Notice: Undefined index: options in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಸಿಎಂ ಪತ್ನಿ ಪಾರ್ವತಿ ಅವರ ಕೊರಳಿಗೆ ಸುತ್ತಿಕೊಳ್ತು ಇನ್ನೊಂದು ಹಗರಣ..!

Facebook
Twitter
Telegram
WhatsApp

 

ಮೈಸೂರು: ಸಿಎಂ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಅವರಿಗೂ ಮೂಡಾ ಹಗರಣಕ್ಕೂ ಅದ್ಯಾಕೋ ಸಂಬಂಧವೇ ಕಳೆದುಹೋಗುತ್ತಿಲ್ಲ. ಈಗಾಗಲೇ ಮೂಡಾದಿಂದ ಪಡೆದ ನಿವೇಶನಗಳನ್ನು ವಾಪಾಸ್ ಪಡೆದಿದ್ದಾರೆ. ಆದರೂ ಈಗ ಸಾಮಾಜಿಕ ಕಾರ್ಯಕರ್ತ ಗಂಗರಾಜು ಎಂಬಾತ ಮತ್ತೊಂದು ಹಗರಣದ ಬಗ್ಗೆ ಮಾತನಾಡಿದ್ದಾರೆ. ಆದರೆ ಆ ಜಮೀನನ್ನು ಈಗಾಗಲೇ ಹಿಂತಿರುಗಿಸಿದ್ದಾರೆ.

 

ಮಾಹಿತಿ ನೀಡಿರುವ ಗಂಗರಾಜು, 20-9-2023ರಲ್ಲಿ ಪಾರ್ವತಿ ಅವರು ಎಸ್ ಎಸ್ ಪಿ ಎಂಟರ್ಪ್ರೈಸ್ ಮಾಲೀಕರಾದ ಗಣೇಶ ಅವರಿಂದ 20 ಗುಂಟೆ ಜಮೀನು ಖರೀದಿ ಮಾಡ್ತಾರೆ. ಈ 20 ಗುಂಟೆ ಜಮೀನು ಇದಕ್ಕೂ ಮುಂಚೆ ಮೂಡಾ ಜಾಗವಾಗಿತ್ತು. ರಸ್ತೆಗಾಗಿಯಿದ್ದಂತ ಜಾಗ. ಪೈಪ್ ಲೈನ್ ಹೋಗಿದೆ ಇಲ್ಲಿಂದ. ಪ್ರಾಧಿಕಾರದಿಂದ ಏಕನಿವೇಶನ ಮಾಡಿರುತ್ತಾರೆ. ಆದರೆ ಅದೇ ಜಾಗವನ್ನು, ಪ್ರಾಧಿಕಾರದ ಆಸ್ತಿಯನ್ನ ಪಾರ್ವತಿ ಅವರ ಹೆಸರಿಗೆ ಬರೆದು ಕೊಡುತ್ತಾರೆ‌.

 

ಆ ಜಾಗವನ್ನು ಬಿಟ್ಟುಕೊಟ್ಟ ಮೇಲೆ 1 ಕೋಟಿ 85 ಲಕ್ಷಕ್ಕೆ ಪಾರ್ವತಿಯವರು ರಿಜಿಸ್ಟರ್ ಮಾಡಿಕೊಳ್ಳುತ್ತಾರೆ. ಚೆಕ್ ಮುಖಾಂತರ ಹಣ ಹೋಗಿದೆ. ಈ ಮಾಹಿತಿ ನನಗೆ ಗೊತ್ತಾದ ಮೇಲೆ ದಾಖಲೆಗಳನ್ನು ಕ್ರೂಡೀಕರಿಸಲು ಶುರು ಮಾಡಿದೆ. ಅದಾದ ಮೇಲೆ ಇಲ್ಲಿರುವ ಅವರ ಕಡೆಯವರು, ಇಂಥವರು ನಿಮ್ಮ ಮಾಹಿತಿ ತೆಗೆದುಕೊಳ್ಳುತ್ತಿದ್ದಾರೆ ಎಂದು ಲೀಕ್ ಮಾಡುತ್ತಾರೆ. 3-8-2024ರಲ್ಲಿ ಪಾರ್ವತಿ ಅವರು, ಆ ಭೂ ಮಾಲೀಕನನ್ನು ಕರೆದುಕೊಂಡು ಬಂದು ತಿದ್ದುಪಡಿ ಮಾಡಿಕೊಳ್ಳುತ್ತಾರೆ. 21 ಸಾವಿರ ಚದುರಡಿಗೆ ಇದ್ದ ಭೂಮಿಯನ್ನು 13 ಸಾವಿರಕ್ಕೆ ತಿದ್ದುಪಡಿ ಮಾಡಿಕೊಂಡಿದ್ದಾರೆ. ಅದಾದ ಮೇಲೂ ಮತ್ತೆ ವ್ಯತ್ಯಾಸ ಆಗಿದೆ ಎಂಬುದು ಗಮನಕ್ಕೆ ಬರುತ್ತದೆ. ಅದಾದ ಮೇಲೆ ಮತ್ತೊಮ್ಮೆ ತಿದ್ದುಪಡಿ ಮಾಡಿಕೊಳ್ಳುತ್ತಾರೆ. ಈಗ ಆ ಆಸ್ತಿಯನ್ನು ಪ್ರಾಧಿಕಾರಕ್ಕೆ ನೀಡಿದ್ದಾರೆ ಎಂದಿದ್ದಾರೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಖಾಸಗಿ ಶಾಲೆಗಳಿಗಿಂತ ಉತ್ತಮ ಶಿಕ್ಷಣ ಕಲ್ಪಿಸಿ : ಪಿ.ಎಂ.ನರೇಂದ್ರ ಸ್ವಾಮಿ

  ಚಿತ್ರದುರ್ಗ. ಅ.19:  ಜಿಲ್ಲೆಯಲ್ಲಿ ಶೇ.50ಕ್ಕೂ ಹೆಚ್ಚು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳು ಗ್ರಾಮೀಣ ಭಾಗದ ಸರ್ಕಾರಿ ಶಾಲೆಗಳಲ್ಲಿ ವಿದ್ಯಾಭ್ಯಾಸ ಮಾಡಲಾಗುತ್ತಿದ್ದು, ತಳಸಮುದಾಯದ ಈ ಮಕ್ಕಳು ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಹೆಚ್ಚಿನ

ದಾವಣಗೆರೆ | ನಗರದಲ್ಲಿ ಅಕ್ಟೋಬರ್ 20 ರಂದು ವಿದ್ಯುತ್ ವ್ಯತ್ಯಯ      

  ದಾವಣಗೆರೆ; .19 :  ಜಲಸಿರಿ ಕಾಮಗಾರಿಯನ್ನು ಹಮ್ಮಿಕೊಂಡಿರುವುದರಿಂದ  ಅ.20 ರಂದು ಬೆಳಿಗ್ಗೆ 10 ರಿಂದ ಸಂಜೆ 4 ಗಂಟೆಯವರೆಗೆ ಇಂಡಸ್ಟ್ರಿಯಲ್ ಏರಿಯ ಲೋಕಿಕೆರೆ ರಸ್ತೆ, ಸುಬ್ರಹ್ಮಣ್ಯನಗರ, ಎಸ್.ಎ .ರವೀಂದ್ರನಾಥ ಬಡಾವಣೆ ಮತ್ತು  ಸುತ್ತಮುತ್ತಲಿನ

ಚಿತ್ರದುರ್ಗ ಜಿಲ್ಲೆಯ ಮಳೆ ವರದಿ : ಜಿಲ್ಲೆಯಾದ್ಯಂತ 55 ಮನೆಗಳು ಭಾಗಶಃ ಹಾನಿ

  ಚಿತ್ರದುರ್ಗ. ಅ.19:  ಶುಕ್ರವಾರ ರಾತ್ರಿ ಸುರಿದ ಮಳೆ ವಿವರದನ್ವಯ ಚಿತ್ರದುರ್ಗ ಜಿಲ್ಲೆಯಲ್ಲಿ ಸರಾಸರಿ 7.8 ಮಿ.ಮೀ ಮಳೆಯಾಗಿದೆ. ಜಿಲ್ಲೆಯ ಚಳ್ಳಕೆರೆ ತಾಲ್ಲೂಕಿನಲ್ಲಿ 16 ಮಿ.ಮೀ, ಚಿತ್ರದುರ್ಗ ತಾಲ್ಲೂಕಿನಲ್ಲಿ 9.3 ಹಿರಿಯೂರು ತಾಲ್ಲೂಕು 8.3

error: Content is protected !!