ಬೆಂಗಳೂರು: ವಿಧಾನಸಭಾ ಅಧಿವೇಶನದಲ್ಲೂ ಧರ್ಮಸ್ಥಳ ಅಸ್ಥಿಪಂಜರ ಸದ್ದು ಮಾಡಿದೆ. ಬಿಜೆಪಿ ಸದಸ್ಯರು ಈ ಸಂಬಂಧ ಧ್ವನಿ ಎತ್ತಿದ್ದಾರೆ. ಜೊತೆಗೆ ಸವಾಲನ್ನು ಹಾಕಿರುವ ಬಿಜೆಪಿ ಸದಸ್ಯರು, ಧರ್ಮಸ್ಥಳದಲ್ಲಿ ಶವಗಳನ್ನು ಹೂತು ಹಾಕಿದ್ದಾರೆ ಎಂಬ ಪ್ರಕರಣಕ್ಕೆ ಸಂಬಂಧಿಸಿದಂತೆ ಎಷ್ಟು ಗುಂಡಿಗಳನ್ನ ಅಗೆಯಲಾಗಿದೆ..? ಎಷ್ಟು ಮೂಳೆಗಳನ್ನು ಸಿಕ್ಕಿವೆ ಎಂದು ಪ್ರಶ್ನೆ ಮಾಡಿದ್ದಾರೆ. ಜೊತೆಗೆ ಅದನ್ನೆಲ್ಕ ಬಹಿರಂಗ ಪಡಿಸುವಂತೆ ಸವಾಲು ಹಾಕಿದ್ದಾರೆ.
ಶೂನ್ಯ ಸಮಯದ ವೇಳೆ ಧರ್ಮಸ್ಥಳದಲ್ಲಿ ಶವಗಳನ್ನು ಶೋಧಿಸುವ ಸಲುವಾಗಿ ಗುಂಡಿ ತೆಗೆಯುತ್ತಿರುವ ಬಗ್ಗೆ ಧ್ವನಿ ಎತ್ತಿದ ಬಿಜೆಪಿ ಸದಸ್ಯ ಸುನೀಲ್ ಕುಮಾರ್, ಎಸ್ಐಟಿ ತನಿಖೆ ಮಾಡಲಿ, ನಮ್ಮದೇನು ಆ ಬಗ್ಗೆ ಅಭ್ಯಂತರವಿಲ್ಲ. ಆದರೆ ಧರ್ಮಸ್ಥಳ ಧಾರ್ಮಿಕ ಸಂಸ್ಥೆ ಟಾರ್ಗೆಟ್ ಮಾಡುವುದು ಸರಿಯಲ್ಲ. ಅನಾಮಿಕನ ಮಾತು ಕೇಳಿ ಬರೀ ಗುಂಡಿ ತೆಗೆಯುವ ಕೆಲಸ ಆಗ್ತಿದೆ. ಧರ್ಮಸ್ಥಳ ಪಾವಿತ್ರ್ಯತೆ ಕಾಪಾಡಲು ಕ್ರಮ ವಹಿಸಬೇಕು. ಇಷ್ಟು ದಿನ ಎಷ್ಟು ಗುಂಡಿಗಳನ್ನು ತೆಗೆದ್ರಿ..? ಎಷ್ಟು ಮೂಳೆ ಸಿಕ್ಕಿದೆ ತಿಳಿಸಿ. ಹಿಂದೂ ಧಾರ್ಮಿಕ ಸ್ಥಳಗಳ ಮೇಲೆ ಪ್ರಹಾರ ಮಾಡುವ ಕೆಲಸ ನಡೆದಿದೆ. ಗುಂಡಿ ಅಗೆದರು ಏನು ಸಿಕ್ಕಿಲ್ಲ. ಇನ್ನು ಎಷ್ಟು ಗುಂಡಿ ತೆಗಿತೀರಾ. ಏನು ಸಿಕ್ಕಿಲ್ಲ. ಇನ್ನು ಎಷ್ಟು ಗುಂಡಿ ತೆಗಿತೀರಾ..? ಬೇರೆ ಯಾರೋ ಹೇಳಿದ್ರು ಅಂತ ಅಗೆಯುವುದಕ್ಕೆ ಆಗಲ್ಲ. ಈಗ ತನಿಖೆ ಪ್ರಗತಿ ಬಗ್ಗೆ ಯಾರೋ ಹೇಳಿದ್ರು ಅಂತ ಅಗೆಯಲು ಆಗಲ್ಲ. ಈಗ ತನಿಖೆ ಪ್ರಗತಿ ಬಗ್ಗೆ ಮಧ್ಯಂತರ ಮಾಹಿತಿ ನೀಡಬೇಕು ಎಂದು ಪ್ರಶ್ನೆ ಮಾಡಿದರು.
ಇದಕ್ಕೆ ಉತ್ತರ ನೀಡಿದ ಜಿ ಪರಮೇಶ್ವರ್ ಅವರು, ದೂರಿನ ಮೇರೆಗೆ ಸರ್ಕಾರ ಎಸ್ಐಟಿ ರಚನೆ ಮಾಡಿದೆ. ತನಿಖೆ ನಡೆಯುತ್ತಿದೆ, ಅದು ಪೂರ್ಣವಾಗಬೇಕು. ನೂರಾರು ಗುಂಡಿ ಅಗೆಯಲು ಸಾಧ್ಯವಿಲ್ಲ ವರದಿ ಬಂದ ಮೇಲೆ ಹೇಳುತ್ತೇವೆ ಎಂದಿದ್ದಾರೆ.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.











