Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಮಗು ಅವರ ಬಳಿ ಇದೆ.. ಅದಕ್ಕಾಗಿ ಕೆಳಮಟ್ಟಕ್ಕೆ ಹೋಗಿದ್ದೇವೆ : ಎಸ್.ನಾರಾಯಣ್ ಬೇಸರ

---Advertisement---

ನಟ, ನಿರ್ದೇಶಕ ಎಸ್ ನಾರಾಯಣ್ ಅವರ ಕುಟುಂಬದ ಸಮಸ್ಯೆ ಈಗ ಗುಟ್ಟಾಗಿ ಉಳಿದಿಲ್ಲ. ಬದಲಿಗೆ ಪೊಲೀಸ್ ಠಾಣೆ ಮೆಟ್ಟಿಲೇರಿದೆ. ಲಕ್ಷಾಂತರ ರೂಪಾಯಿ ಆ ಮನೆಗೋಸ್ಕರ ಖರ್ಚು ಮಾಡಿದ್ದೇನೆ, ಪವನ್ ಕೆಲಸ ಮಾಡದೆ ಹೋದರು ನಾನು ಕೆಲಸ ಮಾಡಿ ಮನೆ ನೋಡಿಕೊಂಡಿದ್ದೇನೆ. ಇದರ ಜೊತೆಗೆ ವರದಕ್ಷಿಣೆ ಕೇಳುತ್ತಿದ್ದಾರೆ ಎಂದು ವರದಕ್ಷಿಣೆ ಕಿರುಕುಳದ ಕೇಸನ್ನ ಅವರ ಸೊಸೆ ಹಾಕಿದ್ದಾರೆ. ಇದೀಗ ಎಸ್ ನಾರಾಯಣ್ ಹೇಳುತ್ತಿರುವುದೇ ಬೇರೆ.

ಹೆಣ್ಣು ಮಗುವಿನ ಸಮಸ್ಯೆ ಹೊರಗೆ ಬರಬಾರದು. ಯಾವುದೇ ಹೆಣ್ಣು ಮಗುವನ್ನು ನೋಹಿಸಲು ನಾನು ಇಷ್ಟ ಪಡುವುದಿಲ್ಲ. ಅವರು ಹೇಳಿದಂತೆ ವರದಕ್ಷುಣೆ ಹೆಚ್ವಿಗೆ ಕೊಟ್ಟಿದ್ದರೆ ನಾನು ವಿಧಾನಸೌಧ ಖರೀದಿ ಮಾಡುತ್ತೇನೆ ಎಂದರೆ ಯಾರು ನಂಬಲ್ಲ. ಹಾಗೇ ಸೊಸೆ ಹೇಳಿದ್ದನ್ನ ಎಲ್ಲರೂ ನಂಬೋದು ಹೇಗೆ..? ಈ ಸಮಸ್ಯೆಗೆ ಸಂಬಂಧಿಸಿದ ಎಲ್ಲಾ ದಾಖಲೆಗಳು ಕೋರ್ಟ್ ನಲ್ಲಿವೆ. ಹೆಚ್ಚು ಹೇಳುವುದಕ್ಕೆ ಆಗುವುದಿಲ್ಲ.

ಹದಿನಾಲ್ಕು ತಿಂಗಳಿನಿಂದ ನಮ್ಮ ಜೊತೆಗೆ ಸೊಸೆ ಇಲ್ಲ. ಆದರೆ ಮಗು ಅವರ ಬಳಿ ಇದೆ. ಹೀಗಾಗಿಯೇ ನಾವೂ ತುಂಬಾ ಕೆಳಮಟ್ಟಕ್ಕೆ ಹೋಗಿದ್ದೇವೆ. ಯಾಕಂದ್ರೆ ಮಗುವನ್ನು ನೋಡಬೇಕು ಎನ್ನುವ ಆಸೆ. ನಮ್ಮ ಜಗಳ ಮಗು ಏನು ತಪ್ಪು ಮಾಡಿದೆ. ತಾಯಿಯಾದವರು ನೂರು ಸಮಸ್ಯೆ ಬಂದರು ಮಗುವಿಗಾಗಿ ತ್ಯಾಗ ಮಾಡಬೇಕು. ಆದರೆ ಅವರು ಹಾಗೇ ಮಾಡಲಿಲ್ಲ. ಮಗುವಿಗಾಗಿ ತಂದೆ ಅವರ ಮನೆ ಬಳಿ ಹೋಗಿದ್ದಾಗ ಹೊರಗೆ ನಿಲ್ಲಿಸಿದಾಗ ಅವಾಚ್ಯ ಶಬ್ಧಗಳಿಂದ ಬೈದಿದ್ದಾರೆ. ನಿಂದಿಸಿ, ಅವಮಾನ ಮಾಡಿ ವಾಪಸ್ ಕಳಿಸಿದ್ದಾರೆ ಎಂದು ಹೇಳಿದ್ದಾರೆ.

ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ

ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.

ವರದಿ ಮಾಡುವುದು ಹೇಗೆ?

  • ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ವಾಟ್ಸಪ್ ಮಾಡಿ: 90369 74702

ನಾವು ಏನು ಮಾಡುತ್ತೇವೆ?

  • ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
  • ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
  • ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now