ಸುದ್ದಿಒನ್, ಚಳ್ಳಕೆರೆ, ಆಗಸ್ಟ್. 11 : ತಾಲ್ಲೂಕಿನ ಸರ್ಕಾರಿ ನೌಕರರ ಭವನದಲ್ಲಿಂದು ದಲಿತ ಸಾಹಿತ್ಯ ಪರಿಷತ್, ಚಿತ್ರದುರ್ಗ ಜಿಲ್ಲಾ ಘಟಕದ ಉದ್ಘಾಟನೆ ಹಾಗೂ ತನುಶ್ರೀ ನಾಲ್ಕನೆಯ ರಾಜ್ಯ ಮಟ್ಟದ ಸಾಹಿತ್ಯ ಸಂಭ್ರಮ ಮತ್ತು ಪುಸ್ತಕ ಲೋಕಾರ್ಪಣೆ ಹಾಗೂ ರಾಜ್ಯ ಮಟ್ಟದ ಕವಿ ಗೋಷ್ಠಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು..
ಈ ಕಾರ್ಯಕ್ರಮವನ್ನು ಕವಿಗಳಾದ ಶ್ರೀ ಕೊರ್ಲಕುಂಟೆ ತಿಪ್ಪೇಸ್ವಾಮಿ ಹಾಗೂ ವೇದಿಕೆಯಲ್ಲಿ ಇರುವ ಇನ್ನಿತರೆ ಗಣ್ಯಾತಿ ಗಣ್ಯರಿಂದ ಸಸಿಗೆ ನೀರೆರೆಯುವ ಮೂಲಕ ಉದ್ಘಾಟಸಲಾಯಿತು.
ಈ ಕಾರ್ಯಕ್ರಮದಲ್ಲಿ ಸಮ್ಮೇಳನದ ಅಧ್ಯಕ್ಷತೆಯನ್ನು ಡಾ.ಚೆನ್ನ ಬಸಯ್ಯ ಹಿರೇಮಠ,ಘನ ಉಪಸ್ಥಿಯನ್ನು ಚಳ್ಳಕೆರೆ ತಾಲ್ಲೂಕಿನ ಜನಪ್ರಿಯ ಶಾಸಕರಾದ ಟಿ.ರಘುಮೂರ್ತಿ, ಎಸ್.ರಾಜು ಸೋಲೆನಹಳ್ಳಿ, ದಲಿತ ಸಾಹಿತ್ಯ ಪರಿಷತ್,
ಜಿಲ್ಲಾಧ್ಯಕ್ಷರಾದ ಕೋಡಿಹಳ್ಳಿ ಟಿ.ಶಿವಮೂರ್ತಿ, ಬಸವರಾಜ್ ಪೂಜಾರ್, ಗಿರೀಶ್.ಎಸ್.ಎಂ, ಅಣ್ಣಪ್ಪ ಮೇಟಿ ಗೌಡ, ದುಮ್ಮೆನಹಳ್ಳಿ ಅಶೋಕ್ ಕುಮಾರ್, ಚೌಳೂರು ಪ್ರಕಾಶ್, ದ.ಸಾ.ಪ ಬೆಂಗಳೂರು ವಿಭಾಗೀಯ ಸಂಯೋಜಕರಾದ ಗಣಪತಿ ಗೋ ಛಲವಾದಿ, ಪಿ. ಪ್ರಹಾಲ್ಲದ್, ಡಾ.ಎಸ್.ಏಚ್ ಶಫಿ ಉಲ್ಲಾ ,ಡಿ.ಜಿ ತಿರುಮಲ,ರೇವಣ ಸಿದ್ದಯ್ಯ, ಡಾ.ಯಲ್ಲಪ್ಪ ಕೆ.ಕೆ ಪುರ, ಯುವ ಕವಯಿತ್ರಿ ಡಿ.ಶಬ್ರಿನಾ ಮೊಹಮದ್ ಅಲಿ, ಶಾರದಾ ಜೈರಾಂ, ಭಿಮೇಶ್ ತಳವಾರ್,
ಮುದ್ದುರಾಜ್ ಹುಲಿ ತೊಟ್ಲು,ಬಸವರಾಜ್ ಕರುವಿನ, ಉಪಸ್ಥಿರಿದ್ದರು.
ಇದೇ ಸಂದರ್ಭದಲ್ಲಿ ಇನ್ನೂ ಅನೇಕ ಕವಿಗಳಿಗೆ ಮತ್ತು ಸಾಧಕರಿಗೆ ರಾಜ್ಯ ಮಟ್ಟದ ಪ್ರಶಸ್ತಿ ನೀಡಿ ಗೌರವಿಸಲಾಯಿತು,
ಈ ಕಾರ್ಯಕ್ರಮದಲ್ಲಿ ದಲಿತ ಸಾಹಿತ್ಯ ಪರಿಷತ್, ಜಿಲ್ಲಾ ಘಟಕದ ಎಲ್ಲ ಪದಾಧಿಕಾರಿಗಳಿಗೆ ಆಯ್ಕೆ ಪ್ರಮಾಣ ಪತ್ರ ನೀಡಿ ವಿಶೇಷವಾಗಿ ಸನ್ಮಾನಿಸಲಾಯಿತು. ತನುಶ್ರೀ ಪ್ರಕಾಶನ ಹಾಗೂ ತನುಶ್ರೀ ಸಾಂಸ್ಕೃತಿಕ ಕಲಾ ವೇದಿಕೆಯ ಎಲ್ಲ ಪದಾಧಿಕಾರಿಗಳು, ಸಾಹಿತಿಗಳು,ಪತ್ರಕರ್ತರು,ಸಾಧಕರು, ಹಾಗೂ ರಾಜ್ಯ ಮಟ್ಟದ ಕವಿಗೋಷ್ಠಿಯಲ್ಲಿ 50 ಕ್ಕೂ ಹೆಚ್ಚು ಕವಿಗಳು ಭಾಗವಹಿಸಿದ್ದರು.









