Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಚಿತ್ರದುರ್ಗ : ಬೊಮ್ಮೇನಹಳ್ಳಿ ಬಳಿ ರೈಲಿಗೆ ಸಿಕ್ಕಿ ವ್ಯಕ್ತಿ ಸಾವು : ಗುರುತು ಪತ್ತೆಗೆ ಮನವಿ

---Advertisement---

ಚಿತ್ರದುರ್ಗ. ಮೇ.04:  ಮೇ.3 ರಂದು ಮಧ್ಯಾಹ್ನ 1:30 ಗಂಟೆಗೆ ಚಿತ್ರದುರ್ಗ ಹತ್ತಿರದ ಬೊಮ್ಮೇನಹಳ್ಳಿ ಗ್ರಾಮದ ರೈಲು ಹಳಿಗಳ ಮೇಲೆ ಸುಮಾರು 45 ವರ್ಷದ ವ್ಯಕ್ತಿ ಪ್ಯಾಸೇಂಜರ್ ರೈಲುಗಾಡಿಗೆ ಸಿಕ್ಕಿ ತ್ರೀವ್ರತರನಾಗಿ ಗಾಯಗೊಂಡಿದ್ದಾನೆ. ಈ ವ್ಯಕ್ತಿಯನ್ನು ಹೊಳಲ್ಕೆರೆ ಆಸ್ಪತ್ರೆ ದಾಖಲಿಸಿದ್ದು, ಚಿಕಿತ್ಸೆ ಫಲಕಾರಿಯಾದೆ ಸಾವನ್ನಪ್ಪಿರುತ್ತಾನೆ. ಈ ಕುರಿತು ದಾವಣಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತ ವ್ಯಕ್ತಿಯು ಸಮಾರು 40 ರಿಂದ 50 ವರ್ಷದವನಾಗಿದ್ದು, 5.5 ಅಡಿ ಎತ್ತರ, ಅಗಲವಾದ ಮುಖ, ಸಾಧಾರಣ ಮೈಕಟ್ಟು, ಕಪ್ಪುಬಿಳಿ ಮಿಶ್ರಿತ ಕೂದಲು ಹಾಗೂ ಗಡ್ಡ ಬಿಟ್ಟಿರುತ್ತಾನೆ.

ಅಪಘಾತ ನಡೆದ ವೇಳೆಯಲ್ಲಿ ಹಳದಿ ಬಣ್ಣದ ಚೆಕ್ಸ್ ರೆಡಿಮೇಡ್ ಶರ್ಟ್, ಬಿಳಿ ಬಣ್ಣದ ಸ್ಯಾಂಡೋ ಬನಿಯನ್, ರಾಮ್ ರಾಜ್ ನೀಲಿ ಅಂಡರ್ ವೇರ್, ಹಸಿರು ಬಣ್ಣದ ಪಟ್ಟಿ ಪಟ್ಟಿ ಪಂಚೆ ಧರಿಸಿರುತ್ತಾನೆ. ಮೃತ ವ್ಯಕ್ತಿಯ ಗುರುತು ಪತ್ತೆಯಾದಲ್ಲಿ ದಾವಣಗೆರೆ ಪೊಲೀಸ್ ಠಾಣೆ ದೂರವಾಣಿ ಸಂಖ್ಯೆ 08192-259643, ಮೊಬೈಲ್ ಸಂಖ್ಯೆ 9480802123, ರೈಲ್ವೇ ಕಂಟ್ರೋಲ್ ರೂಮ್ 080-22871291 ಗೆ ಕೆರೆ ಮಾಡುವಂತೆ ಪ್ರಕಟಣೆಯಲ್ಲಿ ತಿಳಿಸಿದೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment