ಸೀಸನ್ 11 ಬಿಗ್ ಬಾಸ್ ಸ್ಪರ್ಧಿಯಾಗಿ ಲಾಯರ್ ಜಗದೀಶ್ ಬಂದಿದ್ದರು. ಸೋಷಿಯಲ್ ಮೀಡಿಯಾದಲ್ಲಿ ಅವರಿಟ್ಟಿದ್ದ ಹವಾ ಕಂಡು ಬಿಗ್ ಬಾಸ್ ಮನೆಯಲ್ಲಿ ಹಲ್ ಚಲ್ ಸೃಷ್ಡಿಸಬಹುದೆಂಬ ನಿರೀಕ್ಷೆಯೂ ಹುಟ್ಟಿತ್ತು. ಮೊದಲ ವಾರದಲ್ಲಿ ಒಂದು ರೀತಿಯಾಗಿ ಅಬ್ಬರಿಸಿದ್ರೆ ಎರಡನೇ ವಾರದಲ್ಲಿ ವಿಭಿನ್ನ ರೀತಿಯಾಗಿ ಅಬ್ಬರಿಸಿದ್ದರು. ಆದರೆ ಏಟು ಎದಿರೇಟು ಎಂದು ಮುನ್ನುಗ್ಗಿದ್ದ ಜಗದೀಶ್ ಹಾಗೂ ರಂಜಿತ್ ಹೊರಗೆ ಬಂದಿದ್ದರು.
ಬಿಗ್ ಬಾಸ್ ಮನೆಯಿಂದ ಹೊರಗೆ ಬಂದ ಮೇಲೂ ಕ್ರೇಜ್ ಏನು ಕಡಿಮೆಯಾದಂತೆ ಕಾಣಲಿಲ್ಲ. ಮತ್ತೆ ಒಳಗೆ ಹೋಗ್ತಾರೆ ಎಂಬ ಚರ್ಚೆಗಳೇ ಶುರುವಾಗಿದ್ದವು. ಕನ್ನಡ ಮಾತ್ರವಲ್ಲ ಹಿಂದಿಯಿಂದಾನೂ ಅವಕಾಶ ಬಂದಿದೆ ಎಂದೇ ಹೇಳಲಾಗಿತ್ತು. ಅದಕ್ಕೆ ಜಗದೀಶ್ ಹೌದು ಎಂದಿದ್ದರು. ಇದೀಗ ಕೋಟಿ ಬೆಲೆಯ ದುಬಾರಿ ಬ್ರ್ಯಾಂಡ್ ಕಾರು ಖರೀದಿಸಿ ಸುದ್ದಿಯಾಗಿದ್ದಾರೆ.
ಲಾಯರ್ ಜಗದೀಶ್ ಸದಾ ಸುದ್ದಿಯಲ್ಲಿಯೇ ಇರುತ್ತಾರೆ. ಯಾರಿಗೂ ಹೆದರದೆ ದೊಡ್ಡ ರಾಜಕಾರಣಿಯಾದರೂ ಸರಿ ಅವರ ವಿರುದ್ಧ ಜೋರು ಮಾಡುತಚತಾ ಇರುತ್ತಾರೆ. ಈಗ ಸೋಷಿಯಲ್ ಮೀಡಿಯಾದಲ್ಲಿ ಹೊಸ ಕಾರು ಖರೀದಿ ಮಾಡಿರುವ ಫೋಟೋ ಹಂಚಿಕೊಂಡಿದ್ದಾರೆ. ಬಿಎಂಡಬ್ಲ್ಯೂ ಕಂಪನಿಯ ಐಶರಾಮಿ ಕಾರು ಖರೀದಿ ಮಾಡಿದ್ದು, ಅದರ ಬೆಲೆ ಒಂದು ಕೋಟಿ ರೂಪಾಯಿ ಆಗಿದೆ. ಹೆಂಡತಿ ಹಾಗೂ ಮಗನೊಟ್ಟಿಗೆ ಕಾರಿನ ಮುಂದೆ ನಿಂತು ಲಾಯರ್ ಜಗದೀಶ್ ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ. ಲಾಯರ್ ಜಗದೀಶ್ ಹಾಕಿರುವ ಕಾರಿನ ವಿಡಿಯೋ ಎಲ್ಲೆಡೆ ವೈರಲ್ ಆಗ್ತಾ ಇದೆ. ಅವರ ಫಾಲೋವರ್ಸ್ ಶುಭಾಶಯ ಕೋರುತ್ತಿದ್ದಾರೆ. ಒಂದು ಕೋಟಿ ಬೆಲೆಯ ಕಾರು ಖರೀದಿಸಿ ಫುಲ್ ಖುಷಿಯಲ್ಲಿದ್ದಾರೆ.