ಬೆಂಗಳೂರು; ಇಂದು ಎಲ್ಲೆಲ್ಲೂ ಆರ್ಸಿಬಿಯದ್ದೇ ಮಾತು. ಹದಿನೆಂಟು ವರ್ಷಗಳ ಕನಸು ನನಸಾಗುವ ದಾರಿಯಲ್ಲಿ ಆರ್ಸಿಬಿ ಅಭಿಮಾನಿಗಳು ಇದ್ದಾರೆ. ಮ್ಯಾಚ್ ಶುರುವಾಗುವುದನ್ನೆ ಕಾಯ್ತಾ ಕೂತಿದ್ದಾರೆ. ಇದರ ನಡುವೆ ಪೂಜೆ ಪುನಸ್ಕಾರಗಳು ಶುರುವಾಗಿದ್ದು, ಎಲ್ಲರೂ ಆರ್ಸಿಬಿಗೆ ಹಾರೈಸುತ್ತಿದ್ದಾರೆ. ಡಿಸಿಎಂ ಡಿಕೆ ಶಿವಕುಮಾರ್ ಅವರು ಕೂಡ ವಿಶ್ ಮಾಡಿದ್ದಾರೆ.
ಅದರಲ್ಲೂ ಆರ್ಸಿಬಿ ಜರ್ಸಿ ಧರಿಸಿ ವಿಶ್ ಮಾಡಿದ್ದಾರೆ. ಇಂತಹ ಅದ್ಭುತ ದಿನಕ್ಕಾಗಿ ಕಳೆದ 18 ವರ್ಷದಿಂದ ಕಾತುರದಿಂದ ಕಾಯುತ್ತಾ ಕುಳಿತಿದ್ದೇವೆ. ಟ್ರೋಫಿಗಾಗಿ ಸಾಕಷ್ಟು ಶ್ರಮ ಪಟ್ಟು, ಆರ್ಸಿಬಿ ಕೊನೆಗೆ ಐಪಿಎಲ್ ನಲ್ಲಿ ಫೈನಲ್ ತಲುಪಿದೆ. ಇಂದು ಪಂಜಾಬ್ ಕಿಂಗ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ಅಖಾಡಕ್ಕೆ ಇಳಿಯುತ್ತಿದೆ. ಇಡೀ ರಾಜ್ಯವೆಲ್ಲಾ ಟ್ರೋಫಿ ಗೆದ್ದು ಬರಲಿ ಎಂದು ತಂಡದ ಹಿಂದೆ ನಿಂತಿದೆ. ಆ ಅದ್ಭುತ ಕ್ಷಣವನ್ನು ಸಾಧಿಸಿ ತೋರಿಸಿ. ಇದು ಕೇವಲ ಜೆರ್ಸಿ ಅಲ್ಲ. ಅದರ ಮೇಲೆ ಮಿಲಿಯನ್, ಮಿಲಿಯನ್ ಡ್ರೀಮ್ ಗಳು ಇದಾವೆಮ ನಾವೂ ನೊಂದಿಗೆ ಇದ್ದೇವೆ.
ಕರ್ನಾಟಕ ಹಾಗೂ ಇಲ್ಲಿನ ಸರ್ಕಾರವೆಲ್ಲಾ ನಿಮ್ಮೊಂದಿಗೆ ನಿಂತಿದೆ. ಆರ್ಸಿಬಿ ಹುಡುಗರೇ ತವರಿಗೆ ಕಪ್ ಗೆದ್ದುಕೊಂಡು ಬನ್ನಿ. ಟ್ರೋಫಿಗಾಗಿ ಕರ್ನಾಟಕದ ಕೋಟಿ ಕೋಟಿ ಜನರು ಹಾಗೂ ನಾನು ಕಾಯುತ್ತಿದ್ದೇನೆ. ಎಲ್ಲರಿಗೂ ಆಲ್ ದಿ ಬೆಸ್ಟ್. ಸುಧೀರ್ಘ 18 ವರ್ಷಗಳ ಕಾಲ ಕಪ್ ಕೊರಗು ನೀಗೋಕೆ ಒಂದೇ ಒಂದು ಹೆಜ್ಜೆ ಬಾಕಿ ಇದೆ. ಅಹ್ಮದಾಬಾದ್ ನಮೋ ಅಂಗಳದಲ್ಲಿ ನಡೆಯುವ ಫೈನಲ್ ಫೈಟ್ ನಲ್ಲಿ ಆರ್ಸಿಬಿ ದಿಟ್ಟ ಹೆಜ್ಜೆ ಇಟ್ಟರೆ ಅಸಂಖ್ಯ ಅಭಿಮಾನಿಗಳ ಕನಸು ಇಂದು ನೆರವೇರಲಿದೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ವಿಶ್ ಮಾಡಿದ್ದಾರೆ.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.











