Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ವಸತಿ ಯೋಜನೆಯಲ್ಲಿ ಭ್ರಷ್ಟಾಚಾರ : ನಂದೇ ಆಡಿಯೋ ಎಂದು ಒಪ್ಪಿಕೊಂಡ ಬಿಆರ್ ಪಾಟೀಲ್

---Advertisement---

ಬೆಂಗಳೂರು; ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಭ್ರಷ್ಟಾಚಾರ ನಡೆಯುತ್ತಾ ಇದೆ ಎಂದು ಅವರದ್ದೇ ಸರ್ಕಾರದ ಶಾಸಕ ಬಿಆರ್ ಪಾಟೀಲ್ ಆರೋಪ ಮಾಡಿದ್ದ ಆಡಿಯೋವೊಂದು ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಸಚಿವ ಜಮೀರ್ ಅಹ್ಮದ್ ಖಾನ್ ಅವರ ಆಪ್ತ ಕಾರ್ಯದರ್ಶಿ ಸರ್ಫರಾಜ್ ಖಾನ್ ಬಳಿ ಮಾತನಾಡಿದ್ದರು. ಆ ಆಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ವಸತಿ ಇಲಾಖೆಯಲ್ಲಿ ನಡೆಯುತ್ತಿದ್ದ ಭ್ರಷ್ಟಚಾರದ ಬಗ್ಗೆ ಮಾತನಾಡಿದ್ದರು. ಹಣ ಕೊಟ್ಟವರಿಗಷ್ಟೆ ವಸತಿ ಇಲಾಖೆಯಲ್ಲಿ ವಸತಿಗಳನ್ನ ನೀಡುತ್ತಾ ಇದ್ದಾರೆ. ನಾನು ಸಾಕಷ್ಟು ಸಲ ಹೇಳಿದರು ನನ್ನ ಕಡೆಯವರಿಗೆ ವಸತಿ ಸಿಕ್ಕಿಲ್ಲ. ಪತ್ರಗಳನ್ನು ನೀಡಿದರು ಮನೆಗಳನ್ನು ನೀಡಿಲ್ಲ ಎಂದು ಜೋರು ಮಾಡಿದ್ದರು. ಅದಕ್ಕೆ ಉತ್ತರಿಸಿದ್ದ ಸರ್ಫರಾಜ್ ಖಾನ್, ಆ ರೀತಿ ಏನು ಇಲ್ಲ. ನಿಮ್ಮ ಗಮನಕ್ಕೆ ಬಂದರೆ ಹೇಳಿ ಕ್ರಮ ತೆಗೆದುಕೊಳ್ಳೋಣಾ ಎಂದಿದ್ದರು. ಇದೀಗ ಆ ಆಡಿಯೋಗೆ ಬಿಆರ್ ಪಾಟೀಲ್ ಅವರೇ ಉತ್ತರ ಕೊಟ್ಟಿದ್ದಾರೆ.

ಹೌದು ಅದು ನನ್ನದೇ ಆಡಿಯೋ. ಎಲ್ಲರಿಗೂ ಹೇಳಿದ್ದೀನಿ ಅದನ್ನ ನಾನೇ ಮಾತನಾಡಿದ್ದು ಅಂತ. ನಾನು ಏನು ಹೇಳಬೇಕೋ ಅದನ್ನ ಹೇಳಿದ್ದೀನಿ. ಮಾನ್ಯ ಮುಖ್ಯಮಂತ್ರಿಗಳು ಏನು ಮಾಡ್ತಾರೆ ಗೊತ್ತಿಲ್ಲ. ಕರೆದರೆ ಹೋಗಿ ಮಾತನಾಡ್ತೀನಿ. ಎಲ್ಲಾ ಸರ್ಕಾರದಲ್ಲೂ ನಡೆದಿತ್ತು. ಇಲ್ಲಿ ನಾವೂ ಜನಪರ ಆಡಳಿತ ಕೊಡ್ತೀವಿ ಅಂತ ಹೇಳಿದ್ವಿ. ಆದರೆ ಇಲ್ಲಿ ಅದು ಆಗಬಾರದಿತ್ತು.

ಎಲ್ಲರೂ ಇಲ್ಲ ಒಂದು ಐದಾರು ಪಂಚಾಯ್ತಿಯಲ್ಲಿ ಹಣ ಕೊಟ್ಟು ಮಾಡಿಕೊಂಡು ಹೋಗಿದ್ದಾರೆ. ನಾನು ಪತ್ರ ಕೊಟ್ಟಿದ್ದು ಆಗಿಲ್ಲ. ನನ್ನ ಕ್ಷೇತ್ರಕ್ಕೆ ನಾಲ್ಕು ಪತ್ರ ಕೊಟ್ಟಿದ್ದೀನಿ ಆದರೂ ಆಗಿಲ್ಲ. ಪಂಚಾಯ್ತಿ ಚೇರ್ಮನ್ ಮಾಡಿಕೊಂಡು ಹೋಗಿದ್ದಾರೆ ಎಂದು ಆರೋಪದ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment

🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...