Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಶಿವಮೊಗ್ಗ ಘಟನೆ ಮಾಸುವ ಮುನ್ನವೇ ಬಳ್ಳಾರಿಯಲ್ಲಿ ಬಾಲಕನ ಸಾವು..!

---Advertisement---

ಬಳ್ಳಾರಿ: ಇತ್ತೀಚೆಗಷ್ಟೇ ಶಿವಮೊಗ್ಗದಲ್ಲಿ ಬಾಲಕರ ಗಲಾಟೆಯಿಂದ ಎಸ್ಎಸ್ಎಲ್ಸಿ ವಿದ್ಯಾರ್ಥಿಯ ಕೊಲೆಯಾಗಿತ್ತು. ಅದರ ಬೆನ್ನಲ್ಲೇ ಬಳ್ಳಾರಿಯಲ್ಲೂ ಅಂಥದ್ದೇ ಘಟನೆ ನಡೆದಿದೆ. 9ನೇ ತರಗತಿಯ ವಿದ್ಯಾರ್ಥಿ ರಾಡ್ ನಿಂದ ಹಾಸ್ಟೇಲ್ ವಾರ್ಡನ್ ಸೇರಿದಂತೆ ಹಲವು ಬಾಲಕರ ಮೇಲೆ ಹಲ್ಲೆ ನಡೆಸಿದ್ದಾನೆ. ಇದರ ಪರಿಣಾಮ ಬಾಲಕನೊಬ್ಬ ಸಾವನ್ನಪ್ಪಿದ್ದಾನೆ. ಏಳು ಮಂದಿ ಗಾಯಗೊಂಡಿದ್ದಾರೆ. ಸದ್ಯ ಬಳ್ಳಾರಿಯ ವಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಆತ ರಾಡ್ ನಿಂದ ಹೊಡೆದಿದ್ದಾನೆ ಎಂದು ಶಾಲಾ ಆಡಳಿತ ಮಂಡಳಿ ಹೇಳುತ್ತಿದೆ. ಆದರೆ ಚಾಕುವಿನಿಂದ ಇರಿದಿರುವ ಶಾಲೆಯನ್ನು ಮೃತ ಬಾಲಕನ ಪೋಷಕರು ವ್ಯಕ್ತಪಡಿಸುತ್ತಿದ್ದಾರೆ. ಜೊತೆಗೆ ಆತನನ್ನ ಡ್ರಗ್ ಅಡಿಕ್ಟ್ ಎನ್ನುತ್ತಿದ್ದಾರೆ. ಯಾಕಂದ್ರೆ ಇಷ್ಟೊಂದು ಜನರಿಗೆ ಒಬ್ಬನೇ ಹೊಡೆಯುವುದಕ್ಕೆ ಹೇಗೆ ಸಾಧ್ಯ. ಇದಕ್ಕೆಲ್ಲ ಆಡಳಿತ ಮಂಡಳಿಯೇ ನೇರ ಹೊಣೆ ಎಂಬ ಮಾತನ್ನು ಹೇಳಿದ್ದಾರೆ. ಸದ್ಯಕ್ಕೆ ರಾಡ್ ನಿಂದ ಹಲ್ಲೆ ಮಾಡಿದ ಬಾಲಕ ನಾಪತ್ತೆಯಾಗಿದ್ದಾನೆ. ಪೊಲೀಸರು ಕೂಡ ಆತನನ್ನು ಹುಡುಕುತ್ತಿದ್ದಾರೆ.

ಹಾಸ್ಟೇಲ್ ವಾರ್ಡನ್ ಗಳನ್ನ ನಂಬಿ ನಮ್ಮ‌ ಮಕ್ಕಳನ್ನು ಬಿಟ್ಟಿರುತ್ತೇವೆ. ಮಕ್ಕಳ ಕೈಹೆ ರಾಡ್ ಸಿಕ್ಕಿದಾದ್ರೂ ಹೇಗೆ..? ರಾತ್ರಿ ಫೋನ್ ಮಾಡಿದ್ರು, ಬಂದು ನೋಡಿದ್ರೆ ಒಂದು ಕೊಲೆಯಾಗಿದೆ. ಇದಕ್ಕೆಲ್ಲಾ ಹೊಣೆ ಯಾರು..? ಇನ್ಮುಂದೆ ಯಾವ ಧೈರ್ಯದಲ್ಲಿ ಮಕ್ಕಳನ್ನ ಹಾಸ್ಟೇಲ್ ನಲ್ಲಿ ಬಿಡುವುದು ಎಂಬ ಪ್ರಶ್ನೆಗಳನ್ನ ಪೋಷಕರು ಕೇಳ್ತಿದ್ದಾರೆ. ಈ ಹಾಸ್ಟೇಲ್ ನಲ್ಲಿ ಹಿಂದೆಂದೂ ಈ ರೀತಿ ಆಗಿರ್ಲಿಲ್ಲ ಅಂತೇನೋ ಆಡಳಿತ ಮಂಡಳಿ ಸಮರ್ಥನೆ ಮಾಡಿಕೊಳ್ಳಬಹುದು. ಆದರೆ ಈಗ ಆಗಿರುವ ಕೊಲೆಗೆ ಹೊಣೆಗಾರರು ಯಾರು..? ಮಕ್ಕಳ ಬಗ್ಗೆ ದೊಡ್ಡ ಭವಿಷ್ಯದ ಕನಸು ಕಂಡ ಪೋಷಕರ ನೋವನ್ನ ಅಳಿಸೋದಕ್ಕೆ ಸಾಧ್ಯವಾ..?

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now