Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಚಳ್ಳಕೆರೆ : ಮನೆ ಬೀಗ ಮುರಿದು 700 ರೂಪಾಯಿ ಕದ್ದ ಕಳ್ಳರು

---Advertisement---

 

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಬೆಳಗೆರೆ, ಚಳ್ಳಕೆರೆ
ಮೊ : 8431413188

ಸುದ್ದಿಒನ್, ಚಳ್ಳಕೆರೆ, ಜೂನ್. 15 : ನಗರದ ಜಾಫರ್ ಷರೀಫ್ ಲೇ ಔಟ್ ನಲ್ಲಿ ಶನಿವಾರ ತಡರಾತ್ರಿ ವಕೀಲರ ಮನೆಯೊಂದರಲ್ಲಿ ಕಳ್ಳತನ ನಡೆದಿದೆ. ಅದು ಎರಡು ಅಂತಸ್ತಿನ ಮನೆ, ಮನೆಯ ಯಜಮಾನರು ವಕೀಲರಾಗಿದ್ದು ಅವರ ಮಕ್ಕಳ ಜೊತೆಗೆ ಪರೀಕ್ಷೆಗೆಂದು ಮೈಸೂರಿಗೆ ಹೋಗಿದ್ದರು.

ಅವರ ತಾಯಿ ಮಾತ್ರ ಮನೆಯ ಮೇಲೆ ಮಹಡಿಯಲ್ಲಿ ವಾಸವಾಗಿದ್ದರು. ತಡರಾತ್ರಿ ಸುಮಾರು ಆರು ಜನರ ಕಳ್ಳರ ಗುಂಪೊಂದು ಮನೆಯ ಬಾಗಿಲಿನ ಬೀಗ ಮುರಿದು ಒಳ ನುಗ್ಗಿ ಮನೆಯಲ್ಲಿದ್ದ ಬೀರು ಇತರೆ ವಸ್ತುಗಳನ್ನೆಲ್ಲ ಚೆಲ್ಲಾಪಿಲ್ಲಿ ಮಾಡಿ ಹೋಗಿದ್ದಾರೆ ಕಳ್ಳತಕ್ಕೆ ವಿಫಲ ಯತ್ನ ನಡೆದಿತ್ತು.

ಅಕ್ಕ ಪಕ್ಕದ ಮನೆಯವರು ಬೆಳಿಗ್ಗೆ ವಕೀಲರ ಮನೆಯ ಬಾಗಿಲು ತೆರೆದಿರುವುದನ್ನ ಕಂಡು ಪೋಲಿಸ್ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಘಟನಾ ಸ್ಥಳಕ್ಕೆ ಚಳ್ಳಕೆರೆ ಡಿವೈಎಸ್ಪಿ ಟಿ.ಬಿ ರಾಜಣ್ಣ, ಪೊಲೀಸ್ ಇನ್ಸ್ ಪೆಕ್ಟರ್ ಕೆ. ಕುಮಾರ್ ಸೇರಿದಂತೆ ಪಿಎಸ್ಐ ಹಾಗೂ ಬೆರಳಚ್ಚು ತಜ್ಞರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಮನೆಯ ಮುಂಬಾಗಿಲು ಇಂಟರ್ ಲಾಕ್ ಮುರಿದು ಒಳ ನುಗ್ಗಿದ ಕಳ್ಳರು ಮನೆಯಲ್ಲಿದ್ದ ಕೇವಲ 700 ರೂಪಾಯಿಗಳನ್ನು ಕಳ್ಳತನ‌ ಮಾಡಿಕೊಂಡು ಹೋಗಿದ್ದಾರೆ. ಇದರಿಂದ ಕಳ್ಳರಿಗೆ ಬಾರೀ ನಿರಾಸೆಯಾಗಿದೆ ಎಂದು ಸ್ಥಳೀಯರು ಮಾತಾಡಿಕೊಳ್ಳುತ್ತಿದ್ದರು.

ಸಿಸಿ ಕ್ಯಾಮೆರಾ ನೋಡಲಾಗಿ ಆರು ‌ಜನ ಇರುವ ತಂಡದ ಗುಂಪು ಕೈಯಲ್ಲಿ ಕೆಲವು ಆಯುಧ ಗಳನ್ನು ಹಿಡಿದು ಮನೆಯ ಒಳಗೆ ಹೋಗುವ ದೃಶ್ಯ ಮಾತ್ರ ಸೆರೆಯಾಗಿದೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now
🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...