ಸುದ್ದಿಒನ್,ನವದೆಹಲಿ,ಮೇ.25: ಚಿನ್ನ ಪ್ರಿಯರಿಗೆ ವಾರದ ಆರಂಭದಲ್ಲೇ ಶಾಕಿಂಗ್ ಸುದ್ದಿಯೊಂದು ಎದುರಾಗಿದೆ. ಸೋಮವಾರ ದೇಶಾದ್ಯಂತ ಚಿನ್ನದ ದರದಲ್ಲಿ ದಿಢೀರ್ ಏರಿಕೆ ಕಂಡುಬಂದಿದೆ. ಕಳೆದ ವಾರವಷ್ಟೇ ಚಿನ್ನದ ಬೆಲೆ ಇಳಿಕೆಯಾಗಿ ಗ್ರಾಹಕರಿಗೆ ನಿರಾಳತೆ ತಂದಿಟ್ಟಿತ್ತು, ಆದರೆ ಇದೀಗ ಮತ್ತೆ ಬೆಲೆ ಏರಿಕೆಯ ಹಾದಿ ಹಿಡಿದಿರುವುದು ಖರೀದಿದಾರರ ಜೇಬಿಗೆ ಕತ್ತರಿ ಹಾಕಿದಂತಾಗಿದೆ.
ದೇಶದ ಪ್ರಮುಖ ನಗರಗಳಲ್ಲಿ ಇಂದಿನ (ಸೋಮವಾರ) ಚಿನ್ನ ಹಾಗೂ ಬೆಳ್ಳಿಯ ದರಗಳ ವಿವರ ಇಲ್ಲಿದೆ:
ಬೆಂಗಳೂರು ಮತ್ತು ಹೈದರಾಬಾದ್
ಸಿಲಿಕಾನ್ ಸಿಟಿ ಬೆಂಗಳೂರು ಹಾಗೂ ಹೈದರಾಬಾದ್ನಲ್ಲಿ ಚಿನ್ನದ ದರ ಏರಿಕೆಯಾಗಿದೆ.
24 ಕ್ಯಾರೆಟ್ (10 ಗ್ರಾಂ): ₹1,59,380 (ಭಾನುವಾರ ₹1,59,060 ಇತ್ತು, ಅಂದರೆ ₹320 ಏರಿಕೆಯಾಗಿದೆ).
22 ಕ್ಯಾರೆಟ್ (10 ಗ್ರಾಂ): ₹1,46,100 (ಭಾನುವಾರ ₹1,45,800 ಇತ್ತು, ಅಂದರೆ ₹300 ಏರಿಕೆಯಾಗಿದೆ).
(ಆಂಧ್ರಪ್ರದೇಶದ ವಿಜಯವಾಡ ಮತ್ತು ವಿಶಾಖಪಟ್ಟಣಂನಲ್ಲೂ ಇದೇ ದರ ಮುಂದುವರಿದಿದೆ).
ನವದೆಹಲಿ : ರಾಜಧಾನಿ ದೆಹಲಿಯಲ್ಲೂ ಹಳದಿ ಲೋಹದ ಬೆಲೆ ಜಿಗಿದಿದೆ.
24 ಕ್ಯಾರೆಟ್ (10 ಗ್ರಾಂ): ₹1,59,530 (ಭಾನುವಾರ ₹1,59,210 ಇತ್ತು).
22 ಕ್ಯಾರೆಟ್ (10 ಗ್ರಾಂ): ₹1,46,250 ರಂತೆ ಮಾರಾಟವಾಗುತ್ತಿದೆ.
ಚೆನ್ನೈ
ತಮಿಳುನಾಡಿನ ರಾಜಧಾನಿ ಚೆನ್ನೈನಲ್ಲಿ ಚಿನ್ನದ ದರದಲ್ಲಿ ಭಾರಿ ಏರಿಕೆ ದಾಖಲಾಗಿದೆ.
24 ಕ್ಯಾರೆಟ್ (10 ಗ್ರಾಂ): ₹1,61,240 (ಭಾನುವಾರಕ್ಕೆ ಹೋಲಿಸಿದರೆ ಬರೋಬ್ಬರಿ ₹550 ಏರಿಕೆಯಾಗಿದೆ).
22 ಕ್ಯಾರೆಟ್ (10 ಗ್ರಾಂ): ₹1,47,800 (ನಿನ್ನೆಗಿಂತ ₹500 ಹೆಚ್ಚಳವಾಗಿದೆ).
ಸ್ಥಿರವಾಗಿರುವ ಬೆಳ್ಳಿ ದರ
ಚಿನ್ನದ ದರ ಏರಿಕೆಯಾಗಿದ್ದರೂ, ಬೆಳ್ಳಿ ದರದಲ್ಲಿ ಮಾತ್ರ ಯಾವುದೇ ಬದಲಾವಣೆಯಾಗದೆ ಸ್ಥಿರತೆ ಕಾಯ್ದುಕೊಂಡಿದೆ. ಇತ್ತೀಚೆಗಷ್ಟೇ ಬೆಳ್ಳಿ ದರ ಹೆಚ್ಚಳವಾಗಿತ್ತು, ಆದರೆ ಇಂದು ದರ ಯಥಾಸ್ಥಿತಿ ಮುಂದುವರಿದಿದೆ.
ಪ್ರಮುಖ ನಗರಗಳಲ್ಲಿ ಕೆಜಿ ಬೆಳ್ಳಿ ದರ:
ಬೆಂಗಳೂರು: ₹2.85 ಲಕ್ಷ
ನವದೆಹಲಿ: ₹2.85 ಲಕ್ಷ
ಹೈದರಾಬಾದ್: ₹2.95 ಲಕ್ಷ
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.
























