ಬೆಂಗಳೂರು: ಇಂದಿನ ಅಧಿವೇಶನದಲ್ಲಿ ಆರ್ ಅಶೋಕ್ ಅವರು ಡಿಕೆಶಿ ಅವರ ಕಾಲೆಳೆದಿದ್ದೇ ಹೆಚ್ಚಾಯ್ತು. ಇಂದು ಒಳ ಮೀಸಲಾತಿಗೆ ಸಿಎಂ ಸಿದ್ದರಾಮಯ್ಯ ಅವರು ಒಪ್ಪಿಗೆ ಕೊಟ್ಟಾಯ್ತು. ಈ ಬಗ್ಗೆ ಸದನದಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಮಾತನಾಡುತ್ತಾ, ಅವರೆಲ್ಲ ತುಂಬಾ ಖುಷಿಯಾಗಿದ್ದಾರೆ. 25 ವರ್ಷದಿಂದ ಆ ಸಮಸ್ಯೆಯನ್ನ ಕಾಂಗ್ರೆಸ್ ಬಗೆಹರಿಸಿದೆ. ಆ ಚರ್ಚೆಯನ್ನ ಇಲ್ಲಿಗೆ ಬಿಡೋಣಾ ಎಂದು ಹೇಳಿ ಕುಳಿತುಕೊಂಡರೆ, ಆರ್ ಅಶೋಕ್ ಚರ್ಚೆ ಶುರು ಮಾಡಿದ್ದಾರೆ.
ಡಿಕೆ ಶಿವಕುಮಾರ್ ಅವರು ರಾಜಣ್ಣ ಹೋದ್ಮೇಲೆ ಬಹಳ ಫಾಸ್ಟ್ ಆಗ್ಬಿಟ್ಟಿದ್ದಾರೆ. ಬಹಳ ಆಕ್ಟೀವ್ ಆಗ್ಬಿಟ್ಟಿದ್ದಾರೆ. ಕಳೆ ಬಂದಿದೆ. ಅವರು ಏನು ಹೇಳಿದ್ರು ನಮ್ಮ ಪಾರ್ಟಿಯ ಎಸ್ಸಿಎಸ್ಟಿ ಬಹಳ ಖುಷಿಯಾಗಿದ್ದಾರೆ ಅಂತ. ಸರಿ ಅವರ ಮಾತಿಗೆ ನಾನು ಬರ್ತೀನಿ, ಮಾತಾಡಲ್ಲ ಕುಳಿತುಕೊಳ್ತೀನಿ. ಕ್ಲಾರಿಟಿ ಕೊಡ್ಲಿ ಎಂದು ಕಾಲೆಳೆದಿದ್ದಾರೆ. ಈ ವೇಳೆ ಸ್ಪೀಕರ್ ಅವರು ನೀವ್ ನೀವೇ ಮಾತಾಡಿದ್ರೆ ನಾನ್ಯಾಕೆ ಇಲ್ಲಿ ಕೂತಿರೋದು ಎಂದಿದ್ದಾರೆ.
ನಮಗೆ ಡಿಕೆ ಶಿವಕುನಾರ್ ಅವರೇ ಸಾಕು. ಅವರಿಗೆ ಸಿಎಂ ಅಂತೀವಿ. ಸಿಎಂ ಬೇಕಾಗಿಲ್ಲ ಡಿಕೆ ಶಿವಕುಮಾರ್ ಅವರೇ ಸಿಎಂ. ನೀವೂ ಪ್ರಶ್ನೆಗೆ ಅವಕಾಶವನ್ನೇ ಕೊಡದೆ ಇದ್ದರೆ ಸರ್ಕಾರ ಏನೋ ಮುಚ್ಚಿಡ್ತಾ ಇದೆ ಅಂತಾನೇ ಅರ್ಥ. ಉತ್ತರ ಆಮೇಲೆ ಕೊಡಲಿ ಮೊದಲು ಪ್ರಶ್ನೋತ್ತರಕ್ಕೆ ಅವಕಾಶ ಕೊಡಲಿ. ದಲಿತರನ್ನೆಲ್ಲಾ ಮೀಟಿಂಗ್ ಕರೆದಿದ್ರು ಪರಮೇಶ್ವರ್ ಅವರು. ಊರಿಗೆ ಬಂದವಳು ನೀರಿಗೆ ಬಂದೇ ಬರ್ತಾರೆ. ಮುಚ್ಚಿಡುವಂತದ್ದು ಏನಿದೆ ಅಲ್ಲಿ. ಅಧ್ಯಕ್ಷರೇ ಮುಖ್ಯಮಂತ್ರಿಗಳು ಬರುವ ತನಕ ಚರ್ಚೆ ಮಾಡೋಣಾ. ಇದು ದಲಿತರಿಗೆ, ರಾಜ್ಯಕ್ಕೆ ಸಂಬಂಧಪಟ್ಟದ್ದು. ಸರ್ಕಾರ ಮಾಡಿರುವುದು ಸರೀನಾ, ತಪ್ಪಾ ವಿಶ್ಲೇಷಣೆ ಮಾಡುವುದು ವಿರೋಧ ಪಕ್ಷಕ್ಕೆ ಸಂಬಂಧಿಸಿದ್ದು ಎಂದು ಆರ್ ಅಶೋಕ್ ವಾಗ್ದಾಳಿ ನಡೆಸಿದ್ದಾರೆ.

















