ಜಾತಿಗಣತಿ ವರದಿ ವಿಚಾರವಾಗಿ ವರ್ಷಗಳಿಂದಾನೇ ಪರ ವಿರೋಧ ಚರ್ಚೆ ನಡೆಯುತ್ತಿದೆ. ಆದರೆ ಅಂಕಿ ಅಂಶಗಳು ಬಹಿರಂಗಗೊಂಡ ಬಳಿಕವಂತು ಈ ವಿಚಾರ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಅದರಲ್ಲೂ ವಿರೋಧ ಮಾಡುವವರ ಸಂಖ್ಯೆಯೇ ಜಾಸ್ತಿಯಾಗಿದೆ. ಲಿಂಗಾಯತರು ಹಾಗೂ ಒಕ್ಕಲಿಗರು ಒಟ್ಟಾಗಿದ್ದು ಬಾರೀ ವಿರೋಧ ವ್ಯಕ್ತಪಡಿಸಿವೆ. ಇದೀಗ ಸಚಿವ ಸಂಪುಟಕ್ಕೂ ಮುನ್ನ ಲಿಂಗಾಯತರು ಸಭೆ ನಡೆಸಿ ನಿರ್ಣಯ ಒಂದನ್ನ ತೆಗೆದುಕೊಂಡಿದ್ದಾರೆ.
ಒಂದು ವೇಳೆ ಜಾತಿ ಗಣತಿ ವರದಿ ಏನಾದ್ರೂ ಜಾರಿಯಾದ್ರೆ ಒಟ್ಟಾಗಿ ಹೋರಾಟ ಮಾಡುವ ಕರೆ ನೀಡಿವೆ ಲಿಂಗಾಯತ ಹಾಗೂ ಒಲ್ಕಲಿಗ ಸಮುದಾಯದವರು. ಈ ಜಾತಿ ಗಣತಿ ಅಂಕಿ ಅಂಶಗಳ ಚರ್ಚೆಗೆ ಎಲ್ಲರಿಗೂ ಮುಕ್ತ ಅವಕಾಶ ನೀಡಲಾಗಿದೆ. ಸಿಎಂ ಸಿದ್ದರಾಮಯ್ಯ ಅವರು ಸಚಿವ ಸಂಪುಟದಲ್ಲಿ ಈ ಬಗ್ಗೆ ಚರ್ಚೆಗೆ ಅವಕಾಶ ಮಾಡಿಕೊಟ್ಟಿದ್ದಾರೆ. ಅದಕ್ಕೂ ಮುನ್ನವೇ ಲಿಂಗಾಯತರು ಸಭೆ ನಡೆಸಿ ಒಂದು ನಿರ್ಣಯ ಕೈಗೊಂಡಿದ್ದಾರೆ.
ಮೊದಲಿನಿಂದಲೂ ವಿರೋಧವಿರುವ ಈ ಜಾತಿಗಣತಿ ವರದಿಯನ್ನು ಲಿಂಗಾಯತರ ಸಭೆಯಲ್ಲೂ ತಿರಸ್ಕಾರ ಮಾಡುವ ನಿರ್ಣಯ ಕೈಗೊಂಡಿದ್ದಾರೆ. ಒಂದು ವೇಳೆ ಜಾತಿ ಗಣತಿ ವರದಿ ಜಾರಿಯಾದರೆ ಸಾರ್ವಜನಿಕವಾಗಿ ಚರ್ಚೆಗೆ ಅವಕಾಶ ನೀಡಬೇಕೆಂದು ಆಗ್ರಹ ಮಾಡುವ ತೀರ್ಮಾನ ಕೈಗೊಳ್ಳಲಾಗಿದೆ. ಈ ಜಾತಿ ಗಣತಿ ವರದಿ ಸಂಬಂಧ ಕಳೆದ ಶುಕ್ರವಾರವೂ ಸಭೆ ನಡೆಸಿದ್ದರು. ಆದರೆ ಅಂದು ಯಾವುದೆ ನಿರ್ಣಯವನ್ನು ಕೈಗೊಂಡಿರಲಿಲ್ಲ. ಈಗ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ನಡೆಯುವ ಸಚಿವ ಸಂಪುಟದಲ್ಲಿ ಏನು ನಿರ್ಧಾರ ಕೈಗೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ. ಯಾಕಂದ್ರೆ ಮೂರು ಪಕ್ಷಗಳಲ್ಲಿಯೂ ಈ ವರದಿಯನ್ನು ವಿರೋಧಿಸುವವರು ಇದ್ದಾರೆ. ಹೀಗಾಗಿ ಎಲ್ಲರ ಚಿತ್ತ ಸಿಎಂ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ನಡೆಯುವ ಸಂಪುಟದತ್ತ ನೆಟ್ಟಿದೆ.










