Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

BREAKING NEWS: ದೇಶದ ಜನತೆಗೆ ಮತ್ತೆ ಶಾಕ್ : ಪೆಟ್ರೋಲ್ 2.61 ರೂ., ಡೀಸೆಲ್ 2.71 ರೂ.ಏರಿಕೆ

---Advertisement---

ಸುದ್ದಿಒನ್,ನವದೆಹಲಿ,ಮೇ.25: ದೇಶದ ಜನಸಾಮಾನ್ಯರಿಗೆ ಇಂಧನ ದರ ಏರಿಕೆಯ ಬಿಸಿ ಮತ್ತೊಮ್ಮೆ ತಟ್ಟಿದೆ. ಜಾಗತಿಕ ಮಟ್ಟದಲ್ಲಿ ಇರಾನ್ ಯುದ್ಧದ ಪ್ರಭಾವ ತೀವ್ರಗೊಳ್ಳುತ್ತಿದ್ದಂತೆ, ಭಾರತದಲ್ಲೂ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಗಗನಕ್ಕೇರುತ್ತಿವೆ. ಕಳೆದ ಕೇವಲ ಹತ್ತು ದಿನಗಳ ಅವಧಿಯಲ್ಲಿ ಸರ್ಕಾರಿ ತೈಲ ಕಂಪನಿಗಳು ಬರೋಬ್ಬರಿ ನಾಲ್ಕನೇ ಬಾರಿಗೆ ತೈಲ ದರವನ್ನು ಹೆಚ್ಚಿಸಿ ಗ್ರಾಹಕರಿಗೆ ಶಾಕ್ ನೀಡಿವೆ.

ಸೋಮವಾರದ ಹೊಸ ಪರಿಷ್ಕರಣೆಯ ಪ್ರಕಾರ, ಡೀಸೆಲ್ ಬೆಲೆಯಲ್ಲಿ ಲೀಟರ್ಗೆ 2.71 ರೂಪಾಯಿ ಹಾಗೂ ಪೆಟ್ರೋಲ್ ಬೆಲೆಯಲ್ಲಿ ಲೀಟರ್ಗೆ 2.61 ರೂಪಾಯಿ ಭಾರಿ ಏರಿಕೆ ಕಂಡುಬಂದಿದೆ.

ದೇಶದ ರಾಜಧಾನಿಯಲ್ಲಿ ಇಂದಿನ ಇಂಧನ ದರ ಎಷ್ಟು?
ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಹೆಚ್ಚಾದ ಹಿನ್ನೆಲೆಯಲ್ಲಿ ದೇಶೀಯ ಮಾರುಕಟ್ಟೆಯಲ್ಲೂ ದರ ಪರಿಷ್ಕರಣೆ ಅನಿವಾರ್ಯವಾಗಿದೆ ಎಂದು ಮೂಲಗಳು ತಿಳಿಸಿವೆ. ಸದ್ಯ ದೆಹಲಿಯಲ್ಲಿ ಇಂಧನ ದರ ಹೀಗಿದೆ:

ಪೆಟ್ರೋಲ್: ಲೀಟರ್ಗೆ ರೂ. 99.51 ಇದ್ದ ಬೆಲೆ ಈಗ ರೂ. 102.12 ಕ್ಕೆ ತಲುಪಿದೆ.

ಡೀಸೆಲ್: ಲೀಟರ್ಗೆ ರೂ. 92.49 ಇದ್ದ ದರ ಈಗ ರೂ. 95.20 ಕ್ಕೆ ಏರಿಕೆಯಾಗಿದೆ.

ಕಳೆದ ಶನಿವಾರವಷ್ಟೇ ಲೀಟರ್ಗೆ 87 ರಿಂದ 91 ಪೈಸೆಯವರೆಗೆ ದರ ಹೆಚ್ಚಿಸಲಾಗಿತ್ತು. ಅದಾಗಿ ಕೇವಲ ಎರಡು ದಿನ ಕಳೆಯುವಷ್ಟರಲ್ಲೇ ಇಷ್ಟೊಂದು ದೊಡ್ಡ ಮಟ್ಟದ ಬೆಲೆ ಏರಿಕೆ ಆಗಿರುವುದು ವಾಹನ ಸವಾರರ ಆತಂಕಕ್ಕೆ ಕಾರಣವಾಗಿದೆ.

ಕೇವಲ ಎರಡು ವಾರದಲ್ಲಿ 7.5 ರೂಪಾಯಿ ಹೆಚ್ಚಳ!
ದೀರ್ಘಾವಧಿಯ ವಿರಾಮದ ನಂತರ ಮೇ 15 ರಿಂದ ತೈಲ ಕಂಪನಿಗಳು ದಿನನಿತ್ಯದ ದರ ಪರಿಷ್ಕರಣೆಯನ್ನು ಮತ್ತೆ ಆರಂಭಿಸಿದ್ದವು. ಅಲ್ಲಿಂದ ಇಂದಿನವರೆಗೆ ಅಂದರೆ ಕಳೆದ ಎರಡು ವಾರಗಳಿಗಿಂತಲೂ ಕಡಿಮೆ ಅವಧಿಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರದಲ್ಲಿ ಒಟ್ಟು 7.50 ರೂಪಾಯಿಗಳಷ್ಟು ಭಾರೀ ಏರಿಕೆಯಾಗಿದೆ. ಜಾಗತಿಕ ಯುದ್ಧದ ಪರಿಸ್ಥಿತಿಯಿಂದಾಗಿ ತೈಲ ಕಂಪನಿಗಳು ಅಂತರರಾಷ್ಟ್ರೀಯ ಬೆಲೆ ಏರಿಕೆಯ ಹೊರೆಯನ್ನು ನೇರವಾಗಿ ಗ್ರಾಹಕರ ಹೆಗಲಿಗೆ ವರ್ಗಾಯಿಸುತ್ತಿವೆ.

Join WhatsApp

Join Now

Join Telegram

Join Now