ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817
ಸುದ್ದಿಒನ್, ಚಿತ್ರದುರ್ಗ, ಜು. 09 :
ಭೂಮಿಗೆ ಒಂದು ಬೀಜ ಬಿದ್ದರೆ ಅದು ಯಾವ ರೀತಿ ಬೆಳೆದು ಆಹಾರವನ್ನು ನೀಡುತ್ತದೆ. ಆದೇ ರೀತಿ ಮನಸ್ಸಿಗೆ ಅಕ್ಷರವನ್ನು ಬಿತ್ತಿದಾಗ ಅದು ಮುಂದೆ ಹೆಮ್ಮರವಾಗಿ ನಿಮ್ಮ ಮಕ್ಕಳನ್ನು ಕಾಪಾಡುತ್ತದೆ ಎಂದು ಕಬೀರಾನಂಧಾಶ್ರಮದ ಶ್ರೀ ಶಿವಲಿಂಗಾನಂದ ಶ್ರೀಗಳು ತಿಳಿಸಿದರು.
ಚಿತ್ರದುರ್ಗ ನಗರದ ಶ್ರೀ ಸದ್ಗುರು ಆಂಗ್ಲ ಮಾಧ್ಯಮ ಶಾಲೆಯ ಮಕ್ಕಳಿಗೆ ಕಬೀರಾನಂಧಾಶ್ರಮದ ಆವರಣದಲ್ಲಿ ಗುರುವಾರ ಏರ್ಪಡಿಸಿದ್ದ ಅಕ್ಷರ ಅಭ್ಯಾಸ ಕಾರ್ಯಕ್ರಮದಲ್ಲಿ ಮಕ್ಕಳಿಗೆ ಅಕ್ಷರ ಅಭ್ಯಾಸವನ್ನು ಮಾಡಿಸಿ ಮಾತನಾಡಿದ ಶ್ರೀಗಳು, ಅಕ್ಷರ ಎಂದರೆ ಬರೀ ವರ್ಣಮಾಲೆ ಅಲ್ಲ, ಅದರೆ ಕ್ಷರ ಎಂದರೆ ನಾಶ ಅಕ್ಷರ ಎಂದರೆ ನಾಶ ರಹಿತವಾದದು ಎಂದು ಅರ್ಥವನ್ನು ನೀಡುತ್ತದೆ. ಭೂಮಿಗೆ ಕಾಳನ್ನು ಬಿತ್ತಿದರೆ ಫಸಲನ್ನು ನೀಡುತ್ತದೆ ಅದೇ ರೀತಿ ಎದೆ ಅಥವ ಮನ ಎಂಬ ಭೂಮಿಗೆ ಅಕ್ಷರ ಎಂಬ ಕಾಳನ್ನು ಬಿತ್ತಿದರೆ ಅದು ಮುಂದೆ ಅವನ ಜೀವನವನ್ನು ಫಸಲಿನಂತೆ ಸಫಲವನ್ನು ಮಾಡುತ್ತದೆ. ಇದು ಆರಂಭಿಕವಾದ ಮೊದಲನೇ ಪೂಜೆಯಾಗಿದೆ, ರೈತ ತನ್ನ ಭೂಮಿಯಲ್ಲಿ ಬಿತ್ತನೆಯನ್ನು ಮಾಡುವ ಮುನ್ನಾ ಭೂಮಿ ತಾಯಿಯನ್ನು ಪೂಜೆ ಮಾಡಿ ತದ ನಂತರ ಬಿತ್ತನೆಯನ್ನು ಮಾಡುತ್ತಾನೆ ಅದೇ ರೀತಿ ಮಕ್ಕಳಿಗೆ ಅಕ್ಷರ ಎನ್ನುವಂತ ಬೀಜವನ್ನು ಬಿತ್ತುವ ಕೆಲಸವನ್ನು ಮಾಡಲಾಗಿದೆ, ಈ ರೀತಿಯಾಗಿ ಅಭ್ಯಾಸವನ್ನು ಮಾಡಿಸುವುದರೆ ಮೂಲಕ ಅವರ ಪ್ರಗತಿಗೆ ನೆರವಾಗಬೇಕಿದೆ ಎಂದರು.
ಆರಂಭದಲ್ಲಿ ಮಕ್ಕಳಿಗೆ ತಾಯಿಯಿಂದ ಅಕ್ಷರ ಅಭ್ಯಾಸವನ್ನು ಮಾಡಿಸಲಾಗಿದೆ ತದ ನಂತರ ಗುರುಗಳಾದ ನಮ್ಮಿಂದ ಅಕ್ಷರ ಅಭ್ಯಾಸವನ್ನು ಮಾಡಿಸಲಾಗಿದೆ. ಮೊದಲಿಗೆ ತಾಯಿ ಮಗುವಿಗೆ ಗುರು ತದ ನಂತರ ಅಕ್ಷರವನ್ನು ಕಲಿಸಿದವರು ಗುರು.ಮುಂದಿನ ದಿನಮಾನದಲ್ಲಿ ನಿಮ್ಮ ಮಕ್ಕಳ ಭವಿಷ್ಯ ಉಜ್ವಲವಾಗಲಿ, ನಿಮ್ಮ ಮಕ್ಕಳು ನಿಮ್ಮ ಮುಂದೆ ಬೆಳೆದು ಉನ್ನತವಾದ ಸ್ಥಾನವನ್ನು ಪಡೆಯುವಂತಾಗಲೀ ಎಂದು ಶ್ರೀಗಳು ಆಶಿಸಿದರು.
ಈ ಸಂದರ್ಭದಲ್ಲಿ ನೂರಕ್ಕೂ ಹೆಚ್ಚು ಮಕ್ಕಳು ಅಕ್ಷರ ಅಭ್ಯಾಸದಲ್ಲಿ ತೂಡಗಿದ್ದರು, ತಟ್ಟೆಯಲ್ಲಿ ಅಕ್ಕಿಯನ್ನು ಹಾಕಿ ಹಣ್ಣು, ಹೂವು, ಎಲೆ.ಅಡಿಕೆಯನ್ನು ಇಟ್ಟು ಅಕ್ಕಿಯಲ್ಲಿ ಮಕ್ಕಳಿಂದ ಶ್ರೀಗಳು ಅಕ್ಷರ ಅಬ್ಯಾಸವನ್ನು ಮಾಡಿಸಿದರು, ಇದರಲ್ಲಿ ಹಿಂದೂ ಮುಸ್ಲಿಂ ಎನ್ನದೆ ಎಲ್ಲರು ಸಹಾ ತಮ್ಮ ಮಕ್ಕಳ ಒಳಿತಿಗಾಗಿ ಈ ಕಾರ್ಯದಲ್ಲಿ ಭಾಗವಹಿಸಿದ್ದರು. ಕಾರ್ಯಕ್ರದಲ್ಲಿ ಗಣಪತಿ ಶಾಸ್ತ್ರಿ, ಸಂಸ್ಕøತ ಶಿಕ್ಷಕರಾಧ ಸುಬ್ರರಾಯ ಭಟ್ಟರು, ಆಂಗ್ಲ ಮಾಧ್ಯಮಾ ಶಿಕ್ಷಕರಾಧ ಕರಿಷ್ಮ, ಸಹ ಶಿಕ್ಷಕರಾದ ಮಂಜುಳಾ ಸೇರಿದಂತೆ ಮಕ್ಕಳ ಪೋಷಕರು ಭಾಗವಹಿಸಿದ್ದರು.










