Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

Asian Games Gold : ಏಷ್ಯನ್ ಗೇಮ್ಸ್ ನಲ್ಲಿ ಭಾರತಕ್ಕೆ ಮೊದಲ ಚಿನ್ನ : ವಿಶ್ವ ದಾಖಲೆ ಬರೆದ ಶೂಟರ್ ಗಳು

Facebook
Twitter
Telegram
WhatsApp

 

Asian Games Gold : ಏಷ್ಯನ್ ಗೇಮ್ಸ್ ನಲ್ಲಿ ಭಾರತಕ್ಕೆ ಮೊದಲ ಚಿನ್ನದ ಪದಕ ದಕ್ಕಿದೆ. ನಮ್ಮ ಶೂಟರ್‌ಗಳು ಉತ್ತಮ ಪ್ರದರ್ಶನ ನೀಡಿದ್ದಾರೆ. 10 ಮೀಟರ್ ಏರ್ ರೈಫಲ್ ಟೀಮ್ ಈವೆಂಟ್‌ನಲ್ಲಿ ಈ ಚಿನ್ನದ ಪದಕ ಬಂದಿರುವುದು ಗಮನಾರ್ಹ.

ಏಷ್ಯನ್ ಗೇಮ್ಸ್ 2023 ರಲ್ಲಿ ಭಾರತ ಚಿನ್ನದ ಪದಕಗಳ ಖಾತೆಯನ್ನು ತೆರೆದಿದೆ. 10 ಮೀಟರ್ ಏರ್ ರೈಫಲ್ ಟೀಮ್ ಈವೆಂಟ್‌ನಲ್ಲಿ ಭಾರತ ತನ್ನ ಮೊದಲ ಚಿನ್ನದ ಪದಕವನ್ನು ಗೆದ್ದುಕೊಂಡಿದೆ.  ಈ ಸ್ಪರ್ಧೆಯಲ್ಲಿ ರುದ್ರಾಂಕ್ಷ್ ಪಾಟೀಲ್, ಐಶ್ವರಿ ತೋಮರ್ ಮತ್ತು ದಿವಾನ್ಶ್ ಪನ್ವಾರ್ ಚಿನ್ನ ಗೆದ್ದರು. ಮೇಲಾಗಿ ವಿಶ್ವ ದಾಖಲೆಯೊಂದಿಗೆ ಈ ಚಿನ್ನದ ಪದಕ ಗೆದ್ದಿರುವುದು ವಿಶೇಷ.  ಈ ಮೂವರೂ ಸೇರಿ ಅರ್ಹತಾ ಸುತ್ತಿನಲ್ಲಿ 1893.7 ಅಂಕಗಳೊಂದಿಗೆ ವಿಶ್ವ ದಾಖಲೆಯನ್ನು ಸೃಷ್ಟಿಸಿದ್ದಾರೆ.

ಅವರು ಈ ವರ್ಷದ ಆರಂಭದಲ್ಲಿ ಬಾಕು ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಚೀನಾ ನಿರ್ಮಿಸಿದ್ದ ದಾಖಲೆಯನ್ನು ಮುರಿದರು.  ಇದು ಏಷ್ಯನ್ ಗೇಮ್ಸ್ 2023 ರಲ್ಲಿ ಭಾರತಕ್ಕೆ ಮೊದಲ ಚಿನ್ನದ ಪದಕವಾಗಿದೆ.

ಮೊದಲ ಸರಣಿಯಲ್ಲಿ ರುದ್ರಾಂಶ್ ಮತ್ತು ದಿವ್ಯಾಂಶ್ ತಲಾ 104.8 ಅಂಕ ಗಳಿಸಿದರೆ, ಐಶ್ವರಿ 104.1 ಅಂಕ ಗಳಿಸಿದರು. ಆದರೆ ನಂತರ ಸರಣಿಯಿಂದ ಚೇತರಿಸಿಕೊಂಡರು.

ಆರನೇ ಸರಣಿಯ ಹೊತ್ತಿಗೆ ಭಾರತದ ಶೂಟರ್‌ಗಳು ವಿಶ್ವ ದಾಖಲೆಯನ್ನು ಸರಿಗಟ್ಟಿದರು.  ಒಟ್ಟು 1893.7 ಅಂಕ ಗಳಿಸಿದ್ದಾರೆ. ಏಷ್ಯನ್ ಗೇಮ್ಸ್ ನಲ್ಲಿ 100 ಪದಕಗಳ ದಾಖಲೆ ಮುರಿಯುವ ಗುರಿಯೊಂದಿಗೆ ಕಣಕ್ಕೆ ಇಳಿದಿರುವ ಭಾರತಕ್ಕೆ ಈ ಚಿನ್ನದ ಪದಕ ಬಲ ತುಂಬಿದಂತಿದೆ. ಭಾರತ ಈಗಾಗಲೇ ಮೂರು ಬೆಳ್ಳಿ ಹಾಗೂ ಎರಡು ಕಂಚಿನ ಪದಕ ಗೆದ್ದಿರುವುದು ಗೊತ್ತೇ ಇದೆ.

ಮಹಿಳೆಯರ 10 ಮೀಟರ್ ಏರ್ ರೈಫಲ್ ತಂಡ ಸ್ಪರ್ಧೆಯಲ್ಲೂ ಭಾರತ ಬೆಳ್ಳಿ ಪದಕ ಗೆದ್ದುಕೊಂಡಿದೆ. ಆಶಿ ಚೌಕಿ, ಮೆಹೆಲಿ ಘೋಷ್ ಮತ್ತು ರಮಿತಾ ಜಿಂದಾಲ್ ಭಾರತಕ್ಕೆ ಪದಕವನ್ನು ತಂದುಕೊಟ್ಟಿದ್ದಾರೆ. ಇನ್ನು ಪುರುಷರ ವಿಭಾಗದಲ್ಲಿ ವಿಶ್ವ ದಾಖಲೆಯೊಂದಿಗೆ ಚಿನ್ನ ಗೆದ್ದಿದೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಇಂದಿನ ರಾಶಿ ಫಲ. ಈ ರಾಶಿಗಳ ಮದುವೆ, ಸಂತಾನ ವಿಳಂಬವೇಕೆ? ಇಷ್ಟರಾರ್ಜಿತ ಕೆಲಸ ಕಾರ್ಯಗಳು ಏಕೆ ನೆರವೇರುತ್ತಿಲ್ಲ? ಸೂಕ್ತ ಮಾಹಿತಿ ನೀಡಲಾಗುವುದು.

ಇಂದಿನ ರಾಶಿ ಫಲ. ಈ ರಾಶಿಗಳ ಮದುವೆ, ಸಂತಾನ ವಿಳಂಬವೇಕೆ? ಇಷ್ಟರಾರ್ಜಿತ ಕೆಲಸ ಕಾರ್ಯಗಳು ಏಕೆ ನೆರವೇರುತ್ತಿಲ್ಲ? ಸೂಕ್ತ ಮಾಹಿತಿ ನೀಡಲಾಗುವುದು. ಮಂಗಳವಾರ ರಾಶಿ ಭವಿಷ್ಯ -ಮೇ-7,2024 ಸೂರ್ಯೋದಯ: 05:50, ಸೂರ್ಯಾಸ್ತ : 06:34

ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಕೇಸ್ : ಡಿಕೆ ಶಿವಕುಮಾರ್ ರುವಾರಿ.. ವೈರಲ್ ಆದ ವಿಡಿಯೋಗಳ ನನ್ನ ಪೆನ್ ಡ್ರೈವ್ ನಲ್ಲಿ ಇರೋದಲ್ಲ ಎಂದ ದೇವರಾಜೇಗೌಡ..!

ಕಳೆದ ಕೆಲವು ದಿನಗಳಿಂದ ಪ್ರಜ್ವಲ್ ರೇವಣ್ಣ ಅವರ ಅಶ್ಲೀಲ ವಿಡಿಯೋಗಳ ಪೆನ್ ಡ್ರೈವ್ ಹಾಸನದ ಹಾದಿ ಬೀದಿಯಲ್ಲಿ ಸಿಕ್ಕಿದ್ದಲ್ಲದೆ, ರಾಷ್ಟ್ರಮಟ್ಟದಲ್ಲೂ ಚರ್ಚೆಗೆ ಗ್ರಾಸವಾಗಿದೆ. ಈ ಪ್ರಕರಣ ಸಂಬಂಧ ಈಗಾಗಲೇ ಪ್ರಜ್ವಲ್ ರೇವಣ್ಣ ಅವರಿಗೆ ನೋಟೀಸ್

ಮುರುಘಾಮಠದಲ್ಲಿ ಮೇ 8 ರಿಂದ 10 ರವರೆಗೆ ಬಸವ ಜಯಂತಿ ,:  ಕಾರ್ಯಕ್ರಮಗಳ ವಿವರ ಇಂತಿದೆ..!

ಸುದ್ದಿಒನ್,ಚಿತ್ರದುರ್ಗ, ಮೇ. 06 : ನಗರದ ಶ್ರೀ ಮುರುಘರಾಜೇಂದ್ರ ಬೃಹನ್ಮಠದಲ್ಲಿ ಮೇ 8 ರಿಂದ 10ರವರೆಗೆ ಮಹಾಮಾನವತಾವಾದಿ ಸಾಂಸ್ಕøತಿಕ ನಾಯಕ ಶ್ರೀ ಬಸವೇಶ್ವರ ಜಯಂತಿ ನಿಮಿತ್ತ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಚಿತ್ರದುರ್ಗ ಆಕಾಶವಾಣಿಯಲ್ಲಿ ಮೇ

error: Content is protected !!