ಇಂದು ಭೀಮನ ಅಮಾವಾಸ್ಯೆ ಹಿನ್ನೆಲೆ ಎಲ್ಲಾ ದೇವಸ್ಥಾನಗಳಲ್ಲೂ ವಿಶೇಷ ಪೂಜೆಯನ್ನ ಮಾಡ್ತಾ ಇದ್ದಾರೆ. ಈ ದಿನ ವಿಶೇಷವಾಗಿದ್ದು, ಡಿಸಿಎಂ ಡಿಕೆ ಶಿವಕುಮಾರ್ ಅವರು ಸಹ ನವಿಲೆ ನಾಗೇಶ್ವರ ದೇವಸ್ಥಾನಕ್ಕೆ ಹೋಗಿದ್ದಾರೆ. ನಾಗದೇವರ ದರ್ಶನವನ್ನ ಪಡೆದಿದ್ದಾರೆ. ಅದು ಯಾವುದೇ ಎಸ್ಕಾರ್ಟ್ ಕೂಡ ಬಳಸದೆ, ಸಾಮಾನ್ಯರಂತೆ ಬಂದು ಪೂಜೆ ಸಲ್ಲಿಸಿದ್ದಾರೆ.
ಡಿಕೆ ಶಿವಕುಮಾರ್ ಸಿಎಂ ಸ್ಥಾನದ ಆಕಾಂಕ್ಷಿಯಾಗಿದ್ದಾರೆ. ಹೈಕಮಾಂಡ್ ಭೇಟಿಗೆ ದೆಹಲಿಗೆ ತೆರಳುತ್ತಿದ್ದಾರೆ. ಡಿಸಿಎಂ ಮಾತ್ರವಲ್ಲ ಸಿಎಂ ಸಿದ್ದರಾಮಯ್ಯ ಅವರು ಕೂಡ ದೆಹಲಿಗೆ ತೆರಳುತ್ತಾ ಇದ್ದಾರೆ. ಅದು ಪ್ರತ್ಯೇಕವಾಗಿ. ಇದಕ್ಕೂ ಮೊದಲು ನವಿಲೆ ನಾಗೇಶ್ವರನ ದರ್ಶನವನ್ನ ಪಡೆದುಕೊಂಡಿದ್ದಾರೆ. ನವಿಲೆ ನಾಗೇಶ್ವರ ದೇವಸ್ಥಾನ ಬಹಳ ಪ್ರಸಿದ್ಧಿಯನ್ನ ಪಡೆದುಕೊಂಡಿದೆ. ರಾಜಕಾರಣಿಗಳೆಲ್ಲಾ ಈ ದೇವಸ್ಥಾನಕ್ಕೆ ಹೆಚ್ಚು ಭೇಟಿ ನೀಡ್ತಾ ಇರ್ತಾರೆ. ಈ ಹಿಂದೆ ಯಡಿಯೂರಪ್ಪ ಅವರು ಕೂಡ ಈ ದೇವಸ್ಥಾನಕ್ಕೆ ಭೇಟಿ ನೀಡಿ, ವಿಶೇಷ ಪೂಜೆಯನ್ನ ಮಾಡಿಸಿದ್ದರು. ಮೈತ್ರಿ ಸರ್ಕಾರ ಬೀಳುವ ಹಂತದಲ್ಲಿದ್ದಾಗ ಬಿ ಎಸ್ ಯಡಿಯೂರಪ್ಪ ಅವರು ಈ ದೇವಸ್ಥಾನಕ್ಕೆ ಭೇಟಿ ಕೊಟ್ಟು ಪೂಜೆ ಮಾಡಿಸಿರುತ್ತಾರೆ. ನಾಗದೇವಸ್ಥಾನಕ್ಕೆ ಬಂದ ಬಳಿಕ ಸಿಎಂ ಸ್ಥಾನವನ್ನ ಅಲಂಕರಿಸಿದ್ದರು ಬಿಎಸ್ ಯಡಿಯೂರಪ್ಪ ಅವರು.
ಹಾಗಾದ್ರೆ ಈ ದೇವಸ್ಥಾನ ಇರೋದು ಎಲ್ಲಿ ಅನ್ನೋದನ್ನ ನೋಡೋದಾದ್ರೆ, ಹಾಸನ ಜಿಲ್ಲೆಯ ಕಟ್ಟಕಡೆಯ ಗ್ರಾಮ ನವಿಲೆ. ಅಲ್ಲಿ ಇರುವುದೇ ದೇವಸ್ಥಾನ. ನಾಗದೇವರಿಗೆ ವಿಶೇಷ ಪೂಜೆಯನ್ನ ಡಿಕೆ ಶಿವಕುಮಾರ್ ಇಲ್ಲಿ ಸಲ್ಲಿಸಿದ್ದಾರೆ. ಇಷ್ಟಾರ್ಥ ಸಿದ್ಧಿಗೆ ಈ ನಾಗದೇವಸ್ಥಾನ ಹೆಸರುವಾಸಿಯಾಗಿದೆ. ಇದನ್ನ ಎರಡನೇ ಸುಬ್ರಮಣ್ಯ ಅಂತ ಕೂಡ ಕರೆಯುತ್ತಾರೆ. ಸಿಎಂ ಆಕಾಂಕ್ಷಿಯಾಗಿರುವ ಡಿಸಿಎಂ ಡಿಕೆ ಶಿವಕುಮಾರ್ ಇಲ್ಲಿಗೆ ಭೇಟಿ ನೀಡಿರುವುದು ಕುತೂಹಲವನ್ನ ಉಂಟು ಮಾಡಿದೆ.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.











