ಸುದ್ದಿಒನ್
ಭಾರತ ಇಂದು ಪಾಕಿಸ್ತಾನದ ಭಯೋತ್ಪಾದಕ ಶಿಬಿರಗಳ ಮೇಲೆ ದಾಳಿ ನಡೆಸಿದೆ. ಆದರೆ ಪಾಕಿಸ್ತಾನದ ಮನಸ್ಸು ಮಾತ್ರ ಬದಲಾಗುತ್ತಿಲ್ಲ. ಪಾಕಿಸ್ತಾನ ಭಯೋತ್ಪಾದಕರನ್ನು ಪೋಷಿಸುತ್ತಿದೆ ಎಂದು ಭಾರತ ಆರೋಪಿಸುತ್ತಿದ್ದರೆ, ಪಾಕಿಸ್ತಾನ ತಾನೂ ಭಯೋತ್ಪಾದನೆಯಿಂದ ತುಳಿತಕ್ಕೊಳಗಾದ ದೇಶ, ನಮ್ಮ ದೇಶದಲ್ಲಿ ಭಯೋತ್ಪಾದಕರೇ ಇಲ್ಲ. ಭಾರತ ನಮ್ಮ ದೇಶದ ಅಮಾಯಕ ನಾಗರೀಕರ ಮೇಲೆ ದಾಳಿ ಮಾಡಿದೆ ಎಂದು ಬಡಾಯಿ ಕೊಚ್ಚಿಕೊಳ್ಳುತ್ತಿದೆ. ಆಪರೇಷನ್ ಸಿಂಧೂರ್ ನ ಭಾಗವಾಗಿ ಭಾರತ ಭಯೋತ್ಪಾದಕರನ್ನು ನಿರ್ಮೂಲನೆ ಮಾಡಿತು. ಪಾಕ್ ಅದೇ ಭಯೋತ್ಪಾದಕರ ಶವಗಳನ್ನು ಪಾಕಿಸ್ತಾನದ ಅಧಿಕೃತ ಗೌರವಗಳೊಂದಿಗೆ ದಹನ ಮಾಡಿದ್ದು. ಆ ಅಂತ್ಯಕ್ರಿಯೆಯಲ್ಲಿ ಮುಖ್ಯ ಪಾತ್ರ ಯಾರೆಂದು ಇಡೀ ಜಗತ್ತಿಗೆ ತಿಳಿದಿದೆ. ಲಷ್ಕರ್-ಎ-ತೊಯ್ಬಾ ಟಾಪ್ ಕಮಾಂಡರ್ ಹಫೀಜ್ ಅಬ್ದುಲ್ ರೌಫ್ ಭಯೋತ್ಪಾದಕರು ಮತ್ತು ಪಾಕಿಸ್ತಾನಿ ಸೈನಿಕರು ಈ ಅಂತ್ಯಕ್ರಿಯೆಗಳನ್ನು ಒಟ್ಟಿಗೆ ಮಾಡುತ್ತಿದ್ದರೆ, ಆ ದೇಶ ಭಯೋತ್ಪಾದಕರನ್ನು ಪೋಷಿಸುತ್ತಿಲ್ಲ ಎಂದು ಬಡಾಯಿ ಕೊಚ್ಚಿಕೊಂಡರೆ ಯಾರಾದರೂ ನಂಬುತ್ತಾರಾ ? ಪಾಕಿಸ್ತಾನಿ ಸೇನೆ ಭಯೋತ್ಪಾದಕರನ್ನು ಪೋಷಿಸುತ್ತದೆ ಮತ್ತು ಆಶ್ರಯ ನೀಡುತ್ತಲೇ ಉಗ್ರವಾದವನ್ನು ಪೋಷಿಸುತ್ತದೆ ಎಂದು ಇಡೀ ಜಗತ್ತಿನ ಮುಂದೆ ಮತ್ತೊಮ೬ ಬೆತ್ತಲಾಗಿದೆ.

ಭಾರತದ ಆಪರೇಷನ್ ಸಿಂಧೂರ್ ಬಗ್ಗೆ ಮಸೂದ್ ಅಜರ್ ಕೋಪ ಆಪರೇಷನ್ ಸಿಂಧೂರ್‌ನಿಂದ ಜೈಶ್-ಎ-ಮೊಹಮ್ಮದ್ ತನ್ನ ಹೆಸರು ಮತ್ತು ಸ್ವರೂಪವನ್ನು ಕಳೆದುಕೊಂಡಿತು. ಭಾರತ ನಡೆಸಿದ ಸೇಡಿನ ದಾಳಿಯಲ್ಲಿ ಮಸೂದ್ ಅಜರ್ ಅವರ ಇಡೀ ಕುಟುಂಬ ಸಾವನ್ನಪ್ಪಿತ್ತು. ಈ ದಾಳಿಯಲ್ಲಿ ಮಸೂದ್ ಅಜರ್ ಸಹೋದರಿ ಮತ್ತು ಮೌಲಾನಾ ಕಶಾಫ್ ಕುಟುಂಬ ಸೇರಿದಂತೆ ಒಟ್ಟು 14 ಜನರು ಪ್ರಾಣ ಕಳೆದುಕೊಂಡರು. ಈ ದಾಳಿಯಲ್ಲಿ ತಾನು ಸತ್ತಿದ್ದರೆ ಚೆನ್ನಾಗಿರುತ್ತಿತ್ತು ಎಂದು ಮಸೂದ್ ಅಜರ್ ಅಲವತ್ತುಕೊಂಡ. ಇಷ್ಟೆಲ್ಲಾ ಆದರೂ ಮೋದಿ ವಿರುದ್ಧ ವಿಷ ಕಾರುವ ಪತ್ರವನ್ನೂ ಬಿಡುಗಡೆ ಮಾಡಿದ್ದಾನೆ. ಪ್ರಧಾನಿ ಮೋದಿ ಎಲ್ಲಾ ನಿಯಮಗಳನ್ನು ಉಲ್ಲಂಘಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾನೆ. “ನಾವು ಭಾರತದ ಮೇಲೆ ಸೇಡು ತೀರಿಸಿಕೊಳ್ಳುತ್ತೇವೆ… ಇನ್ನು ಮುಂದೆ ನಾನು ಕರುಣೆ ತೋರಿಸುವುದಿಲ್ಲ” ಎಂದು ಮಸೂದ್ ಪುಂಗಿ ಊದಿದ್ದಾನೆ.

ಆದರೆ ಮಸೂದ್ ಅಜರ್ ಈಗ ಎಲ್ಲಿದ್ದಾನೆ…? ಯಾವಾಗಲೂ ಹೆಚ್ಚಿನ ಭದ್ರತೆ ನೀಡುವ ಪಾಕಿಸ್ತಾನ ಸರ್ಕಾರ ಅವನಿಗೆ ಭದ್ರತೆ ಒದಗಿಸಿದೆಯೇ? ಅಥವಾ ಅವನು ಬೇರೆಲ್ಲಿಯಾದರೂ ಅಡಗಿಕೊಂಡಿದ್ದಾನೆಯೇ? ಇತ್ತ ಮಸೂದ್ ಅಜರ್ ಬಗ್ಗೆ ಭಾರತದ ಮಾಜಿ ಸೇನಾ ಮುಖ್ಯಸ್ಥ ಜನರಲ್ ಮನೋಜ್ ಮುಕುಂದ್ ನರವಾಣೆ ಅವರ ಸಂವೇದನಾಶೀಲ ಪೋಸ್ಟ್ ಮಾಡಿರುವುದು ಬಾರಿ ಚರ್ಚೆಯ ವಿಷಯವಾಗಿದೆ. ಚಿತ್ರ ಇನ್ನೂ ಬಾಕಿ ಇದೆ…(ಪಿಕ್ಚರ್ ಅಭಿ ಬಾಕಿ ಹೈ) ಚಿತ್ರ ಇನ್ನೂ ಮುಗಿದಿಲ್ಲ ಎಂದು ಹೇಳುವ ಅವರ ಪೋಸ್ಟ್ ವೈರಲ್ ಆಗಿದೆ. ಮನೋಜ್ ಮುಕುಂದ್ ಅವರ ಹೇಳಿಕೆಗಳ ಹಿಂದಿನ ಅರ್ಥದ ಬಗ್ಗೆ ಬಾರೀ ಚರ್ಚೆ ನಡೆಯುತ್ತಿದೆ.


















