Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಚಿತ್ರದುರ್ಗ | ಚಂದ್ರವಳ್ಳಿ ವಾಯುವಿಹಾರಿ ಬಳಗದಿಂದ ಚಂದ್ರವಳ್ಳಿ ಕೆರೆಗೆ ಬಾಗಿನ ಅರ್ಪಣೆ

---Advertisement---

 

ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552

ಸುದ್ದಿಒನ್, ಚಿತ್ರದುರ್ಗ, ಆಗಸ್ಟ್. 26 : ಚಂದ್ರವಳ್ಳಿಯಲ್ಲಿರುವ ಹುಲಿಗೊಂದಿ ಸಿದ್ದೇಶ್ವರಸ್ವಾಮಿ ದೇವಸ್ಥಾನದಲ್ಲಿ 25 ನೇ ವರ್ಷದ ಶ್ರಾವಣ ಮಾಸದ ಅಂಗವಾಗಿ ಭಾನುವಾರ ವಿಶೇಷವಾಗಿ ಅಲಂಕರಿಸಲಾಗಿತ್ತು.

ಬಗೆ ಬಗೆಯ ಹೂವು ಹಾಗೂ ಹಾರಗಳಿಂದ ಹುಲಿಗೊಂದಿ ಸಿದ್ದೇಶ್ವರಸ್ವಾಮಿಯನ್ನು ಸಿಂಗರಿಸಿ ಪೂಜಿಸಲಾಯಿತು.

ಬೆಳಗಿನಿಂದ ಸಂಜೆಯತನಕ ಸಹಸ್ರಾರು ಭಕ್ತರು ಚಂದ್ರವಳ್ಳಿಗೆ ತೆರಳಿ ಹುಲಿಗೊಂದಿ ಸಿದ್ದೇಶ್ವರಸ್ವಾಮಿಯ ದರ್ಶನ ಪಡೆದು ಭಕ್ತಿ ಸಮರ್ಪಿಸಿದರು. ಸಾವಿರಾರು ಭಕ್ತರಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.

ಹುಲಿಗೊಂದಿ ಸಿದ್ದೇಶ್ವರಸ್ವಾಮಿಯ 25 ನೇ ವರ್ಷದ ಶ್ರಾವಣ ಮಾಸದ ಪ್ರಯುಕ್ತ ಭಾನುವಾರ ಚಂದ್ರವಳ್ಳಿ ವಾಯುವಿಹಾರಿ ಬಳಗದಿಂದ ಚಂದ್ರವಳ್ಳಿ ಕೆರೆಗೆ ಬಾಗಿನ ಅರ್ಪಿಸಲಾಯಿತು.

ಚಂದ್ರವಳ್ಳಿ ವಾಯುವಿಹಾರಿ ಬಳಗದ ಅಧ್ಯಕ್ಷ ಟಿ.ಎಸ್.ಎನ್.ಜಯಣ್ಣ, ಕಾರ್ಯದರ್ಶಿ ಕುಳೇನೂರು ಮುರುಗೇಶ್‍ಗೌಡ್ರು, ಖಜಾಂಚಿ ಡಾ.ಚನ್ನಕೇಶವ, ಚಂದ್ರಣ್ಣ,

ಎಸ್.ಎನ್.ರವಿಕುಮಾರ್, ಫೈಲ್ವಾನ್ ತಿಪ್ಪೇಸ್ವಾಮಿ, ಬ್ಯಾಂಕ್ ಜಯಣ್ಣ, ಯಲ್ಲಪ್ಪರೆಡ್ಡಿ, ಶ್ರೀನಿವಾಸ್, ಷಣ್ಮುಖಪ್ಪ ಎಂ. ಬಿ.ಎಸ್.ಚಂದ್ರಶೇಖರ್, ರಂಗಣ್ಣ, ಶೇಖರ್, ಷಣ್ಮುಖ, ಶಾಂತಮ್ಮ, ಕಾವ್ಯ, ದೇವಸ್ಥಾನದ ಅರ್ಚಕ ಹುಲಿಯಜ್ಜ ಇನ್ನು ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment

🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...