ಕಡಿಮೆ ಬೆಲೆಗೆ ಚಿನ್ನದ ನಾಣ್ಯಗಳನ್ನು ನೀಡುವುದಾಗಿ ನಂಬಿಸಿ ವಂಚನೆ : ಚಿಕ್ಕಜಾಜೂರು ಪೊಲೀಸರಿಂದ ಮೂವರ ಬಂಧನ, 47 ಲಕ್ಷ ವಶ

suddionenews
2 Min Read

 

ಸುದ್ದಿಒನ್, ಚಿತ್ರದುರ್ಗ, ಜುಲೈ.17 : ಚಿನ್ನದ ನಾಣ್ಯಗಳನ್ನು ಕಡಿಮೆ ಬೆಲೆಗೆ ಕೊಡುವುದಾಗಿ ಹೇಳಿ ನಂಬಿಸಿ ಹೈದರಾಬಾದ್ ಮೂಲದ ದುರ್ಗಾಪ್ರಸಾದ್ ಎಂಬುವವರಿಗೆ 54 ಲಕ್ಷ ರೂಪಾಯಿ ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿಕ್ಕಜಾಜೂರು ಪೊಲೀಸರು ಮೂವರನ್ನು ವಶಕ್ಕೆ ಪಡೆದು 47 ಲಕ್ಷ ರೂಪಾಯಿಗಳನ್ನು ವಶಪಡಿಸಿಕೊಂಡಿದ್ದಾರೆ.

ಪರಶುರಾಮ, ರುದ್ರಪ್ಪ ಮತ್ತು ಧರ್ಮಪ್ಪ ಬಂಧಿತ ಆರೋಪಿಗಳು. ಉಳಿದ ಇಬ್ಬರು ಆರೋಪಿತರ ಪತ್ತೆ  ಕಾರ್ಯ ಮುಂದುವರೆದಿದೆ.

ಘಟನೆ ವಿವರ : ತೆಲಂಗಾಣದ ಹೈದರಾಬಾದ್ ಸಮೀಪದ ತಿರುಮಲಗಿರಿ ವಾಸಿಯಾದ ದುರ್ಗಾಪ್ರಸಾದ್ ಎಂಬುವವರಿಗೆ ರಮೇಶ ಮತ್ತು ಇತರರು ಫೋನ್ ಮೂಲಕ  ಪರಿಚಯ ಮಾಡಿಕೊಂಡು ಮನೆ ಕಟ್ಟಲು ಪಾಯ ತೆಗೆಯುವಾಗ ನಮಗೆ ಸುಮಾರು 2 ಕೆ.ಜಿ ಗಳಷ್ಟು ಹಳೆಯ ಚಿನ್ನದ ನಾಣ್ಯಗಳು ದೊರೆತಿದ್ದು,  ನೀವು ನಮಗೆ ಪರಿಚಯಸ್ಥರು ಇರುವುದರಿಂದ ನಿಮಗೆ ಕಡಿಮೆ ಬೆಲೆಗೆ ಕೊಡುತ್ತೇವೆ.  ಈ ವಿಷಯವನ್ನು ಯಾರ ಬಳಿಯು ಹೇಳಬೇಡಿ ಎಂದು ದುರ್ಗಾಪ್ರಸಾದ್‍ಗೆ ಹೇಳಿ ಅವರನ್ನು ಹೊಳಲ್ಕೆರೆ ತಾಲ್ಲೂಕು ದಂಡಿಗೇನಹಳ್ಳಿ ಗ್ರಾಮದಿಂದ ಮುಂದೆ ಸಂತೆಬೆನ್ನೂರು ಗ್ರಾಮದ ಕಡೆಗೆ ಹೋಗುವ ರಸ್ತೆ ಪಕ್ಕದಲ್ಲಿರುವ ಮಾವಿನ ತೋಟಕ್ಕೆ ಬಂದು ಆರೋಪಿತರಿಗೆ ನೀಡಿರುತ್ತಾರೆ. ಮೊದಲು ಒಂದು ಅಸಲಿ ಚಿನ್ನದ  ನಾಣ್ಯವನ್ನು ಕೊಟ್ಟು ಪರಿಕ್ಷಿಸಿ ಕೊಳ್ಳುವಂತೆ ತಿಳಿಸುತ್ತಾರೆ. ನಂತರ ದುರ್ಗಾಪ್ರಸಾದ್ ರವರು ಅದನ್ನು ತಮ್ಮ ಗ್ರಾಮಕ್ಕೆ ತೆಗೆದುಕೊಂಡು ಹೋಗಿ ತಾವು ತೆಗೆದುಕೊಂಡು ಹೋದ ನಾಣ್ಯವನ್ನು ಪರೀಕ್ಷಿಸಿದಾಗ ಆ ನಾಣ್ಯ ಅಸಲಿಯಿದಾಗಿರುತ್ತದೆ‌ ಎಂದು ನಂಬಿ 54 ಲಕ್ಷ ಹಣವನ್ನು ಆರೋಪಿಗಳಿಗೆ ನೀಡುತ್ತಾರೆ. ನಂತರ ಆರೋಪಿಗಳು ಜನರು ಓಡಾಡುತ್ತಿರುತ್ತಾರೆ ಅದ್ದರಿಂದ ಚಿನ್ನದ ನಾಣ್ಯಗಳನ್ನು ಇಲ್ಲಿಯೇ ಪಕ್ಕದಲ್ಲಿ ಇಟ್ಟಿದ್ದು, ತಂದು ಕೊಡುತ್ತೇವೆ
ಎಂದು ಹೇಳಿ ಹಣ ಪಡೆದು ಹೋದವರು ಮರಳಿ ಬಂದಿರುವುದಿಲ್ಲ.

ಈ ವಿಚಾರಕ್ಕೆ ಸಂಬಂಧಿಸಿದಂತೆ ದುರ್ಗಾಪ್ರಸಾದ್ ಅವರು ಹೊಳಲ್ಕೆರೆ ಪೊಲೀಸ್ ಠಾಣೆಗೆ ದೂರು ನಿಡುತ್ತಾರೆ. ಈ ದೂರಿನ ಮೇರೆಗೆ ಪೊಲೀಸ್ ಅಧೀಕ್ಷಕರ ಮಾರ್ಗದರ್ಶನದಲ್ಲಿ ಹೊಳಲ್ಕೆರೆ ವೃತ್ತ ನಿರೀಕ್ಷಕರಾದ ಎಂ.ಬಿ.ಚಿಕ್ಕಣ್ಣನವರ್, ಚಿಕ್ಕಜಾಜೂರು ಪೊಲೀಸ್ ಠಾಣೆಯ ಮಹಿಳಾ ಪಿ.ಎಸ್.ಐ ಶ್ರೀಮತಿ ದೀಪು ಪಿ.ಎಸ್.ಐ ಸಚಿನ್ ಪಟೇಲ್ ಸಿಬ್ಬಂದಿಯರಾದ ರುದ್ರೇಶ್, ಗಿರೀಶ್, ಕುಮಾರಸ್ವಾಮಿ, ಕಿರಣ್, ಸಿದ್ದಲಿಂಗೇಶ್ವರ, ಕಿರಣ್ ಕುಮಾರ, ಮಲ್ಲೇಶ, ರವಿಕುಮಾರ್, ಕುಮಾರಸ್ವಾಮಿ, ಯೋಗೀಶ್ ರವರುಗಳ ತಂಡ ಆರೋಪಿಗಳ ಪತ್ತೆಗೆ ಬಲೆ ಬೀಸುತ್ತಾರೆ.

ಕಾರ್ಯಾಚರಣೆ ಆರಂಭಿಸಿದ ಪೊಲೀಸರು ಆರೋಪಿಗಳನ್ನು ಪತ್ತೆ ಹಚ್ಚಿ ವಿಚಾರಣೆಗೊಳಪಡಿಸಿದಾಗ ತಾವು ಮೋಸದಿಂದ ಪಡೆದ ಹಣದಲ್ಲಿ  6,82,000/- ರೂ ಹಣವನ್ನು ಐದು ಜನರು ಹಂಚಿಕೊಂಡು ಖರ್ಚು ಮಾಡಿಕೊಂಡಿದ್ದು, ಉಳಿದ 47,18,000/-ರೂ ಹಣವನ್ನು ಮುಂದಿನ ದಿನಗಳಲ್ಲಿ ಎಲ್ಲಾ ಸೇರಿ ಹಂಚಿಕೊಳ್ಳುವ ಉದ್ದೇಶದಿಂದ ಸಂತೇಬೇನ್ನೂರು ವ್ಯಾಪ್ತಿಯಲ್ಲಿರುವ ದೊಡ್ಡಬ್ಬಿಗರೆ ಗ್ರಾಮದ ಸಮೀಪದ ತೋಟದ ಮನೆಯಲ್ಲಿ ಬಚ್ಚಿಟ್ಟಿರುವುದಾಗಿ ವಿಚಾರಣೆ ವೇಳೆ ಒಪ್ಪಿಕೊಂಡಿರುತ್ತಾರೆ.

ಚಿಕ್ಕಜಾಜೂರು ಪೊಲೀಸರ ಈ ಯಶಸ್ವಿ ಕಾರ್ಯವನ್ನು ಪೊಲೀಸ್ ಅಧೀಕ್ಷಕರು ಶ್ಲಾಘಿಸಿರುತ್ತಾರೆ.

Share This Article
Leave a Comment

Leave a Reply

Your email address will not be published. Required fields are marked *