ಬೆಂಗಳೂರು: ನೂರಾರು ಶವಗಳನ್ನ ಹೂತು ಹಾಕಿದ್ದೀನಿ ಎಂದಿದ್ದ ಚಿನ್ನಯ್ಯ ಈಗ ಎಸ್ಐಟಿ ವಶದಲ್ಲಿದ್ದಾನೆ. ವಿಚಾರಣೆ ಕೂಡ ನಡೆಯುತ್ತಿದೆ. ಈ ವಿಚಾರಣೆಯ ಸಂದರ್ಭದಲ್ಲಿ ಶಾಕಿಂಗ್ ಹೇಳಿಕೆಯೊಂದನ್ನ ನೀಡಿದ್ದಾನೆ. ಚಿತ್ರದುರ್ಗದ ಒಬ್ಬ ಮಹಿಳೆಯೇ ಈ ಬುರುಡೆ ಪ್ಲ್ಯಾನಿಂಗ್ ಗೆ ಫಂಡಿಂಗ್ ಮಾಡಿದ್ದಾರಂತೆ. ಎಸ್ಐಟಿ ತಂಡದ ಮುಂದೆ ಈ ವಿಚಾರವನ್ನು ಬಾಯ್ಬಿಟ್ಟಿದ್ದಾನೆ ಎನ್ನಲಾಗ್ತಾ ಇದೆ.
ಚಿತ್ರದುರ್ಗದ ಮಹಿಳೆ ಫಂಡಿಂಗ್ ಮಾಡಿರುವ ಬಗ್ಗೆ ಮಾಹಿತಿ ನೀಡಿದ್ದು, ಸ್ಟೋರಿ ಪ್ಲಾಂಟ್ ಮಾಡಲು ಆ ಮಹಿಳೆ ಫಂಡಿಂಗ್ ಮಾಡಿದ್ದಾರಂತೆ. ಚಿತ್ರದುರ್ಗದ ಮೂಲದ ಮಹಿಳೆ ಎಸ್ಐಟಿ ಕಚೇರಿಗೆ ಬಂದಂತ ಸಂದರ್ಭದಲ್ಲಿ ಆಕೆಯನ್ನ ಚಿನ್ನಯ್ಯ ಗುರುತಿಸಿದ್ದನಂತೆ. ಈಕೆಯೇ ಫಂಡಿಂಗ್ ಮಾಡಿದ್ದಳು ಎಂಬ ಸೂಚನೆಯನ್ನ ಎಸ್ಐಟಿಗೆ ನೀಡಿದ್ದನಂತೆ. ಈ ಹಿನ್ನೆಲೆ ಎಸ್ಐಟಿ ಅಧಿಕಾರಿಗಳು ಈಗ ಆ ಫಂಡಿಂಗ್ ಜಾಲದ ಹಿಂದೆ ಬಿದ್ದಿದ್ದಾರೆ ಎನ್ನಲಾಗಿದೆ.
ಮತ್ತೊಂದು ವಿಚಾರ ಅಂದ್ರೆ ಆ ಮಹಿಳೆಗೆ ಧರ್ಮಸ್ಥಳದೊಂದಿಗೆ ಭೂ ವಿವಾದ ಇದೆ ಎಂಬ ಮಾಹಿತಿ ಇದೆ. ಈ ನಿಟ್ಟಿನಲ್ಲಿ ಎಸ್ಐಟಿ ಅಧಿಕಾರಿಗಳು ತನಿಖೆಯನ್ನ ನಡೆಸುತ್ತಿದ್ದಾರೆ. ಆ ಮಹಿಳೆ ಯಾಕೆ ಫಂಡಿಂಗ್ ಮಾಡಿದ್ದು..? ಆಕೆಯ ಹಿಂದೆ ಯಾರೆಲ್ಲಾ ಇದ್ದಾರೆ ಎಂಬೆಲ್ಲಾ ವಿಚಾರಗಳ ತನಿಖೆ ನಡೆಯುತ್ತಿದೆ.
ಸದ್ಯ ರಾಜ್ಯದಲ್ಲಿ ಮಾತ್ರವಲ್ಲ ದೇಶದಲ್ಲೂ ಧರ್ಮಸ್ಥಳದ ಬುರುಡೆ ರಹಸ್ಯದ ಬಗ್ಗೆ ಸಾಕಷ್ಟು ಚರ್ಚೆಗಳಾಗ್ತಾ ಇದೆ. ಎಸ್ಐಟಿ ಅಧಿಕಾರಿಗಳು ಕೂಡ ತನಿಖೆಯನ್ನ ನಡೆಸುತ್ತಿದ್ದಾರೆ. ದಿನೇ ದಿನೇ ಈ ಬುರುಡೆ ಮ್ಯಾನ್ ಚಿನ್ನಯ್ಯನ ಒಂದೊಂದೆ ವಿಚಾರ ಹೊರಗೆ ಬರುತ್ತಿದೆ. ಫೈನಲೀ ಏನಾಗಲಿದೆ ಅನ್ನೋದು ತನಿಖೆ ಸಂಪೂರ್ಣವಾದ ಮೇಲೆ ತಿಳಿಯಲಿದೆ.




