Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

BREAKING NEWS : ಬೆಂಗಳೂರಲ್ಲಿ ತಾಯಿ, ಅಜ್ಜಿ,ಮಾವನನ್ನು ಕೊಚ್ಚಿ ಕೊಂದು ಯುವಕ ಆತ್ಮಹತ್ಯೆಗೆ ಶರಣು!

---Advertisement---

ಬೆಂಗಳೂರು.ಜುಲೈ.11: ಬೆಂಗಳೂರಿನ ಕೊಟ್ಟಿಗೆಪಾಳ್ಯದಲ್ಲಿ ಯುವಕನೊಬ್ಬ ಹೆತ್ತ ತಾಯಿ ಸೇರಿದಂತೆ ಒಂದೇ ಕುಟುಂಬದ ಮೂವರನ್ನು ಕ್ರೂರವಾಗಿ ಕೊಚ್ಚಿ ಕೊಲೆ ಮಾಡಿ, ತಾನೂ ಆತ್ಮಹತ್ಯೆಗೆ ಶರಣಾಗಿರುವ ದಿಗಿಲು ಹುಟ್ಟಿಸುವ ಘಟನೆ ನಡೆದಿದೆ.

ಕೊಟ್ಟಿಗೆಪಾಳ್ಯದ ನಿವಾಸಿಯಾದ ಪ್ರಶಾಂತ್ ಎಂಬಾತನೇ ಈ ಘೋರ ಕೃತ್ಯ ಎಸಗಿದ ಸೈಕೋ ಹಂತಕ. ಈತನ ಅಟ್ಟಹಾಸಕ್ಕೆ ತಾಯಿ ಮಂಗಳಮ್ಮ, ಅಜ್ಜಿ ನಂಜಮ್ಮ ಹಾಗೂ ಮಾವ ಸತೀಶ್ ಬಲಿಯಾಗಿದ್ದಾರೆ. ಆರೋಪಿ ಪ್ರಶಾಂತ್ ಮನೆಯವರೊಂದಿಗೆ ಗಲಾಟೆ ಮಾಡಿಕೊಂಡು, ಹರಿತವಾದ ಮಾರಕಾಸ್ತ್ರಗಳಿಂದ ಮೂವರ ಮೇಲೆಯೂ ಮನಬಂದಂತೆ ದಾಳಿ ನಡೆಸಿ ರಕ್ತದ ಮಡುವಿನಲ್ಲಿ ತೇಲಿಸಿದ್ದಾನೆ.

ಮನೆಯೊಳಗೆ ಚೀರಾಟ, ಕಿರುಚಾಟ ಕೇಳಿ ಓಡಿಬಂದ ಸ್ಥಳೀಯರು ತಕ್ಷಣವೇ ಕಾರ್ಯಪ್ರವೃತ್ತರಾಗಿದ್ದಾರೆ. ಘಟನೆಯ ತೀವ್ರತೆಗೆ ಬೆಚ್ಚಿಬಿದ್ದ ಸಾರ್ವಜನಿಕರು ಆರೋಪಿ ಪ್ರಶಾಂತ್ ತಪ್ಪಿಸಿಕೊಂಡು ಓಡಿಹೋಗದಂತೆ ಆತನನ್ನು ಅದೇ ಮನೆಯ ಒಂದು ಕೋಣೆಯಲ್ಲಿ ಹಾಕಿ ಹೊರಗಿನಿಂದ ಚಿಲಕ ಹಾಕಿದ್ದಾರೆ. ಆದರೆ, ಅಷ್ಟರಲ್ಲೇ ತಾನು ಮಾಡಿದ ಪಾಪಪ್ರಜ್ಞೆಯೋ ಅಥವಾ ಕಾನೂನಿನ ಭಯವೋ, ಪ್ರಶಾಂತ್ ರೂಮಿನ ಒಳಗಡೆಯೇ ನೇಣು ಬಿಗಿದುಕೊಂಡು ಪ್ರಾಣ ಬಿಟ್ಟಿದ್ದಾನೆ.

ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಕಾಮಾಕ್ಷಿಪಾಳ್ಯ ಠಾಣೆಯ ಪೊಲೀಸರು ಘಟನಾ ಸ್ಥಳವನ್ನು ಪರಿಶೀಲಿಸಿದ್ದಾರೆ. ಒಂದೇ ಸೂರಿನಡಿ ನಾಲ್ಕು ಹೆಣಗಳು ಬಿದ್ದಿರುವುದನ್ನು ಕಂಡು ಅಧಿಕಾರಿಗಳೇ ಕಂಗೆಟ್ಟಿದ್ದಾರೆ. ಸದ್ಯಕ್ಕೆ ನಾಲ್ಕೂ ಮೃತದೇಹಗಳನ್ನು ವಶಕ್ಕೆ ಪಡೆದಿರುವ ಪೊಲೀಸರು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿದ್ದಾರೆ. ಇಡೀ ಕುಟುಂಬವೇ ಹೀಗೆ ಸರ್ವನಾಶವಾಗಲು ಅಸಲಿ ಕಾರಣವೇನು ಎಂಬುದು ಇನ್ನು ನಿಗೂಢವಾಗಿಯೇ ಉಳಿದಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ತೀವ್ರಗೊಳಿಸಿದ್ದಾರೆ.

Join WhatsApp

Join Now

Join Telegram

Join Now