Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ರಕ್ಷಕ್ ಬುಲೆಟ್ ಗೆ ಜೋಡಿಯಾಗಿದ್ದ ರಮೋಲಾ ವಿರುದ್ಧ ದೂರು..!

---Advertisement---

ಬೆಂಗಳೂರು: ರಮೋಲಾ ಯಾರಿಗೆ ಗೊತ್ತಿಲ್ಲ ಹೇಳಿ. ಕೆಲ ಸೀರಿಯಲ್ ಗಳ ಮೂಲಕ ಮನೆ ಮಾತಾಗಿದ್ದ ರಮೋಲಾ, ಇತ್ತೀಚೆಗೆ ಬಂದ ಭರ್ಜರಿ ಬ್ಯಾಚುಲರ್ ಮೂಲಕ ಸಾಕಷ್ಟು ಫೇಮಸ್ ಆಗಿದ್ರು. ಅದರಲ್ಲೂ ರಕ್ಷಕ್ ಜೋಡಿಯಾಗಿ ಕಾಣಿಸಿಕೊಂಡಿದ್ದರು. ಈ ಜೋಡಿ ತನ್ನರ್ ಅಪ್ ಕೂಡ ಆಗಿದ್ರು. ಆದರೆ ಇದೀಗ ರಮೋಲ ವಿರುದ್ಧ ನಿರ್ಮಾಪಕರೊಬ್ಬರು ದೂರು ದಾಖಲು ಮಾಡಿದ್ದಾರೆ.

ರಿಚ್ಚಿ ಸಿನಿಮಾದ ನಿರ್ಮಾಪಕ ಹೇಮಂತ್, ರಮೋಲ ವಿರುದ್ಧ ದೂರು ನೀಡಿದ್ದಾರೆ. ನಿರ್ಮಾಪಕ ದೂರು ಏನಂದ್ರೆ ಸಿನಿಮಾದ ಯಾವುದೇ ಪ್ರಚಾರಕ್ಕೆ ಬರ್ತಾ ಇಲ್ಲ ಅನ್ನೋದು. ಸಂಪರ್ಕ‌ ಮಾಡಿದ್ರು, ಸಂಪರ್ಕಕ್ಕೆ ಸಿಕ್ತಾ ಇಲ್ಲ. ಸಾಲ‌ ಸೋಲ ಮಾಡಿ ಸಿನಿಮಾ ಮಾಡಿರ್ತಿವಿ. ಹೀಗೆ ಸಿನಿಮಾದ ಪ್ರಚಾರಕ್ಕೆ ಬರದೆ ಕೈ ಎತ್ತಿ ಬಿಟ್ಟರೆ ಹೇಗೆ ಎಂದು ಫಿಲ್ಮ್ ಚೇಂಬರ್ ಗೆ ದೂರು ನೀಡಿದ್ದಾರೆ.

ನಟಿ ರಮೋಲಾ ರಿಚ್ಚಿ ಹೆಸರಿನ ಸಿನಿಮಾದಲ್ಲಿ ನಟಿಸಿದ್ದರು. ಈ ಸಿನಿಮಾ ಸೆಟ್ಟೇರಿ ಬಹಳ ಸಮಯ ಕಳೆದಿದೆ. ಈಗ ಚಿತ್ರದ ನಾಯಕ, ನಿರ್ದೇಶಕ ಹಾಗೂ ನಿರ್ಮಾಪಕ ರಿಚ್ಚಿ ಅವರು ನಟಿ ರಮೋಲಾ ವಿರುದ್ಧ ಫಿಲ್ಮ್ ಚೇಂಬರ್ ಗೆ ದೂರು ನೀಡಿದ್ದಾರೆ. ಯಾವುದೇ ಪ್ರಮೋಷನ್ ಗೂ ಬರ್ತಿಲ್ಲ, ಅಷ್ಟೇ ಅಲ್ಲ ಕರೆ ಮಾಡಿದ್ರೆ ಕರೆಯನ್ನು ಸ್ವೀಕರಿಸ್ತಿಲ್ಲ. ರಮೋಲಾ, ನಮ್ಮ ರಿಚ್ಚಿ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ಆದರೆ ಪ್ರಮೋಷನ್ ಗೆ ಮಾತ್ರ ಬರ್ತಿಲ್ಲ ಎಂಬ ದೂರನ್ನ ನೀಡಿದ್ದಾರೆ.

 

ಭರ್ಜರಿ ಬ್ಯಾಚುಲರ್ ಆದ್ಮೇಲೆ ರಕ್ಷಕ್ ಹಾಗೂ ರಮೋಲಾ ಜೋಡಿ ಒಂದಷ್ಟು ಟ್ರೆಂಡ್ ಅನ್ನೇ ಸೃಷ್ಟಿ ಮಾಡಿತ್ತು. ಶೋ ಮುಗಿದ ಮೇಲೂ ಇಬ್ಬರು ಪ್ರಮೋಷನ್ ವಿಚಾರದಲ್ಲಿ ಸಾಕಷ್ಟು ಓಡಾಡ್ತಾ ಇರ್ತಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment