ಇಂದು ಸ್ಯಾಂಡಲ್ ವುಡ್ ನಲ್ಲಿ ಡಬ್ಬಲ್ ವಿವಾಹ ವಾರ್ಷಿಕೋತ್ಸವದ ಸಂಭ್ರಮ ಜೋರಾಗಿದೆ. ಅಭಿಮಾನಿಗಳು, ಚಿತ್ರರಂಗದವರು ಸೇರಿ ದಂಪತಿಗಳಿವೆ ಶುಭ ಕೋರುತ್ತಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಶಿವಣ್ಣ ಎಂದರೆ ಎಲ್ಲರಿಗೂ ಪ್ರೀತೊ, ಗೌರವ. ಇಂದು ಈ ದಂಪತಿಯ ವಿವಾಹ ವಾರ್ಷಿಕೋತ್ಸವ. 1986ರ ಮೇ 19ರಂದು ನವ ದಾಂಪತ್ಯಕ್ಕೆ ಕಾಲಿಟ್ಟರು. ಇಂದಿಗೆ 39ನೇ ವಿವಾಹ ವಾರ್ಷಿಕೋತ್ಸವದ ಸಂಭ್ರಮದಲ್ಲಿದ್ದಾರೆ.
ಅಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಅದ್ದೂರಿಯಾಗಿ ಮದುವೆಯಾಗಿದ್ದರು. ಅಂದಿನ ದಿನವೇ ಸಂಜೆ ಅದ್ದೂರಿಯಾಗಿ ರಿಸೆಪ್ಶನ್ ನಡೆದಿತ್ತು. ತಮಿಳು ನಟ ಕಮಲ್ ಹಾಸನ್, ಎಂಜಿಆರ್ ಸೇರಿದಂತೆ ಅನೇಕ ಕಲಾವಿದರು ಬಂದು ನವ ದಂಪತಿಗೆ ಶುಭ ಹಾರೈಸಿದ್ದರು. ಡಾ.ರಾಜ್ಕುಮಾರ್ ಹಾಗೂ ಪಾರ್ವತಮ್ಮ ಅವರು ಒಪ್ಪಿ ಮಾಡಿಕೊಟ್ಟ ಮದುವೆ ಇದಾಗಿತ್ತು. ಇಂದು ಕನ್ನಡ ಚಿತ್ರರಂಗದ ಪ್ರೀತಿಯ ದಂಪತಿಗೆ ಎಲ್ಲರಿಂದಾನೂ ಶುಭಾಶಯಗಳ ಸುರಿಮಳೆ ಹರಿದು ಬರುತ್ತಿದೆ.
ಅತ್ತ ಚಾಲೆಂಜಿಂಗ್ ಸ್ಟಾರ್ ದರ್ಶನ್ ದಂಪತಿಗೂ ವಿವಾಹ ವಾರ್ಷಿಕೋತ್ಸವದ ಸಂಭ್ರಮ ಇದೆ. ದರ್ಶನ್ ಹಾಗೂ ವಿಜಯಲಕ್ಷ್ಮಿ ದಾಂಪತ್ಯ ಜೀವನಕ್ಕೆ ಕಾಲಿಟ್ಟು ಇಂದಿಗೆ 22 ವರ್ಷ. ರಾತ್ರಿಯೇ ಅವರ ಆತ್ಮೀಯರೆಲ್ಲ ಒಟ್ಟಿಗೆ ಸೇರಿ ಅದ್ದೂರಿಯಾಗಿ ವಿವಾಹ ವಾರ್ಷಿಕೋತ್ಸವವನ್ನ ಸೆಲೆಬ್ರೇಟ್ ಮಾಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ವಿಜಯಲಕ್ಷ್ಮಿ ಕೂಡ ಫೋಟೋ ಹಾಕಿದ್ದು, ಶಾಶ್ವತ ಬಂಧನ ಎಂದು ಬರೆದುಕೊಂಡಿದ್ದಾರೆ. ಅಭಿಮಾನಿಗಳೆಲ್ಲ ನಾನ ಮುಂದು, ತಾ ಮುಂದು ಅಂತ ದರ್ಶನ್ ಹಾಗೂ ವಿಜಯಲಕ್ಷ್ಮಿ ಫೋಟೋ ಹಾಕುವ ಮೂಲಕ ಶುಭ ಕೋರುತ್ತಿದ್ದಾರೆ. ಅಣ್ಣ, ಅತ್ತಿಗೆ ಯಾವಾಗಲೂ ಹೀಗೆ ನಗುತ್ತಾ ನಗುತ್ತಾ ಇರಿ ಎಂದಿದ್ದಾರೆ.


















