ಬೆಂಗಳೂರು: ಸೋಷಿಯಲ್ ಮೀಡಿಯಾದಲ್ಲೆಲ್ಲಾ ಕಳೆದ ಕೆಲವು ದಿನಗಳಿಂದ ಮೋಹಕತಾರೆ ರಮ್ಯಾಗೆ ಸಂಬಂಧಿಸಿದ ವಿಡಿಯೋ ಒಂದು ಓಡಾಡ್ತಾ ಇದೆ. ಅದುವೆ ವಿನಯ್ ರಾಜ್ಕುಮಾರ್ ಹಾಗೂ ರಮ್ಯಾ ಓಡಾಟದ ವಿಡಿಯೋ. ಅದರಲ್ಲೂ ಈ ಇಬ್ಬರು ಕದ್ದುಮುಚ್ಚಿ ಡೇಟ್ ಮಾಡ್ತಾ ಇದ್ದಾರೆ ಎಂಬಂತೆಲ್ಲ ವಿಚಾರಗಳು ಸಾಕಷ್ಟು ವೈರಲ್ ಆಗಿತ್ತು. ಅದಕ್ಕೆ ಗರಂ ಆಗಿರುವ ನಟಿ ರಮ್ಯಾ, ಇದೀಗ ಖಾರವಾಗಿಯೇ ಉತ್ತರ ಕೊಟ್ಟಿದ್ದಾರೆ.
ನನ್ನ ಮದುವೆ ಬಗ್ಗೆ ನಾನೇ ನಿಮಗೆ ನೇರವಾಗಿ ತಿಳಿಸುತ್ತೇನೆ. ಮಹಿಳೆಯರ ವಿಚಾರದಲ್ಲಿ ಹೀಗೆ ಜಡ್ಜ್ ಮಾಡುವುದನ್ನು ನಿಲ್ಲಿಸಿ. ಒಂದಷ್ಟು ಜನರ ಮನಸ್ಥಿತಿಯ ವಿಚಾರವಾಗಿ ನಿಜಕ್ಕೂ ಬೇಸರವಾಗ್ತಿದೆ. ಮಹಿಳೆಯರ ವಿಚಾರದಲ್ಲಿ ಈ ರೀತಿ ಜಡ್ಜ್ ಮಾಡೋದನ್ನು ನಿಲ್ಲಿಸಿ, ನನ್ನ ಮದುವೆ ವಿಚಾರವನ್ನು ನಾನೇ ನಿಮಗೆ ನೇರವಾಗಿ ತಿಳಿಸ್ತೀನಿ. ಮೊದಲು ಅಪಪ್ರಚಾರ ಮಾಡುವುದನ್ನು ನಿಲ್ಲಿಸಿ ಎಂದು ಎಚ್ಚರಿಕೆಯನ್ನ ನೀಡಿದ್ದಾರೆ.
ಕಳೆದ ಬಾರಿ ದರ್ಶನ್ ಅಭಿಮಾನಿಗಳ ಹೆಸರಲ್ಲಿ ಸೋಷಿಯಲ್ ಮೀಡಿಯಾದಲ್ಲಿ ಪೇಜ್ ಗಳನ್ನ ಕ್ರಿಯೇಟ್ ಮಾಡಿಕೊಂಡಿದ್ದವರು, ರಮ್ಯಾ ಬಗ್ಗೆ ಕೆಟ್ಟದಾಗಿ ಮೆಸೇಜ್ ಹಾಕುತ್ತಿದ್ದರು. ಅವರ ವಿರುದ್ಧ ರಮ್ಯಾ ಧ್ವನಿ ಎತ್ತಿದ್ದು, ದೂರನ್ನು ನೀಡಿದ್ದರು, ಆ ಹಿನ್ನೆಲೆ ಅರೆಸ್ಟ್ ಆಗಿದ್ದಾರೆ. ಆ ಸಂದರ್ಭದಲ್ಲಿ ವಿನಯ್ ರಾಜ್ಕುಮಾರ್, ಶಿವಣ್ಣ ಸೇರಿದಂತೆ ರಮ್ಯಾ ಪರವಾಗಿ ಹಲವರು ಮಾತನಾಡಿದ್ದರು. ಹಾಗೆ ವಿನಯ್ ರಾಜ್ಕುಮಾರ್, ಧೃತಿ ಪುನೀತ್ ರಾಜ್ಕುಮಾರ್ ಅವರ ಜೊತೆಗೆ ರಮ್ಯಾ ಕಾಣಿಸಿಕೊಂಡಿದ್ದರು. ಆಗಾಗ ಅಣ್ಣಾವ್ರ ಫ್ಯಾಮಿಲಿ ಅದರಲ್ಲೂ ಪುನೀತ್ ರಾಜ್ಕುಮಾರ್ ಮಕ್ಕಳು ಹಾಗೂ ವಿನಯ್ ಜೊತೆಗೆ ಓಡಾಡುತ್ತಾರೆ. ಅಲ್ಲದೆ ಸೋಷಿಯಲ್ ಮೀಡಿಯಾದಲ್ಲಿ ನನ್ನ ಸಹೋದರ ವಿನಯ್ ರಾಜ್ಕುಮಾರ್ ಅಂತ ಕೂಡ ಬರೆದುಕೊಂಡಿದ್ದರು.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.











