Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ದಾವಣಗೆರೆ : ಈ ದಿನಗಳಂದು ಜಿಲ್ಲೆಯಾದ್ಯಂತ ಮದ್ಯ ಮಾರಾಟ , ಸರಬರಾಜು ನಿಷೇಧಿಸಿ ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ಆದೇಶ

---Advertisement---

ದಾವಣಗೆರೆ, ಸೆಪ್ಟೆಂಬರ್ 16 :  ಗಣೇಶ ಚತುರ್ಥಿ ಅಂಗವಾಗಿ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪನೆ ಮಾಡಲಾಗಿದೆ. ಗಣೇಶ ಮೂರ್ತಿಗಳ ವಿಸರ್ಜನೆಯ ವೇಳೆ ಕಾನೂನು ಸುವ್ಯವಸ್ಥೆ ಮತ್ತು ಸಾರ್ವಜನಿಕ ಶಾಂತಿ ಕಾಪಾಡಲು ಆಯ್ದ ದಿನಗಳಂದು ಜಿಲ್ಲೆಯಾದ್ಯಂತ ಮದ್ಯ ಮಾರಾಟ ಮತ್ತು ಸರಬರಾಜನ್ನು ನಿಷೇಧಿಸಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ಆದೇಶಿಸಿದ್ದಾರೆ.

ಅಬಕಾರಿ ಇಲಾಖೆ ದಾವಣಗೆರೆ ನಗರ ಉಪವಿಭಾಗದ ಪಾಲಿಕೆ ವ್ಯಾಪ್ತಿಯಲ್ಲಿ: ಸೆ.16, 18 ಮತ್ತು 22, ರಂದು ಬೆಳಿಗ್ಗೆ 6 ರಿಂದ ರಾತ್ರಿ 12 ಗಂಟೆಯವರೆಗೆ ನಿಷೇಧಿಸಲಾಗಿದೆ.

ದಾವಣಗೆರೆ ಗ್ರಾಮಾಂತರ ಉಪ ವಿಭಾಗದ ವ್ಯಾಪ್ತಿಯಲ್ಲಿ ಮಲೇಬೆನ್ನೂರು ಪುರಸಭೆ ವ್ಯಾಪ್ತಿ: ಸೆಪ್ಟೆಂಬರ್ 16, 18, 22, 24, 27 ರಂದು ಬೆಳಿಗ್ಗೆ 6 ರಿಂದ ರಾತ್ರಿ 12 ಗಂಟೆಯವರೆಗೆ ನಿಷೇಧಿಸಲಾಗಿದೆ.

ಹರಿಹರ ನಗರ ವ್ಯಾಪ್ತಿ ಅಕ್ಟೋಬರ್ 4 ರಂದು ಬೆಳಿಗ್ಗೆ 6 ರಿಂದ ರಾತ್ರಿ 12 ಗಂಟೆಯವರೆಗೆ ತನಕ ನಿಷೇಧಿಸಲಾಗಿದೆ.

ಚನ್ನಗಿರಿ ಉಪ ವಿಭಾಗದ ವ್ಯಾಪ್ತಿಯಲ್ಲಿ : ಚನ್ನಗಿರಿ ತಾಲ್ಲೂಕು, ಸೆ.22ರ ಮಧ್ಯರಾತ್ರಿಯಿಂದ ಸೆ.23 ಮಧ್ಯರಾತ್ರಿಯವರೆಗೆ.

ಚನ್ನಗಿರಿ ಪಟ್ಟಣ, ನಲ್ಲೂರು, ನಲ್ಲೂರು ಗ್ರಾಮದ ಸುತ್ತಮುತ್ತ ಹೊನ್ನಾಳಿ ಪಟ್ಟಣ ಹಾಗೂ ಸಾಸ್ವೇಹಳ್ಳಿ, ಸಾಸ್ವೇಹಳ್ಳಿ ಸುತ್ತಮುತ್ತ ಸೆ.25ರ ಮಧ್ಯರಾತ್ರಿಯಿಂದ ಸೆ.26ರ ಮಧ್ಯರಾತ್ರಿಯವರೆಗೆ.

ಚನ್ನಗಿರಿ ಪಟ್ಟಣ ನಲ್ಲೂರು, ನಲ್ಲೂರು ಗ್ರಾಮದ ಸುತ್ತಮುತ್ತ ಅಕ್ಟೋಬರ್ 1ರ ಮಧ್ಯರಾತ್ರಿಯಿಂದ ಅ.2 ಮಧ್ಯರಾತ್ರಿಯವರೆಗೆ.  ಹೊನ್ನಾಳಿ ತಾಲ್ಲೂಕು ಅ.3ರ ಮಧ್ಯರಾತ್ರಿಯಿಂದ ಅ.4ರ ಮಧ್ಯರಾತ್ರಿಯವರೆಗೆ,     ಚನ್ನಗಿರಿ ತಾಲ್ಲೂಕು ಅ.7ರ ಮಧ್ಯರಾತ್ರಿಯಿಂದ ಅ.8ರ ಮಧ್ಯರಾತ್ರಿಯವರೆಗೆ ಮದ್ಯ ಮಾರಾಟ ನಿಷೇಧಿಸಲಾಗಿದೆ.

Join WhatsApp

Join Now

Join Telegram

Join Now