ಸುದ್ದಿಒನ್, ಜೂನ್. 21 : ನಗರದ ಪ್ರಕೃತಿ ಆಂಗ್ಲ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಆಚರಿಸಲಾಯಿತು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲೆಯ ಅಧ್ಯಕ್ಷರಾದ ರೋಟೇರಿಯನ್ ಪಿ.ಎಚ್. ಎಫ್ ಎಂ.ಕೆ ರವೀಂದ್ರ ರವರು ವಹಿಸಿಕೊಂಡಿದ್ದರು.
ಮಕ್ಕಳಿಗೆ ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಶುಭಾಶಯಗಳನ್ನು ಕೋರುತ್ತ ಯೋಗದ ಮಹತ್ವತೆಯನ್ನು ತಿಳಿಸಿಕೊಟ್ಟರು.
ಚೇತನ್ ಬಾಬು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು.

ಶಾಲೆಯ ಟ್ರಸ್ಟಿ ರಂಗನಾಥ್ ರವರು ಶಾಲಾ ಮಕ್ಕಳಿಗೆ ಓಂಕಾರದೊಂದಿಗೆ ಯೋಗವನ್ನು ಪ್ರಾರಂಭಿಸಿ ಸೂರ್ಯ ನಮಸ್ಕಾರ ಮತ್ತು ಇತರೆ ಯೋಗಾಸನಗಳನ್ನು ಮಾಡಿಸಿದರು.
ಈ ಕಾರ್ಯಕ್ರಮಕ್ಕೆ ಆಗಮಿಸಿದ ಅತಿಥಿಗಳಿಗೆ ಕಾರ್ಯದರ್ಶಿ ಕಾರ್ತಿಕ್ ಎಂ.
ಸ್ವಾಗತಿಸಿದರು.
ಈ ಶಾಲೆಯ ಟ್ರಸ್ಟಿಗಳಾದ ರೋಟೆರಿಯನ್ ಪಿ. ಹೆಚ್. ಎಫ್. ಡಾ.ಮಧುಸೂದನ್ ರೆಡ್ಡಿ, ಶ್ರೀಮತಿ ಸ್ವಾತಿ ಆನಂದ್, ಖಜಾಂಚಿಗಳಾದ ಶ್ರೀಮತಿ ಡಾ. ಶ್ವೇತಾ ಕಾರ್ತಿಕ್ ಉಪಸ್ಥಿತರಿದ್ದರು. ಯೋಗ ಕಾರ್ಯಕ್ರಮದ ನಂತರ ಮಕ್ಕಳಿಗೆ ಸಿಹಿಯನ್ನು ವಿತರಿಸಲಾಯಿತು.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.


















