Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಯುಗಾದಿ ನಂತರ ಒಳ್ಳೆ ಬೆಳೆ-ಮಳೆಯಾಗಲಿದೆ : ಕೋಡಿಶ್ರೀ

---Advertisement---

ಕೋಲಾರ: ಕೋಡಿಮಠದ ಡಾ.ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಅವರು ರಾಜ್ಯದ ಬಗ್ಗೆ ಭವಿಷ್ಯ ನುಡಿದಿದ್ದಾರೆ. ಕಳೆದ ವರ್ಷ ಮಳೆ ಗಗನ ಕಚ್ಚಿದ್ದು, ಬೆಳೆ ಇಲ್ಲದೆ ರೈತರು ಕಂಗಲಾಗಿದ್ದಾರೆ. ರಾಜ್ಯದೆಲ್ಲೆಡೆ ಬರದ ಪರಿಸ್ಥಿತಿ ತಾಂಡವವಾಡುತ್ತಿದೆ. ಇದೀಗ ರೈತರಿಗೆ ಖುಷಿ ಕೊಡುವಂತ, ಸಂತಸ ಪಡುವಂತ ಭವಿಷ್ಯವನ್ನು ಕೋಡಿಶ್ರೀ ಮಠದ ಶ್ರೀಗಳು ನುಡಿದಿದ್ದಾರೆ.

ಕೋಲಾರ ಜಿಲ್ಲೆ ಮಾಲೂರು ಪಟ್ಟಣದ ಕಾರ್ಯಕ್ರಮವೊಂದರಲ್ಲಿ ಮಾತನಾಡಿರುವ ಕೋಡಿ ಮಠದ ಡಾ.ಶಿವಾನಂದ ಶಿವಯೋಗಿ ಸ್ವಾಮೀಜಿ, ಯುಗಾದಿ ಕಳೆದ ನಂತರ ರಾಜ್ಯದಲ್ಲಿ ಒಳ್ಳೆಯ ಮಳೆ-ಬೆಳೆ ಆಗಲಿದೆ ಎಂಬ ಸಿಹಿ ಸುದ್ದಿ ನೀಡಿದ್ದಾರೆ. ಅವರ ಈ ಭವಿಷ್ಯವಾಣಿಯಿಂದ ರೈತರು ಸಮಾಧಾನಗೊಂಡಿದ್ದಾರೆ. ಬರದಿಂದ ತತ್ತರಿಸಿದ್ದ ರೈತರಿಗೆ ಕೋಡಿಶ್ರೀಗಳ ನುಡಿ ಸಮಾಧಾನ ತಂದಿದೆ.

ಇನ್ನು ಇದೇ ವೇಳೆ ರಾಜಕೀಯದ ಬಗ್ಗೆಯೂ ಮಾತನಾಡಿ, ಗ್ಯಾರಂಟಿಗಳಿಂದ ಸರ್ಕಾರ ನಡೆಯುತ್ತಿದೆಯಾ ಎಂಬ ಪ್ರಶ್ನೆಗೂ ಉತ್ತರಿಸಿ, ನನಗಿಂತ ನಿಮಗೆ ಚೆನ್ನಾಗಿ ಗೊತ್ತಿದೆ. ರಾಷ್ಟ್ರ ರಾಜಕಾರಣ ಕೂಡ ಯುಗಾದಿ ನಂತರವೇ ಗೊತ್ತಾಗಲಿದೆ‌ ಯುಗಾ್ಇ ನಂತರ ಭವಿಷ್ಯ ಬರಲಿದೆ. ಒಂದು ತಿಂಗಳು ಕಳೆದ ಮೇಲೆ ಮಳೆ ಬೆಳೆಯಾಗಲಿದೆ. ಜಾಗತಿಕ ಮಟ್ಟದಲ್ಲಿ ತೊಂದರೆ ಇದೆ. ಬೆಂಕಿ ಹಾವಳಿ, ನೀರಿನ ಹಾವಳಿ, ಯುದ್ಧ ಆಗುತ್ತದೆ. ಅನೇಕ ಸಾವು-ನೋವುಗಳು ಆಗುತ್ತವೆ. ಮತಾಂಧತೆ ಹೆಚ್ಚುತ್ತದೆ. ಬಾಂಬ್ ಸ್ಪೋಟವಾಗುತ್ತದೆ‌ ಭೂಕಂಪ ಆಗುತ್ತದೆ. ಧಾರ್ಮಿಕ ಮುಖಂಡನ ಸಾವು ಸಂಭವಿಸಲಿದೆ ಎಂಬುದಾಗಿ ಭವಿಷ್ಯ ನುಡಿದಿದ್ದಾರೆ. 2024ರ ಹೊಸ ವರ್ಷವೂ ಈ ಬಗ್ಗೆ ಭವಿಷ್ಯ ನುಡಿದಿದ್ದರು. ಅಕಾಲಿಕ ಮಳೆಯಾಗಲಿದೆ, ಜಗತ್ತಿಗೆ ಒಳ್ಳೆಯ ದಿನಗಳಿಲ್ಲ, ಬಾಂಬ್ ಸಿಡಿಯುವ ಸಂಭವವಿದೆ ಎಂದೆಲ್ಲಾ ತಿಳಿಸಿದ್ದರು.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment

🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...