ದಕ್ಷಿಣ ಕನ್ನಡ: ಕಳೆದ ಕೆಲವು ದಿನಗಳಿಂದ ಧರ್ಮಸ್ಥಳದ ಹೆಸರು ದೇಶ ವಿದೇಶಗಳಲ್ಲೂ ಮಾತನಾಡುವಂತೆ ಮಾಡಿದೆ. ಇದ್ದಕ್ಕಿದ್ದ ಹಾಗೇ ಬಂದ ಮಾಸ್ಕ್ ಮ್ಯಾನ್ ನೂರಾರು ಹೆಣಗಳನ್ನ ಹೂತು ಹಾಕಿದ್ದೇನೆ ಎಂದು ಹೇಳಿದ್ದ. ಸರ್ಕಾರ ಕೂಡ ಹೆಣಗಳ ಹುಡುಕಾಟ ಶುರು ಮಾಡಿತ್ತು. ಆ ಕಾರಣದಿಂದಾನೇ ಎಸ್ಐಟಿ ರಚನೆ ಮಾಡಿತ್ತು.ಧರ್ಮಾಧಿಕಾರಿ ವೀರೇಂದ್ರ ಹೆಗ್ಡೆಯವರು ಕೂಡ ಎಸ್ಐಟಿ ರಚನೆಯನ್ನು ಸ್ವಾಗತ ಮಾಡಿದ್ರು. ಈಗ ಮಾಸ್ಕ್ ಮ್ಯಾನ್ ಚಿನ್ನಯ್ಯ ಅರೆಸ್ಟ್ ಆಗಿದ್ದಾನೆ. ಧರ್ಮಸ್ಥಳ ಭಕ್ತಾಧಿಗಳು ಖುಷಿಯಾಗಿದ್ದಾರೆ.
ಇದರ ನಡುವೆ ಧರ್ಮಸ್ಥಳದ ಅಧಿಕೃತ ಪೇಜ್ ನಲ್ಲಿ ಫೋಟೋ ಒಂದು ಬದಲಾವಣೆಯಾಗಿದೆ. ಫೇಸ್ಬುಕ್ ನಲ್ಲಿ ಶಿವತಾಂಡವ ಪೋಸ್ಟರ್ ಹಾಕಿದ್ದಾರೆ. ಅದರ ಜೊತೆಗೆ ನಮೋ ಮಂಜುನಾಥ ಎಂದು ಬರೆಯಲಾಗಿದೆ. ಈ ಮೂಲಕ ಶಿವನ ಶಕ್ತಿ ಸದಾ ಧರ್ಮಸ್ಥಳ ಹಾಗೂ ದೇವಸ್ಥಾನದ ಮೇಲೆ ಇರಲಿದೆ ಎಂಬ. ಸೂಚನೆಯನ್ನು ನೀಡಲಾಗಿದೆ.
ಮಾಸ್ಕ್ ಮ್ಯಾನ್ ಅಲ್ಲ ಬೇರೆ ಯಾರೇ ಬಂದು ಧರ್ಮಸ್ಥಳದ ಬಗ್ಗೆ ಮಾತನಾಡಿದರು, ಶಿವನ ಬಗ್ಗೆ ಮಾತನಾಡಿದರು ಭಕ್ತರು ಅದಕ್ಕೆ ತಲೆ ಕೆಡಿಸಿಕೊಳ್ಳುವುದಿಲ್ಲ. ಶಿವನನ್ನು ನಂಬಿರುವ ಭಕ್ತರ ಮನಸ್ಸು ಇಂತದ್ದಕ್ಕೆಲ್ಲ ವಾಲುವುದು ಇಲ್ಲ. ಸದ್ಯ ಆ ಮಾಸ್ಕ್ ಮ್ಯಾನ್ ಆಗಿದ್ದ ಚಿನ್ನಯ್ಯನನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಕೋರ್ಟ್ ಕೂಡ ನ್ಯಾಯಾಂಗ ಬಂಧನಕ್ಕೆ ನೀಡಿದೆ. ಇನ್ಮೇಲೆ ಪೊಲೀಸರು ಆತನನ್ನ ವಿಚಾರಣೆ ನಡೆಸಲಿದ್ದಾರೆ. ಪ್ರಾಥಮಿಕ ಹಂತದ ವಿಚಾರಣೆಯಲ್ಲಿಯೇ ತನ್ನದೇನು ತಪ್ಪಿಲ್ಲ. ತಾನೊಬ್ಬ ಪಾತ್ರಧಾರಿ ಅಷ್ಟೇ ಸೂತ್ರಧಾರಿ ಬೇರೆನೆ ಇದ್ದಾರೆ ಎಂದಿದ್ದಾನೆ. ವಿಚಾರಣೆಯ ನಂತರ ಆ ಸೂತ್ರಧಾರಿಗಳು ಹೊರಗೆ ಬರುವ ಸಾಧ್ಯತೆ ಇದೆ.










