Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ದುನಿಯಾ ವಿಜಯ್ ಶ್ಯೂರಿಟಿ ಕೊಟ್ಟು ಬಿಡಿಸಿದ್ದವನಿಂದ ಜೋಡಿ ಕೊಲೆ..!

---Advertisement---

ಬೆಂಗಳೂರು: ಭೀಮಾ ಸಿನಿಮಾ ಸಮಯದಲ್ಲಿ ದುನಿಯಾ ವಿಜಯ್ ಒಂದಷ್ಟು ಜೈಲು ಹಕ್ಕಿಗಳಿಗೆ ಮುಕ್ತಿ ಕೊಡಿಸಿದ್ದರು‌. ತಮ್ಮದೇ ಶ್ಯೂರಿಟಿ ನೀಡಿ ಬಿಡುಗಡೆ ಮಾಡಿಸಿದ್ದರು. ಇದೀಗ ಬಿಡುಗಡೆಯಾಗಿದ್ದವ ಮತ್ತೆ ಅದೇ ತಪ್ಪು ಮಾಡಿದ್ದಾನೆ. ಸಣ್ಣ ಕಾರಣಕ್ಕೆ ಜೋಡಿ ಕೊಲೆ ಮಾಡಿ ಜೈಲು ಪಾಲಾಗಿದ್ದಾನೆ. ಸುರೇಶ್ ಎಂಬಾತ ಮತ್ತೆ ಜೈಲು ಸೇರಿದ್ದಾನೆ.

ದುನಿಯಾ ವಿಜಯ್ ದಸೆಯಿಂದ ಜೈಲಿನಿಂದ ಹಿರ ಬಂದು, ಮಾರ್ಕೆಟ್ ನಲ್ಲಿ ಕೊತ್ತಂಬರಿ ಸೊಪ್ಪು ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದ. ಬಳಿಕ ಬಸ್ ಸರ್ವೀಸ್ ಶೆಡ್ ನಲ್ಲೂ ಕೆಲಸ ಮಾಡಿಕೊಂಡು ಇದ್ದ. ಈ ವೇಳೆ ಗುಜರಿ ಮಾರುವ ವಿಚಾರಕ್ಕೆ ಗಲಾಟೆಯಾಗಿದೆ. ಈ ಗಲಾಟೆಯಲ್ಲಿ ನಾಗೇಶ್ ಮತ್ತು ಮಂಜುನಾಥ್ ಎಂಬುವವರ ಕೊಲೆ ಮಾಡಿದ್ದಾನೆ. ನವೆಂಬರ್ 8 ರಂದು ಈ ಜೋಡಿ ಕೊಲೆಯಾಗಿತ್ತು. ಕೊಲೆ ಮಾಡಿ, ಸುರೇಶ ಎಸ್ಕೇಪ್ ಆಗಿದ್ದ. ಕೊಲೆಯಾದ ನಾಗೇಶ್ ಹಾಗೂ ಮಂಜುನಾಥ, ಸದಾ ಸುರೇಶನನ್ನು ಹೀಯಾಳಿಸುತ್ತಿದ್ದರಂತೆ. ನೀನು ಕುಳ್ಳ, ನಿನ್ನ ಮೇಲೆ ಹಪವು ಪೊಲೀಸ್ ಕೇಸುಗಳಿವೆ ಎಂದು. ಕುಳ್ಳ ಎಂದು ರೇಗಿಸುತ್ತಿದ್ದ ವಿಚಾರಕ್ಕೆ ಕೋಪಗೊಂಡ ಸುರೇಶ್ ಇಬ್ಬರಿಗೂ ರಾಡ್ ನಿಂದ ಹೊಡೆದಿದ್ದಾನೆ. ಇಬ್ಬರು ಸತ್ತ ಮೇಲೆ ಎಸ್ಕೇಪ್ ಆಗಿದ್ದ, ಸುರೇಶನನ್ನು ಬಾಗಲೂರು ಪೊಲೀಸರು ಬಂಧಿಸಿದ್ದಾರೆ.

ಈತ ಈ ಹಿಂದೆ ಕೂಡ ಜೋಡಿ ಕೊಲೆ ಹಾಗೂ ಅತ್ಯಾಚಾರ ಕೇಸಲ್ಲಿ ಜೈಲು ಸೇರಿದ್ದ. ಬಳಿಕ ದುನಿಯಾ ವಿಜಯ್ ಅವರು ಶ್ಯೂರಿಟಿ ಕೊಟ್ಟು ಬಿಡಿಸಿದ್ದರು. ಮೂರು ಲಕ್ಷ ಹಣ ಇಟ್ಟು ಬಿಡಿಸಿದ್ದರು. ಹತ್ತು ವರ್ಷ ಜೈಲು ಶಿಕ್ಷೆ ಅನುಭವಿಸಿದ್ದ ಈ ವ್ಯಕ್ತಿಗೆ ಶ್ಯೂರಿಟಿ ನೀಡಲು ಯಾರೂ ಇರಲಿಲ್ಲ. ಇದೀಗ ಮತ್ತೆ ಜೈಲು ಪಾಲಾಗಿದ್ದಾನೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment

🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...