ಆಮ್ ಆದ್ಮಿ ಪಕ್ಷದ ಮುಖಂಡ ಲಕ್ಕಿ ಒಬೆರಾಯ್ ಅವರನ್ನು ಕೊಲೆ ಮಾಡಿದ ಭೀಕರ ಘಟನೆ ಪಂಜಾಬ್‌ನ ಜಲಂಧರ್‌ನಲ್ಲಿ ನಡೆದಿದೆ. ಸುದ್ದಿ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ತೆರಳಿ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಲಕ್ಕಿ ಒಬೆರಾಯ್ ಅವರ ಪತ್ನಿ ಈ ಹಿಂದೆ ಎಎಪಿ ಅಭ್ಯರ್ಥಿಯಾಗಿ ಪುರಸಭೆ ಚುನಾವಣೆಯಲ್ಲಿ ಸ್ಪರ್ಧಿಸಿ ಸೋತಿದ್ದರು. ಒಬೆರಾಯ್ ಫೈನಾನ್ಶಿಯರ್ ಆಗಿದ್ದರು ಮತ್ತು ರಿಯಲ್ ಎಸ್ಟೇಟ್ ವ್ಯವಹಾರದಲ್ಲಿದ್ದರು.
ಲಕ್ಕಿ ಒಬೆರಾಯ್ ತಮ್ಮ ಕಾರನ್ನು ಗುರುದ್ವಾರದ ಹೊರಗೆ ಪಾರ್ಕಿಂಗ್ ಪ್ರದೇಶದಲ್ಲಿ ನಿಲ್ಲಿಸುತ್ತಿರುವಾಗ, ದ್ವಿಚಕ್ರ ವಾಹನದಲ್ಲಿ ಬಂದ ದುಷ್ಕರ್ಮಿಗಳು ಲಕ್ಕಿ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ನಂತರ ವಿಷಯ ತಿಳಿದು ಬಂದ ಪೋಲೀಸರು ಅವರನ್ನು ತಕ್ಷಣವೇ ಆಸ್ಪತ್ರೆಗೆ ಕರೆದೊಯ್ದರೂ, ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.
ಲಕ್ಕಿ ಮೇಲೆ 8-9 ಸುತ್ತು ಗುಂಡು ಹಾರಿಸಲಾಗಿದೆ ಎಂದು ಪರೀಕ್ಷಿಸಿದಾಗ ತಿಳಿದುಬಂದಿದೆ. ಅವರಿಗೆ ಸಿಪಿಆರ್ ನೀಡಲಾಯಿತು ಮತ್ತು ವೆಂಟಿಲೇಟರ್ನಲ್ಲಿ ಇರಿಸಲಾಯಿತು, ಆದರೆ ಅವರ ಜೀವವನ್ನು ಉಳಿಸಲು ಸಾಧ್ಯವಾಗಲಿಲ್ಲ.










