ಇತ್ತಿಚಿನ ದಿನಗಳಲ್ಲಿ ಹೃದಯಾಘಾತ ಅನ್ನೋದು ಹೆಚ್ಚಾಗಿ ಕಾಡುತ್ತಿದೆ. ಇದೀಗ ಮಲಯಾಳಂ ನಿರ್ದೇಶಕ ಸಿದ್ಧಿಕ್ ಇಸ್ಮಾಯಲ್ ಗೂ ಹೃದಯಾಘಾತ ಸಂಭವಿಸಿದೆ. ಅವರ ಸ್ಥಿತಿ ಚಿಂತಾಜನಕವಾಗಿದ್ದು, ಕೊಚ್ಚಿಯ ಅಮೃತಾ ಆಸ್ಪತ್ರೆಗೆ ದಾಖಲಿಸಲಾಗಿದೆ ಎನ್ನಲಾಗಿದೆ.
ಸಿದ್ಧಿಕ್ ಅವರಿಗೆ ಈ ಮೊದಲೇ ನ್ಯುಮೋನಿಯಾ ಸಮಸ್ಯೆ ಕೂಡ ಕಾಡುತ್ತಿತ್ತು. ಲಿವರ್ ಸಮಸ್ಯೆಯಿಂದ ಬಳಲುತ್ತಿದ್ದರು. ಇದೀಗ ಹಾರ್ಟ್ ಅಟ್ಯಾಕ್ ಕೂಡ ಆಗಿದೆ. ಹಾರ್ಟ್ ಅಟ್ಯಾಕ್ ಆದ ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಆಕ್ಸಿಜನ್ ಪೂರೈಕೆ ಮೂಲಕ ಅವರಿಗೆ ಚಿಕಿತ್ಸ ನೀಡಲಾಗುತ್ತಿದೆ.
ಸಿನಿಮಾ ರಂಗದಲ್ಲಿ ಹೊಸ ಇತಿಹಾಸವನ್ನೇ ಸೃಷ್ಟಿ ಮಾಡಿದರು. 1986ರಲ್ಲಿ ಮೊದಲ ಬಾರಿಗೆ ಪಪ್ಪನ್ ಪ್ರಿಯಪ್ಪೆಟ್ಟ ಪಪ್ಪನ್ ಎನ್ನುವ ಕಥೆ ಬರೆದು ಮೂವಿ ಮಾಡಿ ಹಿಟ್ ಪಡೆದುಕೊಂಡರು. 1992ರಲ್ಲಿ ವಿಯೆಟ್ನಾಂ ಕಾಲೋನಿ ಸಿನಿಮಾ ಮಾಡಿದರು. 2011ರಲ್ಲಿ ಬಾಲಿವುಡ್ ಸ್ಟಾರ್ ಸಲ್ಮಾನ್ ಖಾನ್ ಜೊತೆ ಬಾಡಿಗಾರ್ಡ್ ಮೂವಿ ಮಾಡಿ ಸಕ್ಸಸ್ ಪಡೆದುಕೊಂಡರು.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.

















