in ,

ಸಂಸದ ತೇಜಸ್ವಿ ಸೂರ್ಯ ಬುರುಡೆಯಲ್ಲಿ ಮೆದುಳಿಲ್ಲವಂತೆ : ನಟಿ ರಮ್ಯಾ ಕಿಡಿ..!

suddione whatsapp group join

ಸಂಸದ ತೇಜಸ್ವಿ ಸೂರ್ಯ ಇತ್ತೀಚೆಗೆ ವಿವಾದಾತ್ಮಕ ಹೆರಳಿಕೆ ನೀಡಿದ್ದರು. ಅದಕ್ಕೆ ಸಂಬಂಧಿಸಿದಂತೆ ಇದೀಗ ನಟಿ ರಮ್ಯಾ ಕಿಡಿಕಾರಿದ್ದಾರೆ. ತೇಜಸ್ವಿ ಸೂರ್ಯ ಬುರುಡೆಯಲ್ಲಿ ಮೆದುಳೆ ಇಲ್ಲ ಎಂದಿದ್ದಾರೆ.

ರಮ್ಯಾ ತಮ್ಮ ಇನ್ಸ್ಟಾಗ್ರಾಮ್ ನ ಸ್ಟೋರೀಸ್ ನಲ್ಲಿ ಈ ಸಂಬಂಧ ಪೋಸ್ಟ್ ಹಾಕಿದ್ದು, ತೇಜಸ್ವಿ ಸೂರ್ಯ ನೀಡಿದ್ದ ಹೇಳಿಕೆಯ ವಿಡಿಯೋವನ್ನು ಶೇರ್ ಮಾಡಿಕೊಂಡಿದ್ದಾರೆ. ವಿಡಿಯೋ ಜೊತೆಗೆ ಅವರ ಬುರುಡೆಯಲ್ಲಿ ಮೆದುಳಿಲ್ಕ ಎಂದಿದ್ದಾರೆ.

ಉಡುಪಿಯಲ್ಲಿ ಪರ್ಯಾಯ ಅದಮಾರು ಮಠದ ವಿಶ್ವರೂಪಂ ಕಾರ್ಯಕ್ರಮದಲ್ಲಿ ಮಾತನಾಡಿದ್ದ ತೇಜಸ್ವಿ ಸೂರ್ಯ, ಹಿಂದೂ ಸಂಸ್ಕೃತಿ, ಸಮಾಜ, ಪರಂಪರೆ ಉಳಿಬೇಕಾದರೇ ಹಿಂದೂ ಧರ್ಮ ಉಳಿಯಬೇಕು. ಇದಕ್ಕಾಗಿ ಮತಾಂತರವಾಗಿ ಪಾಕಿಸ್ತಾನಕ್ಕೆ ಹೋದವರನ್ನು ಹಿಂದೂ ಧರ್ಮಕ್ಕೆ ಕರೆತರಬೇಕು. ಜೊತೆಗೆ ಚೀನಾ, ಜಪಾನಿಗೆ ಹೋಗಿ ಮತಾಂತರಗೊಂಡವರನ್ನು ಭಾರತಕ್ಕೆ ವಾಪಸ್ ಕರೆಸಿಕೊಳ್ಳಬೇಕು. ಮುಸ್ಲಿಮರು, ಕ್ರೈಸ್ತರನ್ನು ಘರ್ ವಾಪಸಿ ಮಾಡದೆ ಬೇರೆ ದಾರಿಯಿಲ್ಲ ಎಂದಿದ್ದರು. ಈ ಹೇಳಿಕೆಗೆ ಬಾರೀ ವಿರೋಧ ವ್ಯಕ್ತವಾದ ಹಿನ್ನೆಲೆ ತೇಜಸ್ವಿ ಸೂರ್ಯ ಕೂಡ ಕ್ಷಮೆ ಕೇಳಿದ್ರು.

What do you think?

Written by suddionenews

Leave a Reply

Your email address will not be published. Required fields are marked *

GIPHY App Key not set. Please check settings

ಮಾಜಿ ಸಿಎಂ ಸುಳ್ಳುಗಾರ, ಬಸವರಾಜ್ ಬೊಮ್ಮಾಯಿ ಅಂತ ಸಿಎಂ ನ ಎಲ್ಲಿಯೂ ನೋಡಿಲ್ಲ : ಉಸ್ತುವಾರಿ ಅರುಣ್ ಸಿಂಗ್..!

ಈ ರಾಶಿಯ ದಂಪತಿಗಳಿಗೆ ಶುಭವಾಗಲಿದೆ.. ಉದ್ಯೋಗ ಕ್ಷೇತ್ರದಲ್ಲಿ ಧನಪ್ರಾಪ್ತಿ..!