ಬಸವ ಪ್ರತಿಮೆ ನಿರ್ಮಾಣ ಬಾಕಿ ಹಣ ಸಿಎಂ ನೀಡಬೇಕು ; ಬಿಎಸ್‌ ಯಡಿಯೂರಪ್ಪ

suddionenews
1 Min Read

ಸುದ್ದಿಒನ್, ಚಿತ್ರದುರ್ಗ, (ಅ.18): ಧಾರ್ಮಿಕ ವಿಷಯಕ್ಕೆ ಸೀಮಿತವಾಗದೇ 20 ಕೋಟಿ ರೂ.ಗಳನ್ನು ಬಸವಣ್ಣ ಪುತ್ಥಳಿ ನಿರ್ಮಾಣಕ್ಕೆ ನನ್ನ ಅಧಿಕಾರದ ಅವಧಿಯಲ್ಲಿ ಮಂಜೂರು ಮಾಡಿದ್ದು, ಅದರಲ್ಲಿ 5 ಕೋಟಿ ತಲುಪಿದ್ದು, ಉಳಿದ ಹಣವನ್ನು ತಲುಪಿಸುವ ಜವಾಬ್ದಾರಿ ಮುಖ್ಯಮಂತ್ರಿಗಳು ತೆಗೆದುಕೊಳ್ಳಬೇಕು ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಹೇಳಿದರು.

ಮುರುಘಾ ಮಠದಲ್ಲಿ ಸೋಮವಾರ ಸಂಜೆ ಆಯೋಜಿಸಿದ್ದ ಶರಣ ಸಂಸ್ಕೃತಿ ಉತ್ಸವದ ಸಮಾರೋಪ ಹಾಗೂ ಮುರುಘಾ ಶ್ರೀಗಳ ಪೀಠಾರೋಹಣದ ತೃತೀಯ ದಶಮಾನೋತ್ಸವ ಸಮಾರಂಭದಲ್ಲಿ ಶರಣಶ್ರೀ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು.

ಅಕ್ಕಮಹಾದೇವಿಯ ಪ್ರತಿಮೆಯು ಉಡುತಡಿಯಲ್ಲಿ ಸ್ಥಾಪಿಸಲಾಗಿದೆ, ಇಲ್ಲಿ ನಡೆಯುತ್ತಿರುವ ಗುರುವಂದನಾ ಕಾರ್ಯಕ್ರಮ ಅದ್ವಿತೀಯ. ಮುಂದಿನ ದಿನಗಳಲ್ಲಿಯೂ ಈ ಮಠವು ಇಂತಹ ಅನೇಕ ಜನಪರ ಕಾರ್ಯಕ್ರಮಗಳನ್ನು ಮಾಡಲಿ ಎಂದರು.

ಬಸವಣ್ಣನವರ ಆದರ್ಶಗಳನ್ನು ಮುಂದಿಟ್ಟುಕೊಂಡು ಸಾಗುತ್ತಿರುವ ಈ ಮಠ ಬಸವತತ್ತ್ವ ಪ್ರಚಾರ ಮಾಡುತ್ತಿದೆ.  ಕಳೆದ 30 ವರ್ಷದಲ್ಲಿ ತನ್ನದೇ ಆದ ವಿವಿಧ ಸಮಾಜ ಮುಖಿ ಕಾರ್ಯಗಳ ಮೂಲಕ ಸಮಾನತೆಯನ್ನು ಸ್ಥಾಪಿಸಿದೆ. ಪ್ರತಿ ವರ್ಷದ ಶರಣ ಸಂಸ್ಕøತಿ ಉತ್ಸವ ಜನರ ಉತ್ಸವವಾಗಿದೆ. ಇದು ಜನರ ಆಶಾಕಿರಣ ಎಂದು ಹೇಳಿದರು.

Share This Article
Leave a Comment

Leave a Reply

Your email address will not be published. Required fields are marked *