Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಚಿತ್ರದುರ್ಗ | ರಕ್ಷಣೆ ಕೋರಿ ಪೋಷಕರ ವಿರುದ್ದ ಪ್ರೇಮಿಗಳ ದೂರು..!

---Advertisement---

ಸುದ್ದಿಒನ್, ಚಿತ್ರದುರ್ಗ, ಅಕ್ಟೋಬರ್. 16 : ಪ್ರೀತಿಸಿ ಮದುವೆಯಾದ ಜೋಡಿಯೊಂದು ನಮಗೆ ತಂದೆ-ತಾಯಿಯಿಂದಾನೇ ಜೀವ ಬೆದರಿಕೆ ಇದೆ. ರಕ್ಷಣೆ ಕೊಡಿ ಎಂದು ಎಸ್.ಪಿ. ಅವರಿಗೆ ಮನವಿ ಮಾಡಿದ್ದಾರೆ. ಹಿರಿಯೂರು ತಾಲೂಕಿನ ರಾಮಜೋಗಿಹಳ್ಳಿ ಗ್ರಾಮದ ಅಮೃತಾ ಹಾಗೂ ಮಾರುತಿ ರಕ್ಷಣೆ ಕೋರಿದ ಪ್ರೇಮಿಗಳು.

ಮಾರುತಿ, ಪೆಟ್ರೋಲ್ ಬಂಕ್ ನಲ್ಲಿ ಕೆಲಸ ಮಾಡುತ್ತಿದ್ದಾರೆ. ಅಮೃತಾ ಬೆಂಗಳೂರಿನಲ್ಲಿ ಇಂಜಿನಿಯರಿಂಗ್ ಪದವಿ ಮಾಡುತ್ತಿದ್ದಾರೆ ಎನ್ನಲಾಗಿದೆ. ಆದರೆ ಇಬ್ಬರು ಒಂದೇ ಗ್ರಾಮದವರು ಹಾಗೇ ಸಂಬಂಧಿಕರು ಕೂಡ. ಚಿಕ್ಕಂದಿನಿಂದಲೂ ಇಬ್ಬರಿಗೊಬ್ಬರು ಜೊತೆಗೆ ಬೆಳೆದವರು. ಈಗ ಪ್ರೀತಿಯಾಗಿದೆ. ಐದು ವರ್ಷದ ಪ್ರೀತಿಯನ್ನ ಉಳಿಸಿಕೊಳ್ಳುವ ಸಲುವಾಗಿ ಇಬ್ಬರು ಮನೆ ಬಿಟ್ಟು ಬಂದಿದ್ದಾರೆ. ಮದುವೆ ಕೂಡ ಆಗಿದ್ದಾರೆ. ಆದರೆ ಇದಕ್ಕೆ ಮನೆಯವರಿಂದ ವಿರೋಧವಿದೆ.

ಈ ಸಂಬಂಧ ಮಾರುತಿ ಮಾತನಾಡಿ, ನಾವೂ ಐದು ವರ್ಷದಿಂದ ಪ್ರೀತಿ ಮಾಡ್ತಾ ಇದ್ದೀವಿ. ಆದರೆ ಮನೆಯಲ್ಲಿ ಅವಳಿಗೆ ತುಂಬಾ ಕಿರುಕುಳ ಕೊಡ್ತಾ ಇದ್ದಾರೆ. ಅವ್ಳು ನಾನೇ ಬೇಕು ಅಂತ ಬಂದಿದ್ದಾಳೆ. ಪ್ರಾಣ ತೆಗೆಯುವ ಬೆದರಿಕೆಯನ್ನು ಹಾಕ್ತಾ ಇದ್ದಾರೆ‌. ಅವರ ಅಪ್ಪ, ಅಮ್ಮ, ದೊಡ್ಡಪ್ಪ ಅವರೆಲ್ಲಾ ಪ್ರಾಣ ಬೆದರಿಕೆ ಹಾಕ್ತಾ ಇದ್ದಾರೆ. ಹೀಗಾಗಿಯೇ ನ್ಯಾಯ ಕೇಳುವುದಕ್ಕೆ ಬಂದಿದ್ದೇವೆ‌ ಎಂದಿದ್ದಾರೆ.

ಅಮೃತಾ ತಮ್ಮ ಪ್ರೀತಿ ಬಗ್ಗೆ ಮಾತನಾಡಿ, ನಾವಿಬ್ಬರು ಐದು ವರ್ಷದಿಂದ ಲವ್ ಮಾಡ್ತಾ ಇದ್ದೆವು. ಆದ್ರೆ ಮನೆಯಲ್ಲಿ ವಿರೋಧವಿತ್ತು. ಅವನಿಗೆ ಹುಷಾರು ಬೇರೆ ಇರಲಿಲ್ಲ. ಹೀಗಾಗಿ ಆಸ್ಪತ್ರೆಗೆ ಹೋಗಿ ಡಿಸ್ಚಾರ್ಜ್ ಮಾಡಿಸಿಕೊಂಡು ಬಂದೆ. ನನ್ನ ಸ್ವಯಿಚ್ಛೆಯಿಂದಾನೇ ನಾನು ಬಂದಿದ್ದೀನಿ, ನಾನೇ ಕರೆದುಕೊಂಡು ಬಂದಿದ್ದೀನಿ. ಇದಕ್ಕೆ ಮನೆಯವರಿಂದ ಕಿರುಕುಳ ಇದೆ. ನಾವಿಬ್ಬರು ಮದುವೆ ಆಗಿದ್ದೀವಿ ಎಂದಿದ್ದಾರೆ.

ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ

ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.

ವರದಿ ಮಾಡುವುದು ಹೇಗೆ?

  • ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ವಾಟ್ಸಪ್ ಮಾಡಿ: 90369 74702

ನಾವು ಏನು ಮಾಡುತ್ತೇವೆ?

  • ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
  • ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
  • ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now