Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಬಜೆಟ್ ಲೆಕ್ಕಚಾರ ; ಜನರಿಗಿಂತ ಸಚಿವರಿಗೆ ನಿರೀಕ್ಷೆ, ತುಮಕೂರಿಗೆ ಹೆಚ್ಚು ಅನುದಾನ ತರುವ ತವಕ..!!

ಸಚಿವ ಪರಮೇಶ್ವರ್
---Advertisement---

ಬಜೆಟ್ ಲೆಕ್ಕಚಾರ ; ಜನರಿಗಿಂತ ಸಚಿವರಿಗೆ ನಿರೀಕ್ಷೆ, ತುಮಕೂರಿಗೆ ಹೆಚ್ಚು ಅನುದಾನ ತರುವ ತವಕ..!!

ಬೆಂಗಳೂರು; ಮಾರ್ಚ್ 7 ರಾಜ್ಯ ಬಜೆಟ್ ಮಂಡನೆಗೆ ದಿನ ನಿಗದಿಯಾಗಿದೆ. ಸಿಎಂ ಸಿದ್ದರಾಮಯ್ಯ ಅವರು ತಮ್ಮ 16ನೇ ಬಜೆಟ್ ಮಂಡನೆ ಮಾಡಲಿದ್ದಾರೆ. ಈ ಮೂಲಕ ಅತಿ ಹೆಚ್ಚು ಬಜೆಟ್ ಮಂಡಿಸಿದ ಖ್ಯಾತಿ ಸಿದ್ದರಾಮಯ್ಯ ಅವರದ್ದಾಗಲಿದೆ. ಸಿದ್ದರಾಮಯ್ಯ ಅವರಿಗೆ ಬಜೆಟ್ ಮಂಡನೆಗೆ ಹಲವು ಸವಾಲುಗಳಿದ್ದಾವೆ. ಈಗಾಗಲೇ ಗ್ಯಾರಂಟಿಗಳನ್ನು ನೀಡುತ್ತಿರುವ ಸರ್ಕಾರಕ್ಕೆ ಬಜೆಟ್ ನಲ್ಲಿ ಜನರಿಗೆ ಹೊಸದೇನೋ ಕೊಡಬೇಕಿರುವ ಸವಾಲು ಇದೆ. ಕಳೆದ ಬಾರಿ 3.7 ಲಕ್ಷ ಕೋಟಿ ಬಜೆಟ್ ಮಂಡನೆ ಮಾಡಿದ್ದರು. ಈ ಬಾರಿ 4 ಲಕ್ಷ ಕೋಟಿ ಬಜೆಟ್ ಮಂಡಿಸುವ ಯೋಜನೆ ಹಾಕಿಕೊಂಡಿದ್ದಾರೆ.

ಈ ಬಾರಿ ಜನರ ನಿರೀಕ್ಷೆ ಒಂದಿದ್ರೆ ಸಚಿವರ ನಿರೀಕ್ಷರಯೂ ಜೋರಾಗಿದೆ. ಅದರಲ್ಲೂ ಜಿ.ಪರಮೇಶ್ವರ್ ತಮ್ಮ ಜಿಲ್ಲೆಗೆ ಹೆಚ್ಚಿನ ಅನುದಾನ ತರುವ ಉತ್ಸಾಹದಲ್ಲಿದ್ದಾರೆ. ಈ ಬಗ್ಗೆ ಮಾತಾಡಿರುವ ಜಿ.ಪರಮೇಶ್ವರ್, ಈ ಬಾರಿಯ ಬಜೆಟ್ ನಲ್ಲಿ ನಮ್ಮ ಜಿಲ್ಲೆಗೆ ದೊಡ್ಡ ಪ್ರಾಜೆಕ್ಟ್ ಹಣ ಕೇಳಿದ್ದೇನೆ. ಬಜೆಟ್ ಬಗ್ಗೆ ಹೆಚ್ಚು ನಿರೀಕ್ಷೆ ಇದೆ. ನಮ್ಮ ಜಿಲ್ಲೆಗೆ ಯಾವ ರೀತಿಯ ಅನುದಾನ ಕೊಡ್ತಾರೆ ಎಂಬುದನ್ನು ನೋಡಬೇಕಿದೆ ಎಂದಿದ್ದಾರೆ.

ಅತ್ತ ಸಚಿವ ಎಂಸಿ ಸುಧಾಕರ್ ಚಿಕ್ಕಬಳ್ಳಾಪುರ ಜನತೆಗೆವಸಿಹಿ ಸುದ್ದಿ ಸಿಗಲಿದೆ ಎಂದಿದ್ದಾರೆ. ಮೆಡಿಕಲ್ ಕಾಲೇಜು, ಆಸ್ಪತ್ರೆ, ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ಮನವಿ ಮಾಡಿದ್ದೇನೆ ಎಂದಿದ್ದಾರೆ. ಸಚಿವರು ಬಜೆಟ್ ಬಗ್ಗೆ ಜನತೆಗೆ ಸ್ಪೆಷಲ್ ಭರವಸೆಯನ್ನು ಕೊಡ್ತಾ ಇದ್ದಾರೆ. ಇದರ ನಡುವೆ ರೈತರಿಗೆ ಬೇರೆ ನಿರೀಕ್ಷೆ ಇದೆ. ಆಟೋ ಚಾಲಕರು ಬೇಡಿಕೆಗಳನ್ನ ಇಟ್ಟಿದ್ದಾರೆ. ನೋಡೋಣಾ ಸಿಎಂ ಸಿದ್ದರಾಮಯ್ಯ ಅವರು ಯಾರ್ಯಾರಿಗೆ ಎಷ್ಟೆಷ್ಟು ಅನುದಾನ ಕೊಡಲಿದ್ದಾರೆ ಅನ್ನೋದನ್ನ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment

🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...