Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಚಿನ್ನಯ್ಯನನ್ನು ಕರೆತಂದಿದ್ದೇ ಕಾಂಗ್ರೆಸ್ : ಸ್ಪೋಟಕ ಹೇಳಿಕೆಗೆ ಸಿದ್ದರಾಮಯ್ಯ ಏನಂದ್ರು..?

---Advertisement---

ಮೈಸೂರು: ಸದ್ಯ ಧರ್ಮಸ್ಥಳದ ಮಾಸ್ಕ್ ಮ್ಯಾನ್ ಚಿನ್ನಯ್ಯ ಈಗ ಎಸ್ಐಟಿ ಅಧಿಕಾರಿಗಳ ವಶದಲ್ಲಿದ್ದು ವಿಚಾರಣೆ ನಡೆಯುತ್ತಿದೆ. ಇದರ ನಡುವೆ ಬಿಜೆಪಿ ನಾಯಕರು ಕಾಂಗ್ರೆಸ್ ಸರ್ಕಾರದ ಮೇಲೆ ಹೌಹಾರಿದ್ದಾರೆ. ಚಿನ್ನಯ್ಯನನ್ನು ಕರೆತಂದಿದ್ದೆ ಕಾಂಗ್ರೆಸ್ ನವರು ಎಂದು ವಿಪಕ್ಷ ನಾಯಕ ಆರ್.ಅಶೋಕ್ ಹೇಳಿದ್ದಾರೆ. ಈ ಬಗ್ಗೆ ಸಿದ್ದರಾಮಯ್ಯ ಅವರು ಪ್ರತಿಕ್ರಿಯೆ ನೀಡಿದ್ದಾರೆ. ಬಿಜೆಪಿ ಅವರಿಗೆ ಇಷ್ಟೆಲ್ಲಾ ಮಾಡುವುದಕ್ಕೆ ದುಡ್ಡು ಎಲ್ಲಿಂದ ಬರುತ್ತೆ..? ಯಾರು ಕೊಡೋದು ಇವರಿಗೆ..? ಎಲ್ಲಾ ವಿಚಾರವನ್ನು ರಾಜಕೀಯವಾಗಿ ನೋಡಬಾರದು. ಇವರು ರಾಜಕೀಯಕ್ಕೋಸ್ಕರ ಮಾಡ್ತಾ ಇದ್ದಾರೆ. ಅದರಲ್ಲಿ ಸತ್ಯ ಏನಿಲ್ಲ. ಅಸತ್ಯ ಅಷ್ಟೆ ಇರೋದು ಎಂದಿದ್ದಾರೆ.

ಇದೆ ವೇಳೆ ಸೌಜನ್ಯ ಕೇಸ್ ಮತ್ತೆ ಓಪನ್ ಆಗುತ್ತಾ ಎಂಬ ಪ್ರಶ್ನೆಗೆ, ಸಿಬಿಐ ಯಾರ ಅಧೀನದಲ್ಲಿ ಇರೋದು. ಸೆಂಟ್ರಲ್, ಅವರು ತನಿಖೆ ಮಾಡಿ ವರದಿ ಕೊಟ್ಟಿದ್ದಾರೆ. ಈಗ ಸುಪ್ರೀಂ ಕೋರ್ಟ್ ಗೆ ಹೋಗಿ ಅಂತ ಯಾರು ಹೇಳ್ತಾ ಇರೋದು. ಇವರೇ. ಆದ್ದರಿಂದ ಏನಂತ ಹೇಳೋದು. ಸೌಜನ್ಯ ಕೇಸ್ ಯಾರ ಮೇಲೆ ಆರೋಪ ಮಾಡ್ತಾ ಇರೋದು..? ಇವರು ಯಾರ ಪರ..? ಒಂದು ಕಡೆ ಸೌಜನ್ಯ ಪರ ಅಂತ ಹೇಳ್ತಾರೆ, ಇನ್ನೊಂದು ಕಡೆ ವೀರೇಂದ್ರ ಹೆಗ್ಡೆ ಅವರ ಪರ ಅಂತ ಹೇಳ್ತಾರೆ. ಯಾರ ಪರ ಇವರು ಎಂದು ಪ್ರಶ್ನೆ ಮಾಡಿದ್ದಾರೆ.

ಚಿನ್ನಯ್ಯನ ಕರೆದುಕೊಂಡು ಬಂದಿರುವುದೇ ಕಾಂಗ್ರೆಸ್ ಅಂತಿದ್ದಾರೆ ಬಿಜೆಪಿ ಅವರು ಎಂದಾಗ, ಇವರದ್ದೆಲ್ಲಾ ಕೇಳ್ತಿರಲ್ಲ. ವಿರೋಧ ಪಕ್ಷದ ನಾಯಕನಾದ ಕೂಡಲೇ ಎಲ್ಲವನ್ನು ಕೇಳ್ಬೇಕಾ..? ಅಸೆಂಬ್ಲಿಯಲ್ಲಿ ಏನು ಹೇಳಿದ್ರು, ಅಶೋಕ್, ಸುನೀಲ್ ಚರ್ಚೆ ಮಾಡಿದ್ದಾರೆ. ದಿನಕ್ಕೊಂದು ಹೇಳುವುದಕ್ಕೆ ಹೋಗಬಾರದು. ಅಸತ್ಯದ ಮೇಲೆ ಚರ್ಚೆ ಮಾಡಿದ್ರೆ ಹೀಗೆ ಆಗೋದು ಎಂದಿದ್ದಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment

🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...