Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಕೊಲ್ಲೂರು ಮೂಕಾಂಭಿಕೆಗೆ ವಜ್ರದ ಕಿರೀಟ : ಕೊಟ್ಟವರ್ಯಾರು..? ಅದರ ಬೆಲೆ ಎಷ್ಟು..?

---Advertisement---

ದೇವರಿಗೆ ಯಾರೂ, ಎಂದು ಬೆಲೆ ಕಟ್ಟಲಾಗುವುದಿಲ್ಲ. ದೇವರು ಭಕ್ತರಿಗೆ ಕೇಳಿದ್ದೆಲ್ಲವನ್ನು ಕೊಡುತ್ತಾನೆ. ಭಕ್ತರು ಅದೇ ಕಾರಣಕ್ಕೆ ಹರಕೆ, ಕಾಣಿಕೆ ರೂಪದಲ್ಲಿ ದೇವರ ನಿಧಿಗೆ ಏನಾದರೂ ಕೊಡ್ತಾ ಇರ್ತಾರೆ. ಈಗ ಇಳಯರಾಜ ಅವರು ಕೂಡ ಕೊಲ್ಲೂರು ಮೂಕಾಂಭಿಕೆಗೆ ಕಾಣಿಕೆಯೊಂದನ್ನ ನೀಡಿದ್ದಾರೆ. ಆ ಕಾಣಿಕೆ ಒಂದೆರಡು ರೂಪಾಯಿಯದ್ದಲ್ಲ. ಆ ಕಾಣಿಕೆಯ ಬೆಲೆಯನ್ನ ಕೇಳಿದರೇನೆ ಶಾಕ್ ಆಗ್ತೀರಾ.

ಸಂಗೀತ ನಿರ್ದೇಶಕ ಇಳಯರಾಜ ಕೊಲ್ಲೂರು ಮೂಕಾಂಭಿಕೆಯ ಅಪ್ಪಟ ಭಕ್ತ. ತಮ್ಮ ಭಕ್ತಿಯ ಸಂಕೇತವಾಗಿ ತಾಯಿಗೆ ವಜ್ರದ ಕಿರೀಟವನ್ನ ನೀಡಿದ್ದಾರೆ. ಇಳಯರಾಜ ಅವರು ತಮ್ಮ ದುಡಿಮೆಯ ಒಂದು ಭಾಗವನ್ನ ತಾಯಿಗೆ ಮುಡಿಪಾಗಿಟ್ಟಿದ್ದರು. ಜೀವನ ಪರ್ಯಂತದ ಹಣ ಅದು. ಹೀಗಾಗಿ ದುಬಾರಿ ಬೆಲೆಯ ವಸ್ತುಗಳನ್ನೇ ತಾಯಿಗೆ ಮಾಡಿಸಿಕೊಟ್ಟಿದ್ದಾರೆ. ಇಳಯರಾಜ ಅವರು ಕೊಲ್ಲೂರು ಮೂಕಾಂಭಿಕೆಗೆ ವಜ್ರದ ಕಿರೀಟ ಹಾಗೂ ಚಿನ್ನದ ಆಭರಣಗಳನ್ನ ನೀಡಿದ್ದಾರೆ.

ಈ ವಜ್ರದ ಬೆಲೆ ಹಾಗೂ ಚಿನ್ನಾಭರಣದ ಬೆಲೆ ಸುಮಾರು 4 ಕೋಟಿಯಾಗಿದೆ. ಆಭರಣಗಳ ಸಮರಗಪಣಾ ಕಾರ್ಯಕ್ರಮ ಅತ್ಯಂತ ಸರಳವಾಗಿ ಕ್ಷೇತ್ರದಲ್ಲಿ ನಡೆಯಿತು. ಮೆರವಣಿಗೆಯಲ್ಲಿ ಬಂದ ಆಡಳಿತ ಮಂಡಳಿಯವರು ಪೂಜೆಗೈದ ವಜ್ರದ ಕಿರೀಟವನ್ನು ತಾಯಿಯ ಮುಡಿಗೆ ಅರ್ಪಿಸಿದರು. ಜೊತೆಗೆ ವೀರಭದ್ರ ಸ್ವಾಮಿಗೂ ಬೆಳ್ಳಿಯ ಕಿರೀಟ ಹಾಗೂ ಖಡ್ಗವನ್ನು ಇಳಯರಾಜ ಸಮರ್ಪಿಸಿದರು. ಬಳಿಕ ನಂದೇನು ಇಲ್ಲ, ಎಲ್ಲಾ ತಾಯಿಯ ಕೃಪೆ ಎಂದು ಕೈ ಮುಗಿದರು. ದಶಕಗಳ ಹಿಂದೆಯೂ ತಾಯಿ‌ ಮೂಕಾಂಭಿಕೆಗೆ ಕೆಲವು ಆಭರಣಗಳನ್ನು ಅರ್ಪಿಸಿದ್ದ ಇಳಯರಾಜ ಅವರು ಈಗ ದುಬಾರಿ ಬೆಲೆಯ ಆಭರಣಗಳನ್ನ ಅರ್ಪಿಸಿದ್ದಾರೆ. ಮೂಕಾಂಭಿಕೆ ತನ್ನ ಜೀವನದಲ್ಲಿ ಪವಾಡಗಳನ್ನ ನಡೆಸುತ್ತಲೇ ಬಂದಿದ್ದಾಳೆ ಅನ್ನೋದೆ ಇಳಯರಾಜ ಅವರು ನಂಬಿರುವುದು.‌

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now