Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ದಾವಣಗೆರೆ | ಇಂಜಿನಿಯರಿಂಗ್ ಮಾಡಿದ್ದ ಹುಡುಗಿ ಇದ್ದಕ್ಕಿದ್ದ ಹಾಗೇ ಸಂನ್ಯಾಸಿ ಆಗುವ ನಿರ್ಧಾರವೇಕೆ..?

---Advertisement---

ದಾವಣಗೆರೆ: ಈಗಷ್ಟೇ ಇಂಜಿನಿಯರಿಂಗ್ ಮುಗಿಸಿದ್ದ ಯುವತಿ ಕಲರ್ ಫುಲ್ ಜಗತ್ತನ್ನ ಅನುಭವಿಸುವ ಬದಲಿಗೆ ಆಧ್ಯಾತ್ಮದ ಹಾದಿ ಹಿಡಿದಿರುವ ಘಟನೆ ನಡೆದಿದೆ. ದಾವಣಗೆರೆಯ ಪ್ರತಿಭಾವಂತ ವಿದ್ಯಾರ್ಥಿನಿ ಅಂಚಲ್ ಕುಮಾರಿ ಸಂನ್ಯಾಸತ್ವ ಸ್ವೀಕಾರ ಮಾಡಲಿದ್ದಾರೆ. ದಾವಣಗೆರೆಯ ಪ್ರತಿಷ್ಠಿತ ಬಿಐಇಟಿ ಕಾಲೇಜಿನಲ್ಲಿ ಈಕೆ ಇಂಜಿನಿಯರಿಂಗ್ ಮಾಡಿದ್ದರು. ಆದರೆ ಈಗ ಸಂನ್ಯಾಸತ್ವವನ್ನ ಆಯ್ಕೆ‌ ಮಾಡಿಕೊಂಡಿದ್ದಾರೆ.

ಅಂಚಲ್ ಕುಮಾರಿಗೆ ಈಗಿನ್ನು 26 ವರ್ಷ. ದಾವಣಗೆರೆಯ ಚೌಕಿಪೇಟೆಯ ನಿವಾಸಿಗಳಾದ ಮುಖೇಶ್ ಮತ್ತು ಸುನಿತಾ ಬಾಯಿ ದಂಪತಿಯ ಮೂರನೇ ಪುತ್ರಿಯಾಗಿದ್ದಾರೆ. ಅಂಚಲ್ ಅವರ ಅಕ್ಕಂದಿರಿಗೆ ಈಗಾಗಲೇ ಮದುವೆಯಾಗಿದೆ. ಅಂಚಲ್ ಕೂಡ ಇಂಜಿನಿಯರಿಂಗ್ ಮುಗಿಸಿದ್ದರು. ಕಾಲೇಜು ದಿನಗಳಲ್ಲಿಯೇ ಈ ಅಂಚಲ್ ಅವರಿಗೆ ಆಧ್ಯಾತ್ಮದ ಕಡೆಗೆ ಹೆಚ್ಚು ಒಲವಿತ್ತಂತೆ. ಜೊತೆಗೆ ಸಂನ್ಯಾಸಿಗಳ ಜೀವನ ಶೈಲಿಯೂ ಬಹಳ ಪ್ರಭಾವ ಬೀರಿತ್ತಂತೆ.

ಸಂಸಾರದ ಲೌಕಿಕ ಸುಖಕ್ಕಿಂತ ಸಂನ್ಯಾಸತ್ವದಲ್ಲಿ ಸಿಗುವ ಸುಖ ಮತ್ತು ನೆಮ್ಮದಿ ಶ್ರೇಷ್ಠವಾದದ್ದು ಎಂಬುದನ್ನ ಅಂಚಲ್ ನಂಬಿದ್ದರು. ಹೀಗಾಗಿಯೇ ತನ್ನ ಹೆತ್ತವರು, ಒಡಹುಟ್ಟಿದವರು ಹಾಗೂ ಕೋಟಿ ಕೋಟಿ ಮೌಲ್ಯದ ಆಸ್ತಿ ಪಾಸ್ತಿಯನ್ನು ತ್ಯಜಿಸಿರುವ ಅಂಚಲ್ ಕುಮಾರಿ, ನಾಳೆ ಅಂದ್ರೆ ಶುಕ್ರವಾರ ಗುಜರಾತ್ ನ ಸೂರತ್ ನಲ್ಲಿ ಅಧಿಕೃತವಾಗಿ ಸಂನ್ಯಾಸತ್ವದ ದೀಕ್ಷೆ ಪಡೆಯಲಿದ್ದಾರೆ. ಇಂಜಿನಿಯರಿಂಗ್ ನಲ್ಲಿ ಟಾಪರ್ ಸ್ಟೂಡೆಂಟ್ ಆಗಿದ್ದಂತ ಯುವತಿಯೊಬ್ಬಳು ಹೀಗೆ ಜಗತ್ತಿನ ಸುಖವನ್ನೆಲ್ಲಾ ತ್ಯಜಿಸಿ ಹೀಗೆ ಸಂನ್ಯಾಸತ್ವ ಸ್ವೀಕರಿಸಿರೋದು ದಾವಣಗೆರೆಯ ಮಂದಿಗೆ ಶಾಕಿಂಗ್ ನ್ಯೂಸ್ ಥರ ಆಗಿದೆ. ಆದರೆ ಆ ವಿದ್ಯಾರ್ಥಿನಿಗೆ ಆ ಜೀವನವೇ ಅತ್ಯದ್ಭುತ ಎನಿಸಿದೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

ಮಿಸ್ ಮಾಡ್ದೆ ಓದಿ

ಉದ್ಯೋಗ ಸೃಷ್ಟಿ ಹಾಗೂ ಕೌಶಲ್ಯಾಭಿವೃದ್ಧಿಗೆ ವಿಶ್ವವಿದ್ಯಾಲಯಗಳು ಮತ್ತು ಶಿಕ್ಷಣ ಸಂಸ್ಥೆಗಳಲ್ಲಿ ಕೈಗಾರಿಕಾ ಸಹಭಾಗಿತ್ವದ “ಹೈಪರ್-ಆಕ್ಟಿವ್ ಇನ್ನೋವೇಷನ್ ಹಬ್”ಗಳ ನಿರ್ಮಾಣ ಅತ್ಯಗತ್ಯ

ತೆಳ್ಳಗಿದ್ದರೆ ಮಾತ್ರ ಫಿಟ್ ಎಂದರ್ಥವಲ್ಲ: ನಿಜವಾದ ಫಿಟ್‌ನೆಸ್‌ನ ಗುರುತುಗಳೇನು? ತಜ್ಞರ ಸಲಹೆ ಇಲ್ಲಿದೆ

ಕೂದಲು ಉದುರುವಿಕೆ ತಡೆದು, ದಟ್ಟವಾಗಿ ಬೆಳೆಯಲು ಈ ‘ಸೂಪರ್‌ಫುಡ್‌’ಗಳನ್ನು ನಿಮ್ಮ ಆಹಾರದಲ್ಲಿ ತಪ್ಪದೇ ಸೇರಿಸಿ!

ಚಿತ್ರದುರ್ಗ : ಮೊಳಕಾಲ್ಮೂರಿನಲ್ಲಿ ಭೀಕರ ರಸ್ತೆ ಅಪಘಾತ : ಸೇತುವೆಗೆ ಕಾರು ಡಿಕ್ಕಿಯಾಗಿ ಇಬ್ಬರು ಸಾವು!

ಮೊಬೈಲ್‌-ಸ್ಕ್ರೀನ್‌ಗೆ ಬ್ರೇಕ್ ನೀಡಿ: ಮಾನಸಿಕ ಆರೋಗ್ಯ ಕಾಪಾಡಲು ‘ಡಿಜಿಟಲ್ ಡಿಟಾಕ್ಸ್’ ಏಕೆ ಮುಖ್ಯ?

ನೀತಿ ಕಥೆ: ನಂಬಿಕೆದ್ರೋಹಕ್ಕೆ ಕ್ಷಮೆಯಿಲ್ಲ (ಯುವರಾಜ ಮತ್ತು ಕರಡಿಯ ಕಥೆ)