೇ. 06 : ನಗರದ ಶ್ರೀ ಮುರುಘರಾಜೇಂದ್ರ ಬೃಹನ್ಮಠದಲ್ಲಿ ಮೇ 8 ರಿಂದ 10ರವರೆಗೆ ಮಹಾಮಾನವತಾವಾದಿ ಸಾಂಸ್ಕøತಿಕ ನಾಯಕ ಶ್ರೀ ಬಸವೇಶ್ವರ ಜಯಂತಿ ನಿಮಿತ್ತ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಚಿತ್ರದುರ್ಗ ಆಕಾಶವಾಣಿಯಲ್ಲಿ ಮೇ

ನಾಳೆ ಬರಗೇರಮ್ಮ-ತಿಪ್ಪಿನಘಟ್ಟಮ್ಮ ಭೇಟಿ ಉತ್ಸವ :   ಸಿದ್ದತೆ ಹೇಗಿದೆ ?

  ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817 ಸುದ್ದಿಒನ್, ಚಿತ್ರದುರ್ಗ ಮೇ.06 : ಸಹೋದರಿಯರ ನಡುವೆ ಜಗಳ, ಮುನಿಸು ಇರುವುದು ಸಹಜ. ಆದ್ರೆ, ಕೋಟೆನಾಡಿನಲ್ಲಿ ಮಾತ್ರ ಮುನಿದು

error: Content is protected !!