Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಇಂದು ಕೂಡ ಚಿನ್ನದ ಬೆಲೆಯಲ್ಲಿ ಕೊಂಚ ಇಳಿಕೆ :ಎಷ್ಟಿದೆ ಇವತ್ತಿನ ರೇಟ್..?

---Advertisement---

ಚಿನ್ನ ಬೆಳ್ಳಿ ಬೆಲೆಯಲ್ಲಿ ಏರುವಾಗ ನೂರಾರು ರುಪಾಯಿ ಏರುತ್ತದೆ. ಇಳಿಯುವಾಗ ಒಂದೆರಡು ರೂಪಾಯಿಯಲ್ಲಿ ಇದೆ ಚಿನ್ನಾಭರಣ ಪ್ರಿಯರ ಬೇಸರ. ದೀಪಾವಳಿ ಹಬ್ಬದಲ್ಲಿ ಇದ್ದಕ್ಕಿದ್ದ ಹಾಗೇ ಚಿನ್ನ ಗಗನಕ್ಕೆ ಜಿಗಿದಿತ್ತು. ಈಗ ಕೊಂಚ ಕೊಂಚವೇ ಇಳಿಕೆಯಾಗುತ್ತಿದೆ. ಇಂದು ಕೂಡ ಸ್ವಲ್ಪಮಟ್ಟಿಗೆ ಇಳಿಕೆಯಾಗಿದೆ. ಈ ಮೂಲಕ ದೊಡ್ಡಮಟ್ಟದಲ್ಲಿ ಅಲ್ಲದೆ ಹೋದರೂ ಚಿಕ್ಕ ಮಟ್ಟದಲ್ಲಿ ಖುಷಿ ಕಾಣಬಹುದಾಗಿದೆ.

ಇನ್ನು ತಜ್ಞರು ಹೇಳುವ ಪ್ರಕಾರ ಚಿನ್ನದ ಬೆಲೆಯಲ್ಲಿ ಇನ್ನು ಇಳಿಕೆಯಾಗುವ ಸಾಧ್ಯತೆ ಇದೆ ಅಂತೆ. ಅಂದ್ರೆ 10 ಗ್ರಾಂ 22 ಕ್ಯಾರೆಟ್ ಚಿನ್ನ 1 ಲಕ್ಷ ತಲುಪುತ್ತದೆ ಎಂದೇ ಹೆಣ್ಣು ಮಕ್ಕಳು ಗಾಬರಿಯಾಗಿದ್ದರು. ಈಗ ಮತ್ತೆ 50 ಸಾವಿರಕ್ಕೆ ತಲುಪಲಿದೆ ಎಂದು ತಜ್ಞರು ಅಂದಾಜಿಸಿದ್ದಾರೆ. ಹೀಗಾಗಿ ಚಿನ್ನಾಭರಣ ಪ್ರಿಯರು ಸ್ವಲ್ಪ ಸಮಯ ಕಾದು ತೆಗೆದುಕೊಂಡರೆ ಉತ್ತಮ.

ಇಂದಿನ ದರ ಹೇಗಿದೆ ಎಂಬುದನ್ನು ನೋಡುವುದಾದರೆ:

ಬೆಂಗಳೂರಿನಲ್ಲಿ 22 ಕ್ಯಾರೆಟ್ 10 ಗ್ರಾಂ ಈಗ 71,830 ರೂಪಾಯಿ ಇದೆ. ಹಾಗೇ ಶುದ್ಧ ಚಿನ್ನ 24 ಕ್ಯಾರೆಟ್ 10 ಗ್ರಾಂಗೆ 78,360 ರೂಪಾಯಿ ಇದೆ. ಬೆಳ್ಳಿಯ ದರ ಬೆಂಗಳೂರಿನಲ್ಲಿ 999 ಶುದ್ಧತೆಯ 1 ಕೆಜಿಗೆ 94,220 ರೂಪಾಯಿ ಇದೆ. ಇನ್ನು ಫೇಮಸ್ ಜ್ಯುವೆಲ್ಲರಿ ಶಾಪ್ ಗಳಲ್ಲಿ ಇಂದಿನ ದರವನ್ನು ಗ್ರಾಂನಲ್ಲಿ ನೋಡುವುದಾದರೆ, ಮಲಬಾರ್ ನಲ್ಲಿ ಪ್ರತಿ ಗ್ರಾಂಗೆ 7,355 ರೂಪಾಯಿ ಇದೆ. ಭೀಮಾ ಜ್ಯುವೆಲ್ಲರಿಯಲ್ಲಿ 7,299 ರೂಪಾಯಿ ಇದೆ. ಹೀಗೆ ಹಲವು ಜ್ಯುವೆಲ್ಲರಿ ಶಾಪ್ ನಲ್ಲಿ ಹತ್ತಿರತ್ತಿರದ ದರವೇ ಇದೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment