Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಧರ್ಮಸ್ಥಳ ಕೇಸ್ : 4ನೇ ಜಾಗ..5ನೇ ಜಾಗದಲ್ಲೂ ತಲೆಬುರುಡೆ ಸುಳಿವಿಲ್ಲ : ಮೊಹಂತಿ ಬಂದ್ಮೇಲೆ ಏನೆಲ್ಲಾ ಆಯ್ತು..?

---Advertisement---

ಧರ್ಮಸ್ಥಳ: ಇಲ್ಲಿನ ಶವಗಳ ಕೇಸ್ ಗೆ ಸಂಬಂಧಿಸಿದಂತೆ ಎಸ್ಐಟಿ ತನಿಖೆ ನಡೆಸುತ್ತಿರುವುದು ಗೊತ್ತೆ ಇದೆ. ಈಗಾಗಲೇ ಅನಾಮಧೇಯ ವ್ಯಕ್ತಿ ಹಲವು ಕಡೆ ಜಾಗ ಗುರುತು ಮಾಡಿದ್ದಾರೆ. ಅದರ ತನಿಖೆಯೂ ಈಗ ನಡೆಯುತ್ತಿದೆ. ಒಟ್ಟು 13 ಸ್ಥಳ ತೋರಿಸಿದ್ದಾನೆ. ಆ ಜಾಗಗಳಲ್ಲಿ ಇಂದು ಎಸ್ಐಟಿ ಅಗೆಯುವ ಕೆಲಸ ಶುರು ಮಾಡಿದ್ದು, 1,2,3,4 ಜಾಗದಲ್ಲೂ ಏನು ಸುಳಿವೆ ಸಿಕ್ಕಿಲ್ಲವಂತೆ. ಸಂಜೆವರೆಗೂ ಹುಡುಕಾಟ ನಡೆಸಿದರು ಆತ ಗುರುತು ಮಾಡಿದ ಜಾಗದಲ್ಲಿ ಯಾವೊಂದು ವಸ್ತುವು ಸಿಕ್ಕಿಲ್ಲ. ತಲೆ ಬುರುಡೆ, ಅಸ್ತಿ ಪಂಜರದಂತ ಸುಳಿವು ಇಲ್ಲ.

ಮಳೆಯ ನಡುವೆಯೂ ಎಸ್ಐಟಿ ಅಧಿಕಾರಿಗಳು ಉತ್ಖನನ ಮಾಡಿದ್ದಾರೆ. ಇಂದು ಉತ್ಖನನ ಸ್ಥಳಕ್ಕೆ ಎಸ್ಐಟಿ ಮುಖ್ಯಸ್ಥ ಡಾ.ಪ್ರಣವ್ ಮೊಹಂತಿ ಭೇಟಿ ನೀಡಿದ್ದರು. ಅಲ್ಲಿನ ಪರಿಸ್ಥಿತಿಯನ್ನ ಪರಿಶೀಲನೆ ಮಾಡಿದ್ದಾರೆ. ಇಂದು ಏನು ಸಿಕ್ಕಿಲ್ಲ ಎಂಬ ಮಾಹಿತಿಯನ್ನು ಅಧಿಕಾರಿಗಳು ಮೊಹಂತಿ ಅವರಿಗೆ ನೀಡಿದ್ದಾರೆ.

ಇನ್ನು ಮೊದಲ ಉತ್ಖನನದ ಬಳಿ ಪ್ಯಾನ್ ಕಾರ್ಡ್, ಎಟಿಎಂ ಕಾರ್ಡ್, ಬ್ಲೌಸ್ ಪೀಸ್ ಸಿಕ್ಕಿರೋದು ಬೆಳಕಿಗೆ ಬಂದಿದೆ ಎಂದು ಅನನ್ಯ ಭಟ್ ಅವರ ವಕೀಲ ಮಂಜುನಾಥ್ ತಿಳಿಸಿದ್ದಾರೆ. ಪತ್ರಿಕಾ ಪ್ರಕಟಣೆಯ ಮೂಲಕ, ಸಿಕ್ಕಿರುವ ಪ್ಯಾನ್ ಕಾರ್ಡ್, ಎಟಿಎಂ ಕಾರ್ಡ್ ನಲ್ಲಿ ಒಬ್ಬರು ಮಹಿಳೆಯ ಹೆಸರು ಹಾಗೇ ಇನ್ನೊಂದು ಪುರುಷರ ಹೆಸರು ಇದೆ. ಮುಂದಿನ ತನಿಖೆಗೆ ಇದು ಬಹಳ ಅನುಕೂಲವಾಗಲಿದೆ. ಬಹಳ ಬೇಗ ಸತ್ಯ ತಿಳಿಯಬಹುದು ಎಂಬುದನ್ನ ನಾವೂ ನಂಬಿದ್ದೇವೆ ಎಂದು ವಕೀಲ ಮಂಜುನಾಥ್ ತಮ್ಮ ಪತ್ರಿಕಾ ಪ್ರಕಟಣೆಯ ಮೂಲಕ ತಿಳಿಸಿದ್ದಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment