Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಕೊಕನೆಟ್‌ ಐಲೆಂಡ್‌ : ಉಡುಪಿ ಜಿಲ್ಲೆಯ ಈ ಸುಂದರ ತಾಣದ ಬಗ್ಗೆ ನಿಮಗೆಷ್ಟು ಗೊತ್ತು ?

---Advertisement---

ವಿಶೇಷ ಲೇಖನ :
ಜೆ. ಪರಶುರಾಮ
ನಿವೃತ್ತ ಹಿರಿಯ ಭೂವಿಜ್ಞಾನಿ
ಗೌರವಾಧ್ಯಕ್ಷರು, ವಿ.ಕೆ.ಎಸ್., ಚಿತ್ರದುರ್ಗ
ಸದಸ್ಯರು, ಬೆಂಗಳೂರು ಸೌತ್ ಸೆಂಟರ್ (ಒ.)
ಮೊ : 94483 38821

ಕರ್ನಾಟಕ ರಾಜ್ಯದ ಉಡುಪಿ ಜಿಲ್ಲೆಯ ಕರಾವಳಿ ತೀರದ ಮನನೆಚ್ಚಿನ ಬಹು ಸುಂದರ ತಾಣ ಮಲ್ಪೆ. ಇಲ್ಲಿಂದ ಸುಮಾರು 5 ಕಿ.ಮೀ. ದೂರದ ಪಶ್ಚಿಮ ದಿಕ್ಕಿನಲ್ಲಿ ಸಮುದ್ರದಲ್ಲಿ ತೆಂಗಿನ ತೋಟಗಳ ಸುಂದರ ದ್ವೀಪವನ್ನು ನೋಡಬಹುದು. ಹತ್ತಿರದಿಂದ ದ್ವೀಪವನ್ನು ನೋಡಿದರೆ ಚಿತ್ತಾಕರ್ಷಕ ಶಿಲೆಗಳು ಕಂಬಾಕೃತಿಯಲ್ಲಿ ಕಾಣುತ್ತವೆ. ಈ ದ್ವೀಪವನ್ನು “ಕೊಕನೆಟ್‌ ಐಲೆಂಡ್‌” ಎಂದು ಹೆಸರಿಸಲಾಗಿದೆ. ಸಂತ ಮೇರಿ ದ್ವೀಪದ ಒಂದು ಭಾಗವಾಗಿ ದಕ್ಷಿಣದಲ್ಲಿರುವ ಬಹದ್ದೂರ್‌ ಘರ್ ದ್ವೀಪದಲ್ಲಿ ಎತ್ತರವಾಗಿರುವ ದೀಪಸ್ತಂಭವಿದೆ. ಸಂತ ಮೇರಿ ದ್ವೀಪಕ್ಕೆ ಆ ಹೆಸರು ಬರಲು ಚಾರಿತ್ರಿಕ ಕಾರಣವಿದೆ.

 

ಪೋರ್ಚುಗೀಸರಲ್ಲಿ ಪ್ರಸಿದ್ಧನಾದ ವಾಸ್ಕೋಡಿಗಾಮ 1498ರಲ್ಲಿ ಕ್ಯಾಂಬೆಯಿಂದ ಹೊರಟು ಮಾರ್ಗ ಬದಲಾಯಿಸಿ ಕಲ್ಲಿಕೋಟೆಯತ್ತ ತಿರುಗಿದ ಮಾರ್ಗದ ಮಧ್ಯದಲ್ಲಿ ಈ ದ್ವೀಪಕ್ಕೆ ಬಂದಿಳಿದ. ಅವರಿಗೆ ಇದು ಒಂದು ಪರ್ವತವಾಗಿ ಗೋಚರಿಸಿತು. ನೆಲೆ ನೋಡಿ ಬಹುದಿನಗಳಿದ್ದವು. ಅಂದು ಸಂತ ಮೇರಿಯ ದಿನ. ನೆನಪಿಗಾಗಿ ಈ ದ್ವೀಪವನ್ನು ಅದೇ ಹೆಸರಿನಿಂದ ಕರೆದರು.

ಮಧ್ಯಭಾರತದಲ್ಲಿ 6 ಕೋಟಿ ವರ್ಷಗಳ ಹಿಂದೆ ಜ್ವಾಲಾಮುಖಿಗಳಿಂದ ಸುರಿದ ಶಿಲಾಸರದಲ್ಲಿ ಮುಳುಗಿ ಹೋಗಿತ್ತು. ಈ ಶಿಲಾ ಪಾಕ ಒಂದರ ಮೇಲೊಂದು ಪೇರಿಕೆಯಾಗಿ ದಕ್ಷಿಣ ಪ್ರಸ್ಥಭೂಮಿಯನ್ನೇ ನಿರ್ಮಿಸಿತ್ತು. ಇದರ ಒಂದು ಭಾಗವೇ ಸಂತಮೇರಿ ದ್ವೀಪದಲ್ಲಿ ಕಂಬದ ರೂಪದಲ್ಲಿ ನಿಂತಿದೆ. ಇದನ್ನು ನೈಸರ್ಗಿಕ ರೂಪದ ಶಿಲಾರಚನೆಗೆ ಕಂಬಾಕಾರದ ಸಂದುಲು ಎಂದು ಕೂಡಕರೆಯಲಾಗಿದೆ. ಈ ಕಲ್ಲಿನ ಮಾದರಿ ಬೆಸಾಲ್ಟ್‌ (ಃಚಿsಚಿಟಣ) ಎಂದು ಕರೆಯುವರು (ಜ್ಞಾಲಾಮುಖಿಗಳಿಂದ ಬಂದಂತಹ ಲಾವರಸ)

ಮಲ್ಪೆಯಲ್ಪಷ್ಟೆ ಅಲ್ಲ, ಇಂತಹ ಮನಮೋಹಕ ಕಂಬಾಕೃತಿಗಳು ಐರ್ಲೆಂಡಿನ ಜಯಂಟ್ಸ್‌ ಕಾಸ್ವೆ, ಅಮೇರಿಕಾದ ಸಿಯೆರಾ, ಕ್ಯಾಲಿಪೊರ್ನಿಯ, ಕೊಲಂಬಿಯ ನದಿಯ ಆಸುಪಾಸಿನಲ್ಲಿ ಇಂಥ ವಿರಳವಾದ ನಿಸರ್ಗ ರೂಪಿಸಿದ ಕಲಾಕೃತಿ ಜಗತ್ತಿನ ಕೆಲವು ಪ್ರದೇಶಗಳಲ್ಲಷ್ಟೇ ಕಂಡು ಬರುತ್ತದೆ. ಈ ಹಿನ್ನೆಲೆಯಲ್ಲಿ “ಭಾರತೀಯ ಭೂವೈಜ್ಞಾನಿಕ ಸ್ಮಾರಕ” ಎಂದು ರಕ್ಷಿಸಿದೆ. ಈ ಶಿಲಾ ಮೂಡಿದಾಗ ಭೂಮಿಯಲ್ಲಿ ಡೇನಸರ್‌ಗಳು ಆಳಿ ಆಳಿಹೋಗಿದ್ದವು. ಭೂಮಿ ಬಿರಿದು ಖಂಡಗಳಾಗಿ ಸರಿಯುವ ಸನ್ನಾಹದಲ್ಲಿತ್ತು.

 

ವಿಶೇಷ ಲೇಖನ :
ಜೆ. ಪರಶುರಾಮ
ನಿವೃತ್ತ ಹಿರಿಯ ಭೂವಿಜ್ಞಾನಿ
ಗೌರವಾಧ್ಯಕ್ಷರು, ವಿ.ಕೆ.ಎಸ್., ಚಿತ್ರದುರ್ಗ
ಸದಸ್ಯರು, ಬೆಂಗಳೂರು ಸೌತ್ ಸೆಂಟರ್ (ಒ.)
ಮೊ : 94483 38821

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment