ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817
ಸುದ್ದಿಒನ್, ಚಿತ್ರದುರ್ಗ ಆ. 09 : ನಗರದ ಭಾರತೀಯ ಜನತಾ ಪಾರ್ಟಿ ಮಹಿಳಾ ಮೋರ್ಚಾದಿಂದ ನಗರದಲ್ಲಿಂದು ರಕ್ಷಾ ಬಂಧನವನ್ನು ಆಚರಣೆ ಮಾಡಲಾಯಿತು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಬಳಿಯಲ್ಲಿನ ಒನಕೆ ಓಬವ್ವ ಪ್ರತಿಮೆಗೆ ಮಾರ್ಲಾಪಣೆ ಮಾಡಿದ ಮಹಿಳಾ ಕಾರ್ಯಕರ್ತೆಯರು ನಂತರ ಅಲ್ಲಿ ಕೆಲಸ ಮಾಡುತ್ತಿದ್ದ ಪೌರ ಕಾರ್ಮಿಕ ಹಾಗೂ ಪೋಲಿಸ್ ಸಿಬ್ಬಂದಿಗೆ ರಾಖಿಯನ್ನು ಕಟ್ಟುವುದರ ಮೂಲಕ ಸಹೋದರತ್ವವನ್ನು ಸಾರಿದರು. ಇದಾದ ನಂತರ ಜಿಲ್ಲಾ ಡಿಎಆರ್ ಪೋಲಿಸ್ ಕಚೇರಿಗೆ ಭೇಟಿ ನೀಡಿ ಅಲ್ಲಿನ ಪೋಲಿಸ್ ಸಿಬ್ಬಂದಿಗೆ ರಾಖಿಯನ್ನು ಕಟ್ಟುವುದರ ಮೂಲಕ ರಕ್ಷಾ ಬಂಧನವನ್ನು ಆಚರಣೆ ಮಾಡಲಾಯಿತು. ನಗರ ಪೋಲಿಸ್ ಠಾಣೆಗೆ ಬೇಟಿ ನೀಡಿ ಅಲ್ಲಿನ ಪೋಲಿಸ್ ಸಿಬ್ಬಂದಿಗೆ ಸಹಾ ರಾಖಿಯನ್ನು ಕಟ್ಟಲಾಯಿತು.
ಜಿ.ಪಂ. ಮಾಜಿ ಅಧ್ಯಕ್ಷರಾದ ಶ್ರೀಮತಿ ಸೌಭಾಗ್ಯ ಬಸವರಾಜನ್ ಮಾತನಾಡಿ, ನಾವು ಭಾರತೀಯರು ವಿದೇಶಿಯರನ್ನು ಅನುಕರಿಸುತ್ತಾ ನಮ್ಮ ನಿಜವಾದ ಸಂಸ್ಕೃತಿಯನ್ನು ಮರೆತು ಸ್ನೇಹ ಆತ್ಮಿಯತೆಯಿಂದ ದೂರ ಹೋಗುತ್ತಿದ್ದೇವೆ. ಇಂದಿನ ಯುವ ಪೀಳಿಗೆ `ವ್ಯಾಲೆಂಟೆನ್ ಡೇ’ಗೆ ಮಹತ್ವವನ್ನು ಕೊಟ್ಟಷ್ಟು ಸಹೋದರತ್ವದ ಭಾವನೆಯನ್ನು ಬೆಳೆಸುವ ಸ್ನೇಹದ ಸೂಚಕವಾದ ರಾಖಿಗೆ ಬೆಲೆ ನೀಡುತ್ತಿಲ್ಲ. ಇಂತಹ ಸಮಯದಲ್ಲಿ ರಾಖಿಯ ಮಹತ್ವವನ್ನು ತಿಳಿದುಕೊಳ್ಳುವುದು ಅವಶ್ಯಕವಾಗಿದೆ. ರಾಖಿಯಲ್ಲಿ ಇರುವ ದಾರವು ನಿಯಮ ಹಾಗೂ ಸಂಯಮದ ಸೂಚಕ, ದುರ್ಗುಣ, ದುಶ್ಚಟಗಳನ್ನು ಬಿಡುವುದು ಕಾಣಿಕೆಯ ಅರ್ಥವಾಗಿದೆ. ರಾಷ್ಟ್ರಕವಿ ರವಿಂದ್ರನಾಥ ಟಾಗೋರರು ರಾಖಿಯು ಹಿಂದೂ-ಮುಸ್ಲಿಂ ಜನಾಂಗದಲ್ಲಿ ಪ್ರೀತಿ, ಬಂಧುತ್ವದ ಸಂಕೇತ ಎಂದು ಅವರು ಬಂಗಾಳದ ವಿಭಜನೆಯ ಸಮಯದಲ್ಲಿ ರಕ್ಷಾಬಂಧನದ ಕಾರ್ಯಕ್ರಮಗಳನ್ನು ಆಯೊಜಿ ಸಿದ್ದರು.ಹಿಂದೂ-ಮುಸ್ಲಿಂಮರು ಏಕತೆಯನ್ನು ಕಾಪಾಡಿಕೊಂಡು ಬ್ರಿಟೀಷರ ವಿರುದ್ಧ ಹೋರಾಡಲಿ ಎಂಬುದು ಅವರ ಪ್ರಯತ್ನವಾಗಿತ್ತು ಎಂದರು.
ಬಿಜೆಪಿ ರಾಜ್ಯ ಮಹಿಳಾ ಮೋರ್ಚಾ ಕಾರ್ಯಕಾರಿಣಿ ಸದಸ್ಯರಾದ ಶ್ರೀಮತಿ ಶ್ಯಾಮಲ ಶಿವಪ್ರಕಾಶ್ ಮಾತನಾಡಿ, ಭಾರತ ದೇಶದಲ್ಲಿ ಹಬ್ಬ ಹರಿದಿನಗಳಿಂದ ಕೂಡಿದ ಶ್ರಾವಣ ಮಾಸಕ್ಕೆ ವಿಶೇಷ ಮಹತ್ವ ಇದೆ. ಈ ಎಲ್ಲ ಹಬ್ಬಗಳಲ್ಲಿ “ನೂಲಹುಣ್ಣಿಮೆ” ಅಥವಾ `ರಕ್ಷಾಬಂಧನ’ ಒಂದು ಪ್ರಮುಖ ಹಬ್ಬ. ರಕ್ಷಾ ಬಂಧನ ಭಾರತದ ಸಂಸ್ಕøತಿ ಮತ್ತು ಮಾನವೀಯ ಮೌಲ್ಯಗಳನ್ನು ಎತ್ತಿ ತೋರಿಸುವ, ಅನೇಕ ಆಧ್ಯಾತ್ಮಿಕ ರಹಸ್ಯಗಳನ್ನು ಬೆಳಗಿಸುವ ಮತ್ತು ಸಾರ್ವತ್ರಿಕ ಸಹೋದರ-ಸಹೋದರಿ ಸಂಬಂಧವನ್ನು ನಮಗೆ ನೆನಪಿಸುವ ಕೊಡುಗೆಯಾಗಿದೆ. ರಾಖಿ ಕಟ್ಟುವ ಮೊದಲು, ಸಹೋದರಿಯು ಅಣ್ಣನ ಹಣೆಯ ಮೇಲೆ ಶ್ರೀಗಂಧದ ತಿಲಕವನ್ನು ಇಡುತ್ತಾಳೆ. ಇದು ಶುದ್ಧ, ಶೀತಲ ಮತ್ತು ಪರಿಮಳಯುಕ್ತ ಜೀವನವನ್ನು ನಡೆಸಲು ಪ್ರೇರೇಪಿಸುತ್ತದೆ. ಬಲಗೈಯಿಂದ ತಿಲಕ ಮತ್ತು ರಾಖಿಯನ್ನೂ ಕಟ್ಟಲಾಗುತ್ತದೆ. ರಕ್ಷಾಬಂಧನ ಹಬ್ಬವು ಪ್ರಾಚೀನ ಕಾಲದಿಂದ ನಡೆದು ಬಂದ ಹಬ್ಬವಾಗಿದ್ದು ವಿಶ್ವಕ್ಕೆ ಸ್ನೇಹ ಮತ್ತು ಮಮತೆಯ ಸಂದೇಶ ನೀಡುತ್ತದೆ. 4-5 ನಿಮಿಷಗಳಲ್ಲಿ ಮುಗಿಯುವ ರಾಖಿ ಕಟ್ಟುವ ಈ ಕಾರ್ಯಕ್ರಮ ಸೋದರ-ಸೋದರಿಯ ಸಂಬಂಧವನ್ನು ಗಟ್ಟಿಗೊಳಿಸುತ್ತದೆ. ಈ ಮಧುರ ಸಂಬಂಧ ಉಸಿರು ಇರುವವರೆಗೂ ಇರುತ್ತದೆ. ಕಟ್ಟಿರುವ ದಾರ ಹೋದರೂ ಹೃದಯದಲ್ಲಿ ಇರುವ ಸ್ನೇಹ ದೃಢವಾಗಿರುತ್ತದೆ ಎಂದರು.
ಈ ಸಂದರ್ಭದಲ್ಲಿ, ಮಹಿಳಾ ಮೋರ್ಚಾದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಾಂತಮ್ಮ, ಜಗದಾಂಭ, ಸುಮಾ, ಕಾಂಚನ, ವೀಣಾ, ಅಂಬಿಕಾ, ಜಿಲ್ಲಾ ಉಪಾಧ್ಯಕ್ಷರಾದ ರಜನಿ ಜಿಲ್ಲಾ ವಕ್ತಾರ ನಾಗರಾಜ್ ಬೇದ್ರೇ, ಗುರು, ಶಿವಪ್ರಕಾಶ್ ಸೇರಿದಂತೆ ಇತರರು ಭಾಗವಹಿಸಿದ್ದರು.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.












