Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ವಿಧಾನಸಭಾ ಚುನಾವಣೆ : ಚಿತ್ರದುರ್ಗ ಜಿಲ್ಲೆಯಲ್ಲಿ  ಶೇ.81.18 ರಷ್ಟು ಮತದಾನ : ಹೊಸದುರ್ಗದಲ್ಲೇ ಹೆಚ್ಚು ವೋಟಿಂಗ್…!

Facebook
Twitter
Telegram
WhatsApp

ಮಾಹಿತಿ ಮತ್ತು ಫೋಟೋ ಕೃಪೆ
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಚಿತ್ರದುರ್ಗ

ಚಿತ್ರದುರ್ಗ, ಮೇ.11: ರಾಜ್ಯದ ಸಾರ್ವತ್ರಿಕ ವಿದಾನಸಭೆ ಚುನಾವಣೆಗೆ ಮೇ.10 ಬುಧವಾರ ಜರುಗಿದ ಮತದಾನ ಶಾಂತಿಯುತವಾಗಿ ಮುಕ್ತಾಯವಾಗಿದೆ. ಚಿತ್ರದುರ್ಗ ಜಿಲ್ಲೆಯಲ್ಲಿ ಅಂದಾಜು ಶೇ.81.18 ರಷ್ಟು ಮತದಾನವಾಗಿದೆ. ಜಿಲ್ಲೆಯ ಒಟ್ಟು 14,03,585 ಮತದಾರರಲ್ಲಿ 11,39,7499 ಜನರು  ಮತಗಟ್ಟೆಯಲ್ಲಿ ಮತಚಲಾಯಿಸಿದ್ದಾರೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ದಿವ್ಯಪ್ರಭು.ಜಿ.ಆರ್.ಜೆ ಮಾಹಿತಿ ನೀಡಿದ್ದಾರೆ.

ಜಿಲ್ಲೆಯ 6 ವಿಧಾನಸಭಾ ಕ್ಷೇತ್ರಗಳ ಪೈಕಿ ಹೊಸದುರ್ಗ ಕ್ಷೇತ್ರದಲ್ಲಿ ಅತಿ ಹೆಚ್ಚು ಮತಚಲಾವಣೆಯಾಗಿದೆ. ಶೇ.83.72 ರಷ್ಟು ಮತದಾನವಾಗಿದೆ. ಹೊಸದುರ್ಗ ವಿಧಾನಸಭಾ ಕ್ಷೇತ್ರದಲ್ಲಿ 99,418 ಪುರುಷ, 98236 ಮಹಿಳೆ ಒಟ್ಟು 1,97,654 ಮತದಾರರು ಇದ್ದಾರೆ. ಇದರಲ್ಲಿ 84,533 ಪುರುಷ, 80,947 ಮಹಿಳೆ ಸೇರಿ 1,65,480 ಮತದಾರರು ಮತಚಲಾಯಿಸಿದ್ದಾರೆ.

ಹೊಳಲ್ಕೆರೆ ವಿಧಾನಸಭಾ ಕ್ಷೇತ್ರದಲ್ಲಿ ಶೇ.83.04 ರಷ್ಟು ಮತದಾನವಾಗಿದೆ. ಕ್ಷೇತ್ರದಲ್ಲಿ 1,17,964ಪುರುಷ, 1,17,288 ಮಹಿಳೆ ಹಾಗೂ 8 ಇತರೆ ಸೇರಿ ಒಟ್ಟು 2,35,260 ಮತದಾರರು ಇದ್ದಾರೆ. ಇದರಲ್ಲಿ 1,00,066 ಪುರುಷ, 95,295 ಮಹಿಳೆ ಹಾಗೂ 3 ಇತರೆ ಮತದಾರರು ಸೇರಿ ಒಟ್ಟು 1,95,364 ಮತದಾರರು ಮತಚಲಾಯಿಸಿದ್ದಾರೆ.

ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದಲ್ಲಿ ಶೇ.82.90 ರಷ್ಟು ಮತದಾನವಾಗಿದೆ. ಕ್ಷೇತ್ರದಲ್ಲಿ 1,22,927 ಪುರುಷ, 1,20,788 ಮಹಿಳೆ ಹಾಗೂ 12 ಇತರೆ ಸೇರಿ ಒಟ್ಟು 2,43,727 ಮತದಾರರು ಇದ್ದಾರೆ. ಇದರಲ್ಲಿ 1,02,665 ಪುರುಷ, 99,380 ಮಹಿಳೆ ಹಾಗೂ 7 ಇತರರು ಸೇರಿ 2,02,052 ಮತದಾರರು ಮತಚಲಾಯಿಸಿದ್ದಾರೆ.

ಹಿರಿಯೂರು ವಿಧಾನಸಭಾ ಕ್ಷೇತ್ರದಲ್ಲಿ ಶೇ.81.32 ರಷ್ಟು ಮತದಾನವಾಗಿದೆ. ಕ್ಷೇತ್ರದಲ್ಲಿ 1,20,884 ಪುರುಷ, 1,22,642 ಮಹಿಳೆ ಹಾಗೂ 15 ಇತರೆ ಸೇರಿ ಒಟ್ಟು 2,43,541 ಮತದಾರರು ಇದ್ದಾರೆ. ಇದರಲ್ಲಿ 99,798 ಪುರುಷ, 98,251 ಮಹಿಳೆ ಹಾಗೂ 5 ಇತರೆ ಸೇರಿ ಒಟ್ಟು 1,98,054 ಮತದಾರರು ಮತಚಲಾಯಿಸಿದ್ದಾರೆ.

ಚಳ್ಳಕೆರೆ ವಿಧಾನಸಭಾ ಕ್ಷೇತ್ರದಲ್ಲಿ ಶೇ.80.04 ರಷ್ಟು ಮತದಾನವಾಗಿದೆ. ಕ್ಷೇತ್ರದಲ್ಲಿ 1,09,992 ಪುರುಷ, 1,10,917 ಮಹಿಳೆ ಹಾಗೂ 3 ಇತರೆ ಸೇರಿ ಒಟ್ಟು 2,20,912 ಮತದಾರರು ಇದ್ದಾರೆ. ಇದರಲ್ಲಿ 88,974 ಪುರುಷ, 87,839 ಮಹಿಳೆ ಹಾಗೂ 3 ಇತರೆ ಸೇರಿ 1,76,816 ಮತದಾರರು ಮತಚಲಾಯಿಸಿದ್ದಾರೆ.

ಚಿತ್ರದುರ್ಗ ವಿಧಾನಸಭಾ ಕ್ಷೇತ್ರದಲ್ಲಿ ಶೇ.76.85 ರಷ್ಟು ಮತದಾನವಾಗಿದೆ. ಕ್ಷೇತ್ರದಲ್ಲಿ 1,29,626 ಪುರುಷ, 1,32,831 ಮಹಿಳೆ ಹಾಗೂ 34 ಇತರೆ ಸೇರಿ ಒಟ್ಟು 2,62,419 ಮತದಾರರು ಇದ್ದಾರೆ. ಇದರಲ್ಲಿ 1,00,545 ಪುರುಷ, 1,01,184 ಮಹಿಳೆ ಹಾಗೂ 4 ಇತರೆ ಸೇರಿ ಒಟ್ಟು 2,01,733 ಮತದಾರರು ಮತಚಲಾಯಿಸಿದ್ದಾರೆ.

ಮೇ.2 ರಿಂದ 4 ವರೆಗೆ ಜಿಲ್ಲೆಯಲ್ಲಿ ಅಗತ್ಯ ಸೇವೆಗಳಲ್ಲಿ ಇರುವ  219 ನೌಕರ ಮತದಾರರು ತಾಲೂಕು ಕೇಂದ್ರಗಳಲ್ಲಿ ಸ್ಥಾಪಿಸಿರುವ ಅಂಚೆ ಮತದಾನ ಕೇಂದ್ರಗಳಲ್ಲಿ ಮತಚಲಾಯಿಸಿದ್ದಾರೆ.

ಮೇ.3 ಹಾಗೂ ಮೇ.5 ರಂದು ಜರುಗಿದ ಮನೆಯಿಂದ ಮತದಾನದಲ್ಲಿ ಜಿಲ್ಲೆಯಲ್ಲಿ 80 ವರ್ಷ ದಾಟಿದ 1096 ಹಾಗೂ 395 ವಿಕಲಚೇತನರು ಸೇರಿ 1491 ಮತದಾರರು ಮನೆಯಿಂದ ಮತಚಲಾಯಿಸಿದ್ದಾರೆ.

ಮೇ.13 ರಂದು ಚಿತ್ರದುರ್ಗ ನಗರದ ವಿಜ್ಞಾನ ಕಾಲೇಜಿನ ನೂತನ ಕಟ್ಟಡದಲ್ಲಿ ಮತ ಎಣಿಕೆ ನಡೆಯಲಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ದಿವ್ಯಪ್ರಭು.ಜಿ.ಆರ್.ಜೆ ತಿಳಿಸಿದ್ದಾರೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಬಿ ಎನ್ ಚಂದ್ರಪ್ಪ ಪರ ಮತಯಾಚನೆ ಮಾಡಿ, ಮೋದಿ, ಅಮಿತ್ ಶಾ ವಿರುದ್ಧ ಗುಡುಗಿದ ಸಿದ್ದರಾಮಯ್ಯ

ಚಿತ್ರದುರ್ಗ: ಈ ತಿಂಗಳ 26 ಕ್ಕೆ ಚುನಾವಣೆ ನಡೆಯಲಿದೆ. ಕಾಂಗ್ರೆಸ್ ಅಭ್ಯರ್ಥಿ ಬಿಎನ್ ಚಂದ್ರಪ್ಪ ರನ್ನ ಹೆಚ್ಚು ಮತಗಳಿಂದ ಗೆಲ್ಲಿಸಿಕೊಡಬೇಕು ಎಂದು ಮನವಿ ಮಾಡ್ತೀನಿ. ಕಳೆದ 10 ವರ್ಷಗಳಿಂದ ಕೇಂದ್ರದಲ್ಲಿ ಅಧಿಕಾರದಲ್ಲಿದೆ ಮೋದಿಯವರು ಪ್ರಧಾನಿಯಾಗಿದ್ದಾರೆ.

ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ ಬರುತ್ತಿದ್ದಂತೆ ಕಾಡುಗೊಲ್ಲ ಸಮುದಾಯವನ್ನು ST ಗೆ ಸೇರಿಸುತ್ತೇವೆ: ಪ್ರಿಯಾಂಕಾಗಾಂಧಿ ಭರವಸೆ

ಚಿತ್ರದುರ್ಗ ಏ 23: ಕಾಡುಗೊಲ್ಲ ಸಮುದಾಯವನ್ನು ST ಗೆ ಸೇರಿಸಲು ಮೇಲದ ಮೇಲೆ ನಾವು ಕೇಂದ್ರಕ್ಕೆ ಕೇಳುತ್ತಲೇ ಇದ್ದೇವೆ. ಆದರೂ ಇದುವರೆಗೂ ಏಕೆ ಸ್ಪಂದಿಸುತ್ತಿಲ್ಲ ಮೋದಿಯವರೇ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಖಾರವಾಗಿ ಪ್ರಶ್ನಿಸಿದರು. ಇಲ್ಲಿ

ಪ್ರತೀ ಬಾರಿ ಭಾರತೀಯರನ್ನು ನಂಬಿಸಿ ಮೋಸ ಮಾಡೋದು ಮೋದಿಯವರಿಗೆ ರೂಢಿಯಾಗಿದೆ: ಸಿ.ಎಂ. ಸಿದ್ದರಾಮಯ್ಯ

ಚಿತ್ರದುರ್ಗ ಏ 23: ಮನಮೋಹನ್ ಸಿಂಗ್ ಅವರು ಪ್ರಧಾನಿಯಾಗಿ ಇಡಿ ದೇಶದ ರೈತರ 76 ಸಾವಿರ ಕೋಟಿ ಸಾಲ ಮನ್ನಾ ಮಾಡಿದರು. ಮೋದಿ ಪ್ರಧಾನಿಯಾಗಿ ಅತ್ಯಂತ ಶ್ರೀಮಂತರ 16 ಲಕ್ಷ ಕೋಟಿ ಸಾಲ ಮನ್ನಾ

error: Content is protected !!