Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಅನನ್ಯಾ ಭಟ್ ಕೇಸ್ ಬಿಗ್ ಟ್ವಿಸ್ಟ್ : ಸುಜಾತ ಭಟ್ ತೋರಿಸಿದ ಫೋಟೋ ವಾಸಂತಿಯದ್ದಾ..?

---Advertisement---

ದಕ್ಷಿಣ ಕನ್ನಡ: ಧರ್ಮಸ್ಥಳದಲ್ಲಿ ಹೂತು ಹಾಕಿದ್ದ ಶವಗಳ ಪರೀಕ್ಷೆ ನಡೆಯುತ್ತಿರುವಾಗಲೇ ಅನನ್ಯಾ ಭಟ್ ನಾಪತ್ತೆ ಪ್ರಕರಣ ಕೂಡ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಮಗಳು ನಾಪತ್ತೆಯಾಗಿದ್ದರೆ ಫೋಟೋ ತೋರಿಸಲಿ ನೋಡೋಣಾ ಎಂದು ಹಲವರು ಹೇಳಿದ್ದರು. ಇತ್ತೀಚೆಗೆ ಸುಜಾತ ಭಟ್, ಅನನ್ಯಾ ಭಟ್ ಅವರ ಫೋಟೋವೊಂದನ್ನ ರಿವೀಲ್ ಮಾಡಿದ್ದರು. ಇದೀಗ ಆ ಕೇಸ್ ಬಿಗ್ ಟ್ವಿಸ್ಟ್ ಸಿಕ್ಕಿದೆ.

ರಿಪ್ಪನ್ ಪೇಟೆಯಲ್ಲಿ ಪ್ರಭಾಕರ್ ಜೊತೆಗೆ ಸುಜಾತ ಸಂಸಾರ ಮಾಡಿದ್ದರಂತೆ. ಸುಜಾತಗೆ ಮಗಳಿರುವ ಯಾವುದೇ ದಾಖಲೆಗಳು ಇಲ್ಲ. ಮಕ್ಕಳಿಲ್ಲ ಎಂದು ಸುಜಾತ, ಪ್ರಭಾಕರ್ ದಂಪತಿ ಮಾಹಿತಿ ನೀಡಿದ್ದರಂತೆ. 2002ರಲ್ಲಿ ಸುಜಾತ ಹಾಗೂ ಅವರ ಪತಿ ಪ್ರಭಾಕರ್ ಅವರನ್ನ ಭೇಟಿ ಮಾಡಿದ್ದೆ. ಆ ಸಮಯದಲ್ಲಿ ಬೀದಿ ನಾಯಿಗಳನ್ನ ಸಾಕುತ್ತಿದ್ದರು. ಆ ಬಗ್ಗೆ ಲೇಖನ ಮಾಡುವುದಕ್ಕೆ ಅವರ ಮನೆಗೆ ಹೋದಾಗ ಪ್ರಭಾಕರ್ ಅವರು ಸುಜಾತ ಅವರನ್ನು ಪರಿಚಯ ಮಾಡಿಕೊಡ್ತಾರೆ. ಮಕ್ಕಳಿಲ್ಲದ ಕಾರಣ ನಾಯಿಗಳನ್ನ ಸಾಕುತ್ತಿದ್ದೇವೆ ಎಂದಿದ್ದರು ಅಂತ ಪತ್ರಕರ್ತ ಅರುಣ್ ಮಾಹಿತಿ ನೀಡಿದ್ದಾರೆ.

ಇದರ ನಡುವೆ ಸುಜಾತ ಭಟ್ ತನ್ನ ಮಗಳು ಅಙ್ಯಾ ಭಟ್ ಎಂಬ ಫೋಟೋವೊಂದನ್ನ ತೋರಿಸಿದ್ದರು. ಇದೀಗ ಆ ಫೋಟೋ ಬೇರೆಯವರದ್ದು ಎಂದು ಟಿವಿ9 ಸುದ್ದಿ‌ ಮಾಡಿದೆ. ವಾಹಿನಿಯಲ್ಲಿ ಬಂದ ವಿಷಯದ ಪ್ರಕಾರ, ವಾಸಂತಿ ಎಂಬ ಮಹಿಳೆಯ ಫೋಟೋ ಅದಾಗಿದೆ. ಅನಾರೋಗ್ಯದಿಂದ 2002-2003ರಲ್ಲಿ ವಾಸಂತಿ ಎಂಬಾಕೆ ಮೃತಪಟ್ಟಿದ್ದರು. ವಾಸಂತಿ ಪತಿ ಶ್ರೀವತ್ದ ಅವರು ಅನಾರೋಗ್ಯದಿಂದ ಮೃತಪಟ್ಟಿದ್ದರಂತೆ. ರಂಗಪ್ರಸಾದ್ ಅವರ ಮನೆಯಲ್ಲಿ ಸುಜಾತ್ ಭಟ್ ಕೇರ್ ಟೇಕರ್ ಆಗಿದ್ದರಂತೆ. 2025ರ ಜನವರಿಯಲ್ಲಿ ಈ ರಂಗಪ್ರಸಾದ್ ಮೃತಪಟ್ಟಿದ್ದಾರೆ ಎಂಬ ಮಾಹಿತಿ ಇದ್ದು, ಅದೇ ಮನೆಯಲ್ಲಿಯೇ ಸುಜಾತ ಭಟ್ ವಾಸವಾಗಿದ್ದಾರೆ. ಈ ರಂಗಪ್ರಸಾದ್ ಅವರ ಮಗನೇ ಶ್ರೀವತ್ಸ ಎಂದು ಹೇಳಲಾಗಿದ್ದು, ಶ್ರೀವತ್ಸ ಅವರ ಹೆಂಡತಿಯೇ ವಾಸಂತಿ ಎನ್ನಲಾಗಿದೆ. ಈ ವಾಸಂತಿಯ ಫೋಟೋವನ್ನೇ ಸುಜಾತ ಭಟ್, ತನ್ನ ಮಗಳು ಅನನ್ಯಾ ಭಟ್ ಎಂದು ತೋರಿಸಿದ್ದಾರೆ ಎನ್ನಲಾಗಿದೆ.

ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ

ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.

ವರದಿ ಮಾಡುವುದು ಹೇಗೆ?

  • ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ವಾಟ್ಸಪ್ ಮಾಡಿ: 90369 74702

ನಾವು ಏನು ಮಾಡುತ್ತೇವೆ?

  • ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
  • ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
  • ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment